Instagram Reshma: 'ಮುಸ್ಲಿಂ ಆಗಿ ಬೊಟ್ಟು ಇಡ್ತೀಯಾ? ಎಷ್ಟು ತಗೋತಿರಾ ಅಂತಾನೇ' ಗಿಚ್ಚಿ ಗಿಲಿಗಿಲಿ ರೇಷ್ಮಾಗೆ ಕಿರುಕುಳ!

Published : Sep 30, 2026, 11:27 AM IST
Reels Reshma

ಸಾರಾಂಶ

ಸೋಶಿಯಲ್ ಮೀಡಿಯಾ ಸ್ಟಾರ್ ಹಾಗೂ ನಟಿ ರೇಷ್ಮಾ ಅವರಿಗೆ ಭದ್ರಾವತಿ ಮೂಲದ ಫಯಾಜ್ ಎಂಬಾತ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ. ಆತ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದು, ಇದರಿಂದ ನಟಿಯ ಕುಟುಂಬಕ್ಕೆ ತೀವ್ರ ತೊಂದರೆಯಾಗಿದೆ. ಈ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಟಿ ಮುಂದಾಗಿದ್ದಾರೆ.

ಸೋಶಿಯಲ್ ಮೀಡಿಯಾ ಸ್ಟಾರ್, ಖಾಸಗಿ ರಿಯಾಲಿಟಿ ಶೋದಲ್ಲಿ ಭಾಗಿಯಾಗಿದ್ದ ನಟಿ ರೇಷ್ಮಾ ಅವರಿಗೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ನಟಿ ಇಂದು ಪೊಲೀಸರಿಗೆ ನೀಡಲು ಮುಂದಾಗಿದ್ದು, ತಮಗೆ ಶಿವಮೊಗ್ಗ ಮೂಲದ ಭದ್ರಾವತಿ ಫಯಾಜ್ ಎಂಬಾತ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ. ಇದರಿಂದ ನನಗೆ ಹಾಗೂ ಕುಟುಂಬಕ್ಕೆ ತೀವ್ರ ಸಮಸ್ಯೆ ಆಗ್ತಿದೆ ಎಂದು ಆರೋಪಿಸಿದ್ದಾರೆ.

ರಿಯಾಲಿಟಿ ಶೋ ನಟಿ ರೇಷ್ಮಾಗೆ ಕಂಟಕವಾದ ಆ ಅಪರಿಚಿತ ಯಾರು? ರೇಷ್ಮಾ ಹೇಳಿದ್ದೇನು?

ನಾನು ಯಾರು ಅಂತ ಬಹುತೇಕ ಮಂದಿಗೆ ಗೊತ್ತಿದೆ. ಕೆಲವರು ನನ್ನನ್ನು ಇನ್‌ಸ್ಟಾದಲ್ಲಿ ನೋಡಿದ್ದರೆ, ಇನ್ನರ್ಧ ಜನರಿಗೆ ನಾನು ಟಿವಿ ರಿಯಾಲಿಟಿ ಶೋ ಮೂಲಕ ಪರಿಚಯ ಆಗಿದ್ದೀನಿ. ಆದರೆ ಹೆಣ್ಣು ಮಕ್ಕಳು ಏನೋ ಬೆಳೆಯುತ್ತಿದ್ದಾರೆ ಅಂದರೆ ಅವರನ್ನು ತಿಳಿಯುವ ಕೆಲಸ ಮಾಡುತ್ತಾರೆ. ಕೆಟ್ಟದಾಗಿ ಕಾಮೆಂಟ್ ಮಾಡ್ತಾರೆ. ಕೆಟ್ಟದಾಗಿ ಟ್ರೋಲ್ ಮಾಡ್ತಾರೆ. ಯಾರೇ ಆದರೂ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಬೆಳೆದರೆ ಸಮಸ್ಯೆ ಇಲ್ಲ, ಆದರೆ ಇನ್ನೊಬ್ಬರನ್ನು ಕೆಟ್ಟದಾಗಿ ಬಿಂಬಿಸುವ ಮೂಲಕ ತಾವು ಫಾಲೋವರ್ಸ್ ಹೆಚ್ಚಿಸಿಕೊಳ್ಳುವುದು ಎಷ್ಟು ಸರಿ ಎಂದು ರೇಷ್ಮಾ ಪ್ರಶ್ನಿಸಿದ್ದಾರೆ.

ಅಸಲಿಗೆ ಆಗಿದ್ದೇನು?

