ವಿಶ್ವದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿ ಪ್ರಕಟ, ದಿ ರಾಕ್‌ ನಂ.1

Published : Mar 02, 2025, 06:05 PM ISTUpdated : Mar 02, 2025, 06:20 PM IST
ವಿಶ್ವದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿ ಪ್ರಕಟ, ದಿ ರಾಕ್‌ ನಂ.1

ಸಾರಾಂಶ

ವಿಶ್ವದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ದಿ ರಾಕ್ ಖ್ಯಾತಿಯ ಡ್ವೇನ್ ಜಾನ್ಸನ್ ಮೊದಲ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಸ್ಟಾರ್ಸ್ ಯಾರಿದ್ದಾರೆ?

ನವದೆಹಲಿ(ಮಾ.2) ಫೋರ್ಬ್ಸ್ ಈಗಾಗಲೇ ಶ್ರೀಮಂತ ಉದ್ಯಮಿಗಳು, ಯುವ ಉದ್ಯಮಿಗಳು, ಶ್ರೀಮಂತ ರಾಜಕಾರಣಗಳು ಸೇರಿದಂತೆ ಹಲವು ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದೆ. ಇದೀಗ ವಿಶ್ವದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ರಸ್ಲರ್ ಕಮ್ ನಟ ದಿ ರಾಕ್ ಖ್ಯಾತಿಯ ಡ್ವೇನ್ ಜಾನ್ಸನ್ ಮೊದಲ ಸ್ಥಾನದಲ್ಲಿದ್ದಾರೆ. 2024ರಲ್ಲಿ ಗರಿಷ್ಠ ಸಂಭಾವನೆ ಪಡೆದ ನಟರ ಪೈಕಿ ಡ್ವೇನ್ ಜಾನ್ಸನ್ ಮೊದಲ ಸ್ಥಾನದಲ್ಲಿದ್ದಾರೆ. 2024ರಲ್ಲಿ ದಿ ರಾಕ್ ಬರೋಬ್ಬರಿ 88 ಮಿಲಿಯನ್ ಸಂಭಾವನೆ ಪಡೆದಿದ್ದಾರೆ.  ಅಂದರೆ ಬರೋಬ್ಬರಿ 769 ಕೋಟಿ ರೂಪಾಯಿ. 

ಅಲ್ಲು ಅರ್ಜುನ್ ಪುಷ್ಪಾ 2 ಚಿತ್ರಕ್ಕೆ ಪಡೆದ ಸಂಭಾವನೆ ಬರೋಬ್ಬರಿ 300 ಕೋಟಿ ರೂಪಾಯಿ. ಆದರೆ ಇದರ ದುಪ್ಪಟ್ಟು ಹಣವನ್ನು ಡ್ವೇನ್ ಜಾನ್ಸನ್ ಸಂಭಾವನೆ ರೂಪದಲ್ಲಿ ಪಡೆದಿದ್ದಾರೆ. ನೆನಪಿರಲಿ ಇದು ಒಂದು ಚಿತ್ರಕ್ಕೆ ಪಡೆದ ಸಂಭಾವನೆಯಾಗಿದೆ. ಇನ್ನು 2024ರಲ್ಲಿ ಡ್ವೇನ್ ಜಾನ್ಸನ್ ಒಟ್ಟು ಸಂಭಾವನೆ ಸರಿಸುಮಾರು 900 ಕೋಟಿ ರೂಪಾಯಿ. ಹಾಗಂತ ಡ್ವೇನ್ ಜಾನ್ಸನ್ ಇದೇ ಮೊದಲ ಬಾರಿಗೆ ಫೋರ್ಬ್ಸ್ ಪಟ್ಟಿಯಲ್ಲಿ ಗರಿಷ್ಠ ಸಂಭಾವನೆ ಪಟ್ಟಿಯಲ್ಲಿ ಕಾಣಸಿಕೊಳ್ಳುತ್ತಿಲ್ಲ. ಈ ರೀತಿ ಗರಿಷ್ಠ ಸಂಭಾವನೆ ಪಟ್ಟಿಯಲ್ಲಿ 5ನೇ ಬಾರಿಗೆ ಡ್ವೇನ್ ಜಾನ್ಸನ್ ಮೊದಲ ಸ್ಥಾನ ಅಲಂಕರಿಸುತ್ತಿದ್ದಾರೆ. ವಿಶೇಷ ಅಂದರೆ 2019, 2020 ಹಾಗೂ 2021ರಲ್ಲಿ ಸತತ ಮೂರು ವರ್ಷ ಪೋರ್ಬ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದರು. ಕಳೆದ ವರ್ಷ ದಿ ಡ್ಪೇನ್ ಜಾನ್ಸನ್ ರೆಡ್ ಒನ್, ಮೋನಾ2 ಚಿತ್ರಗಳಿಂದ ಭರ್ಜರಿ ಸಂಭಾವನೆ ಪಡೆದಿದ್ದಾರೆ.

