
ಮುಂಬೈ(ಜು.24): ಅಶ್ಲೀಲ ಚಿತ್ರಗಳ ಪ್ರದರ್ಶನಕ್ಕೆಂದೇ ಆ್ಯಪ್ ಬಿಡುಗಡೆ ಮಾಡಿದ್ದ ಉದ್ಯಮಿ ರಾಜ್‌ಕುಂದ್ರಾ, ಶೀಘ್ರವೇ ತಾವು ಹೊಸದಾಗಿ ಬಿಡುಗಡೆ ಮಾಡಲಿರುವ ಆ್ಯಪ್ ಉದ್ಘಾಟನೆಗೆ, ತನ್ನ ಪತ್ನಿ ಶಿಲ್ಪಾ ಶೆಟ್ಟಿಸೋದರಿ ಶಮಿತಾ ಶೆಟ್ಟಿಬಳಸಿಕೊಳ್ಳಲು ನಿರ್ಧರಿಸಿದ್ದ ಎಂದು ನಟಿ ಗೆಹನಾ ವಸಿಷ್ಠ ಹೇಳಿದ್ದಾರೆ.
ಬಾಲಿಫೇಮ್ ಎಂಬ ಹೊಸ ಆ್ಯಪ್ ಬಿಡುಗಡೆಗೆ ಕುಂದ್ರಾ ಸಿದ್ಧತೆ ನಡೆಸಿದ್ದರು. ಅದರಲ್ಲಿ ಚಾಟ್ ಶೋ, ರಿಯಾಲಿಟಿ ಶೋ, ಮ್ಯೂಸಿಕ್ ವಿಡಿಯೋ ಬಿಡುಗಡೆಗೆ ನಿರ್ಧರಿಸಿದ್ದರು. ಜೊತೆಗೆ ಅದರಲ್ಲಿ ಬಿಡುಗಡೆ ಮಾಡುವ ಚಿತ್ರವೊಂದರಲ್ಲಿ ಶಮಿತಾ ಶೆಟ್ಟಿನಾಯಕಿಯಾಗಿ ಅಭಿನಯಿಸುವುದೆಂದು ನಿರ್ಧಾರವಾಗಿತ್ತು. ಆದರೆ ಅದರಲ್ಲಿ ಹಸಿಬಿಸಿ ದೃಶ್ಯಗಳನ್ನು ಸೇರಿಸುವ ಉದ್ದೇಶ ಇರಲಿಲ್ಲ ಎಂದು ಗೆಹನಾ ಹೇಳಿದ್ದಾರೆ.
ಕೊನೆಗೂ ಮೌನ ಮುರಿದ ಶಿಲ್ಪಾ
ತಮ್ಮ ಪತಿ ಬಂಧನದ ಬಳಿಕ ಮೊದಲ ಬಾರಿಗೆ ನಟಿ ಶಿಲ್ಪಾ ಶೆಟ್ಟಿಪ್ರತಿಕ್ರಿಯೆ ನೀಡಿದ್ದಾರೆ. ‘ನಮಗೆ ಹತಾಶೆ ಉಂಟಾದರೆ, ಯಾರಾದರೂ ನೋವುಂಟು ಮಾಡಿದರೆ ನಾವು ಕೋಪದಿಂದ ಹಿಂದಿರುಗಿ ನೋಡುತ್ತೇವೆ. ರೋಗ ಬಂದಾಗ, ನಮ್ಮವರು ತೀರಿಕೊಂಡಾಗ, ನಮ್ಮ ಕೆಲಸ ಕಳೆದುಕೊಂಡಾಗ ನಾವು ಭಯದಿಂದ ಎದರು ನೋಡುತ್ತೇವೆ. ಏನು ನಡೆಯಿತೋ ಅಥವಾ ಏನು ನಡೆದಲಿದೆಯೋ ಎಂದು ಈಗ ನಾವು ಆತಂಕದಿಂದ ಇರಬೇಕಾಗಿಲ್ಲ. ಆದರೆ ಜಾಗೃತರಾಗಿರಬೇಕಾಗಿದೆ. ನಾನಿನ್ನೂ ಜೀವಿಸಿದ್ದೇನೆ ಎಂದು ತಿಳಿದು ದೀರ್ಘ ಶ್ವಾಸ ಎಳೆದೆ. ನಾನು ಈ ಮೊದಲೂ ಸವಾಲುಗಳನ್ನು ಎದುರಿಸಿದ್ದೇನೆ ಹಾಗೂ ಭವಿಷ್ಯದಲ್ಲೂ ಸವಾಲುಗಳನ್ನು ಎದುರಿಸಲಿದ್ದೇನೆ’ ಎಂಬ ಅಮೇರಿಕಾದ ಲೇಖಕ ಜೇಮ್ಸ್ ಥರ್ಬರ್ ಅವರ ಪೋಸ್ಟ್‌ವೊಂದನ್ನು ಇನ್ಸಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.