ಯಾರೋ ಒಬ್ಬ ಫಯಾಜ್ ಅಂತೆ, ಆತ ಯಾರು ಅಂತಲೇ ನನಗೆ ಗೊತ್ತಿಲ್ಲ. ಭದ್ರವಾತಿ ಫಯಾಜ್ ಅಂತ ನನಗೆ ಗೊತ್ತಾಗಿದೆ. ಈತ ತನ್ನ ಸಾಮಾಜಿಕ ಜಾಲತಾಣದಲ್ಲಿ ಸಲ್ಮಾನ್ ಎಂಬ ಹೆಸರಿನೊಂದಿಗೆ ಅಕೌಂಟ್ ಕ್ರಿಯೇಟ್ ಮಾಡಿದ್ದಾನೆ. ಆತ ನನಗೆ ತೀವ್ರ ಕಿರುಕುಳ ನೀಡುತ್ತಿದ್ದಾನೆ. ಆತ ತನ್ನ ಹೆಂಡತಿ ಮಕ್ಕಳಿಗೆ ಊಟ ಹಾಕಲು ನನ್ನನ್ನು ಕೆಟ್ಟದಾಗಿ ಟ್ರೋಲ್ ಮಾಡ್ತಿದ್ದಾನೆ. ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಕೆಟ್ಟ ಕೆಟ್ಟದಾಗಿ ನನ್ನ ವಿಡಿಯೋಗಳನ್ನ ಮಾಡುತ್ತಿದ್ದಾನೆ. ಆತನ ಐಡಿಯಲ್ಲಿ ಎಲ್ಲವೂ ನನ್ನನ್ನು ಕೆಟ್ಟದಾಗಿ ತೋರಿಸಿ ಟ್ರೋಲ್ ಮಾಡುತ್ತಿದ್ದಾರೆ ಎಂದು ರೇಷ್ಮಾ ಆರೋಪಿಸಿದ್ದಾರೆ.

ಸಲ್ಮಾನ್ ಅಲಿಯಾಸ್ ಭದ್ರಾವತಿ ಫಯಾಜ್ ಎಂಬಾತನಿಂದ ಕಿರುಕುಳ!

ಟ್ರೋಲ್ ಮಾಡುವವರು ಸಾಕಷ್ಟು ಮಂದಿ ಇದ್ದರೆ, ಅವರಿಂದಲೇ ನಾವು ಸ್ವಲ್ಪ ಫೇಮಸ್ ಕೂಡ ಆಗಿದ್ದೇವೆ. ಟ್ರೋಲರ್ ಗಳನ್ನು ನನ್ನ ಪಾಲಿಗೆ ದೇವರು ಆಗಿದ್ದರು. ಆದರೆ ಈಗ ಈತ ತೀವ್ರವಾಗಿ ಕೆಟ್ಟದಾಗಿ ತೋರಿಸುವ ಕೆಲಸ ಮಾಡ್ತಿದ್ದಾನೆ. ಪದೇ ಪದೇ ಫೋನ್ ಮಾಡಿ ಕಿರುಕುಳ ಕೊಡುತ್ತಾನೆ. ನಾವು ದರ್ಗಾಗೆ ಹೋದರೆ ಎಲ್ಲರೂ ನಮ್ಮನ್ನು ಓಡಿಸಿಕೊಂಡು ಬರ್ತಿದ್ದಾರೆ. ನಾನು ಮುಸ್ಲಿಮ್ ಏರಿಯಾಗೆ ಹೋಗಲು ಆಗುತ್ತಿಲ್ಲ. ನಮಗೆ ಗೌರವ ಇಲ್ಲದಂತೆ ಮಾಡಿದ್ದಾನೆ. ನನಗೆ ಕೆಟ್ಟ ಕೆಟ್ಟ ಪದಗಳನ್ನು ಎಡಿಟ್ ಮಾಡಿ ಟ್ರೋಲ್ ಮಾಡ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸಲ್ಮಾನ್ ಖಾನ್, ಶಾರುಖ್ ಖಾನ್ ಮನೆಯಲ್ಲೂ ಗಣೇಶ ಮೂರ್ತಿ ಇಟ್ಟಿದ್ದಾರೆ ಅಲ್ವಾ?

ಒಳ್ಳೆಯ ದಾರಿಯಲ್ಲಿ ಜೀವನ ನಡೆಸಲು ಬಂದಿದ್ದೇವೆ. ಆದರೆ ಒಂದು ಸಣ್ಣ ರೀಲ್ಸ್ ಮಾಡಿದರೆ ಸಾಕು, ಕೆಟ್ಟದಾಗಿ ವಿಡಿಯೋ ಮಾಡಿ ಟ್ರೋಲ್ ಮಾಡ್ತಾರೆ. ನನಗೆ ಒಮ್ಮೆ ಫೋನ್ ಮಾಡಿ ನಮ್ಮ ಅಂಗಡಿ ಇದೆ, ಅದಕ್ಕೆ ಪ್ರಚಾರ ಮಾಡಬೇಕು ಎಷ್ಟು ಹಣ ತಗೋತೀರಿ ಎಂದು ಕೇಳಿದ್ದ, ಆಗ ನಾನು 10-15 ಸಾವಿರ ರೂಪಾಯಿ ತಗೋತಿವಿ. ಅಂಗಡಿಗೆ ಬೇಕಾಗಿರುವ ಪ್ರಚಾರ ಮಾಡುತ್ತೇವೆ ಎಂದು ಹೇಳಿದ್ದೆ. ಆದರೆ ಆ ವಿಡಿಯೋ ಇಟ್ಟುಕೊಂಡು ಕೆಟ್ಟದಾಗಿ ವಿಡಿಯೋ ಮಾಡಿದ್ದಾರೆ. ನನ್ನ ಮೊಬೈಲ್ ನಂಬರ್ ಹಲವರಿಗೆ ನೀಡಿದ್ದಾನೆ, ಹಲವು ನಂಬರ್ ಗಳಿಂದ ಫೋನ್ ಮಾಡಿ ಕಿರುಕುಳ ನೀಡುತ್ತಾರೆ.

