ಚಿತ್ರೀಕರಣದ ವೇಳೆ ಕುಸಿದು ಬಿದ್ದ ನಟಿ ಆಲಿಯಾ ಭಟ್; ಹೈ ಸೆಕ್ಯೂರಿಟಿ ನೀಡಿ ಅಸ್ಪತ್ರೆಯಲ್ಲಿ ಚಿಕಿತ್ಸೆ!

Suvarna News   | Asianet News
Published : Jan 19, 2021, 02:31 PM IST
ಚಿತ್ರೀಕರಣದ ವೇಳೆ ಕುಸಿದು ಬಿದ್ದ ನಟಿ ಆಲಿಯಾ ಭಟ್; ಹೈ ಸೆಕ್ಯೂರಿಟಿ ನೀಡಿ ಅಸ್ಪತ್ರೆಯಲ್ಲಿ ಚಿಕಿತ್ಸೆ!

ಸಾರಾಂಶ

ಗಂಗೂಬಾಯಿ ಕಥಿಯಾವಾಡಿ ಚಿತ್ರೀಕರಣದ ವೇಳೆಯೇ ಆಲಿಯಾ ಭಟ್ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಚಿತ್ರತಂಡದ ಸಹಾಯದಿಂದ ಮುಂಬೈನ ಆಸ್ಪತ್ರೆಗೆ ದಾಖಲು...  

ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ 'ಗಂಗೂಬಾಯಿ ಕಥಿಯಾವಾಡಿ' ಸಿನಿಮಾ ಚಿತ್ರೀಕರಣದ ವೇಳೆ ಆಲಿಯಾ ಭಟ್ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಚಿತ್ರತಂಡ ಆಲಿಯಾರನ್ನು ಮುಂಬೈನ ಆಸ್ಪತ್ರೆಗೆ ದಾಖಲು ಮಾಡಿದೆ. ಚಿಕಿತ್ಸೆಯಲ್ಲಿರುವ ಆಲಿಯಾರನ್ನು ಮೀಡಿಯಾ ಹಾಗೂ ಅಭಿಮಾನಿಗಳಿಂದ ದೂರವಿಡಲು ಹೈ ಸೆಕ್ಯೂರಿಟಿ ನೀಡಲಾಗಿದೆ.

ಖಾಸಗಿ ವೆಬ್‌ಪೋರ್ಟಲ್‌ ವರದಿ ಮಾಡಿರುವ ಪ್ರಕಾರ ಆಲಿಯಾ ನಿರಂತರವಾಗಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ ,ದೇಹಕ್ಕೆ ರೆಸ್ಟ್‌ ಸಿಗದ ಕಾರಣ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಯಲ್ಲಿ ಒಂದು ದಿನದ ಮಟ್ಟಿಗೆ ವಿಶ್ರಾಂತಿ ಪಡೆದುಕೊಂಡು ಆಲಿಯಾ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ಭಾವಿ ಅತ್ತೆ ನೀತು ಸಿಂಗ್‌ ಜೊತೆ ಆಲಿಯಾ ಭಟ್‌ ಫೋಟೋ ವೈರಲ್‌! 

ಕೆಲ ತಿಂಗಳುಗಳ ಹಿಂದೆ ರಾಜಮೌಳಿ ಆಕ್ಷನ್ ಕಟ್ ಹೇಳುತ್ತಿರುವ ಆರ್‌ಆರ್‌ಆರ್‌  ಚಿತ್ರಕ್ಕೆಂದು ಹೈದರಾಬಾದ್‌ಗೆ ತೆರಳಿದ ಆಲಿಯಾ  ಬ್ರೇಕ್‌ ತೆಗೆದುಕೊಳ್ಳದೆ ಗಂಗೂಬಾಯಿ ಸೆಟ್‌ ಸೇರಿಕೊಂಡರು. ಆರಂಭದಿಂದಲೂ ಆಲಿಯಾ ಗುಣವೇ ಹಾಗೆ ತನ್ನ ಕೈಯಲ್ಲಿರುವ ಸಿನಿಮಾಗೆ ಶ್ರಮ ಮೀರಿ ಕೆಲಸ ಮಾಡುತ್ತಾರೆ. ಕಥೆ ಹಿಟ್ ಆಗಲೇ ಬೇಕು ನಿರ್ದೇಶಕರಿಗೆ ಲಕ್ಕಿ ಸಿನಿಮಾ ಇದಾಲೇ ಬೇಕು ಎಂಬುದು ಆಲಿಯಾ ಮೋಟೋ ಆಗಿರುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನನ್ನ ಅರ್ಧ ವಯಸ್ಸಿನ ಹುಡುಗರು ಡೇಟಿಂಗ್‌ಗೆ ಕರೀತಿದ್ದಾರೆ.. 50 ಆದ್ರೂ ಮದುವೆಗೆ ರೆಡಿ: ನಟಿ ಅಮೀಶಾ ಪಟೇಲ್
ಬಾಲಯ್ಯರಿಂದ ಅನಿರೀಕ್ಷಿತ ಸರ್ಪ್ರೈಸ್.. ಅಖಂಡ 2 ಹೊಸ ರಿಲೀಸ್ ಡೇಟ್ ಫಿಕ್ಸ್: ಈ ಚಿತ್ರಗಳಿಗೆ ದೊಡ್ಡ ಹೊಡೆತ