ಆತನ ಮಾತನಾಡಿರುವ ಆಡಿಯೋ ನನ್ನ ಬಳಿ ಇದೆ. ನೀನು ಮುಸ್ಲಿಂ ಆಗಿದ್ದು, ಹಣೆಗೆ ಬೊಟ್ಟು ಇಟ್ಟುಕೊಳ್ಳಿತ್ತೀಯ.. ಕನ್ನಡ ಜನರ ತರ ಕುಣಿಯುತ್ತೀಯಾ.. ರಸ್ತೆಯಲ್ಲಿ ಡ್ಯಾನ್ಸ ಮಾಡ್ತೀಯಾ ಎಂದು ಕಿರುಕುಳ ನೀಡಿದ್ದ. ಆದರೆ ಇದು ನನಗೆ, ನನ್ನ ಕುಟುಂಬಕ್ಕೆ ಊಟ ಕೊಡುತ್ತಿದೆ. ನಟನೆಯನ್ನು ಒಂದು ವೃತ್ತಿಯಾಗಿ ಮಾಡುತ್ತಿದ್ದೇನೆ. ಸಲ್ಮಾನ್ ಖಾನ್, ಶಾರುಖ್ ಖಾನ್ ಮನೆಯಲ್ಲೂ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಾರೆ ಅಲ್ವಾ? ಅವರಿಗೂ ಇದೇ ರೀತಿ ಕೇಳಲು ಆಗುತ್ತಾ? ಎಂದು ರೇಷ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬನಶಂಕರಿ ಪೊಲೀಸರಿಗೆ ದೂರು ನೀಡಲು ಮುಂದಾದ ರೇಷ್ಮಾ!

ಈಗ ನಾವು ಬನಶಂಕರಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದೇನೆ. ಆತನ ವಿರುದ್ಧ ಕ್ರಮಕೈಗೊಳ್ಳಲು ಮನವಿ ಮಾಡಿದ್ದೇನೆ. ಆತನ ಕಿರುಕುಳಕ್ಕೆ ನಾವು ಕೆಲಸಕ್ಕೆ ಹೋಗಲು ಆಗುತ್ತಿಲ್ಲ. ನನ್ನ ಮಕ್ಕಳು ನಮಾಜ್ ಮಾಡಲು ಹೋಗಲು ಆಗುತ್ತಿಲ್ಲ. ಫಯಾಜ್ ಯಾರು ಅಂತ ನನಗೆ ಗೊತ್ತಿಲ್ಲ, ಆತನ ಪರಿಚಯ ನನಗೆ ಇಲ್ಲ. ಆದರೆ ಆತನಿಗೆ ನನ್ನ ನಂಬರ್ ಹೇಗೆ ಸಿಕ್ತು ಗೊತ್ತಿಲ್ಲ. ಫೋನ್ ಮಾಡಿ ಕಿರುಕುಳ ನೀಡಲಾಗುತ್ತಿದೆ. ಆತ ನನ್ನ ನಂಬರ್ ಹಲವರಿಗೆ ನೀಡಿದ್ದಾನೆ. ನೀವು ಎಷ್ಟು ತಗೋತಿರಾ ಅಂತ ಕೇಳುತ್ತಾನೆ. ನನ್ನೊಂದಿಗೆ ರೀಲ್ಸ್ ಮಾಡುವ ಜೊತೆ ಕೆಟ್ಟದಾಗಿ ಸಂಬಂಧ ಕ್ರಿಯೇಟ್ ಮಾಡುತ್ತಿದ್ದಾನೆ. ಆದರೆ ನಾನು ಏನು ಅಂತ ನನ್ನ ಗಂಡನಿಗೆ ಗೊತ್ತಿದೆ. ಆದರೆ ಹೆಣ್ಣು ಮಕ್ಕಳಿಗೆ ಈ ರೀತಿ ಮಾಡುವುದು ತಪ್ಪು ಎಂದು ರೇಷ್ಮಾ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Jr NTR: 'ಯಂಗ್ ಟೈಗರ್' ಹೊಸ ಸಿನಿಮಾದ ಬಗ್ಗೆ ಹೊರಬಿತ್ತು ಪ್ರಮುಖ ಅಪ್‌ಡೇಟ್; ಯಾರು ಡೈರೆಕ್ಟರ್?
ಅಮೆರಿಕಾ AI ಕಂಪನಿಗೆ ₹7,000 ಕೋಟಿ ಲೀಗಲ್ ನೋಟಿಸ್ ಕಳಿಸಿ ಶಾಕ್ ಕೊಟ್ಟ ಊರ್ವಶಿ ರೌಟೇಲಾ.. ಆಗಿದ್ದೇನು?