ಟಾಲಿವುಡ್‌ನ ಫಸ್ಟ್ ಜನರೇಷನ್ ಹೀರೋಗಳ ಸಂಭಾವನೆ! ಅತಿ ಹೆಚ್ಚು ಹಣ ಕೇಳ್ತಿದ್ದವರು ಯಾರು?

ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಗರಿಷ್ಠ ಸಂಭಾವನೆ ಪಡೆದ ನಟರು(ಟಾಪ್ 10)
ಡ್ವೇನ್ ಜಾನ್ಸನ್: 88 ಮಿಲಿಯನ್ ಅಮೆರಿಕನ್ ಡಾಲರ್
ರ್ಯಾನ್ ರೇನೋಲ್ಡ್ಸ್: 88 ಮಿಲಿಯನ್ ಅಮೆರಿಕನ್ ಡಾಲರ್
ಕೇವಿನ್ ಹಾರ್ಟ್:  81 ಮಿಲಿಯನ್ ಅಮೆರಿಕನ್ ಡಾಲರ್
ಜೆರಿ ಸೈನ್‌ಫೀಲ್ಡ್:  60 ಮಿಲಿಯನ್ ಅಮೆರಿಕನ್ ಡಾಲರ್
ಹಗ್ ಜಾಕ್‌ಮನ್:  50 ಮಿಲಿಯನ್ ಅಮೆರಿಕನ್ ಡಾಲರ್
ಬ್ರಾಡ್ ಪಿಟ್ : 32 ಮಿಲಿಯನ್ ಅಮೆರಿಕನ್ ಡಾಲರ್
ಜಾರ್ಜ್ ಕ್ಲೂನಿ : 31 ಮಿಲಿಯನ್ ಅಮೆರಿಕನ್ ಡಾಲರ್
ನಿಕೋಲ್ ಕಿಡ್‌ಮನ್: 21 ಮಿಲಿಯನ್ ಅಮೆರಿಕನ್ ಡಾಲರ್
ಆ್ಯಡಮ್ ಸ್ಯಾಂಡ್ಲರ್: 26 ಮಿಲಿಯನ್ ಅಮೆರಿಕನ್ ಡಾಲರ್
ವಿಲ್ ಸ್ಮಿತ್: 26 ಮಿಲಿಯನ್ ಅಮೆರಿಕನ್ ಡಾಲರ್ 

ಟಾಪ್ 10 ಪಟ್ಟಿಯಲ್ಲಿ ಭಾರತದ ಯಾವುದೇ ಸ್ಟಾರ್ಸ್ ಸ್ಥಾನ ಪಡೆದಿಲ್ಲ. ಆದರೆ ಭಾರತೀಯ ಸ್ಟಾರ್ಸ್ ಪೈಕಿ ಗರಿಷ್ಠ ಸಂಭಾವನೆ ಪಡೆದ ಪಟ್ಟಿಯಲ್ಲಿ ಅಲ್ಲು ಅರ್ಜುುನ್ ಮೊದಲ ಸ್ಥಾನದಲ್ಲಿದ್ದಾರೆ. ಹೊಸ ದಾಖಲೆ ಸೃಷ್ಟಿಸಿದ ಪುಷ್ಪಾ 2 ಚಿತ್ರಕ್ಕಾಗಿ ಅಲ್ಲು ಅರ್ಜುನ್ 300 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ತಮಿಳು ಸ್ಟಾರ್ ಜೊಸೆಫ್ ವಿಜಯ್ 2ನೇ ಸ್ಥಾನದಲ್ಲಿದ್ದಾರೆ. 130 ರಿಂದ 275 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.

ಗರಿಷ್ಠ ಸಂಭಾವನೆ ಪಡೆದ ಭಾರತೀಯ ನಟರು
ಅಲ್ಲು ಅರ್ಜುನ್: 300 ಕೋಟಿ ರೂಪಾಯಿ
ಜೊಸೆಫ್ ವಿಜಯ್: 130 ರಿಂದ 275 ಕೋಟಿ ರೂಪಾಯಿ
ಶಾರುಖ್ ಖಾನ್ : 150 ರಿಂದ 250 ಕೋಟಿ ರೂಪಾಯಿ
ರಜನಿಕಾಂತ್:  125 ರಿಂದ 270 ಕೋಟಿ ರೂಪಾಯಿ
ಅಮಿರ್ ಖಾನ್: 100 ರಿಂದ 275 ಕೋಟಿ ರೂಪಾಯಿ
ಪ್ರಭಾಸ್: 100 ರಿಂದ 200 ಕೋಟಿ ರೂಪಾಯಿ
ಅಜಿತ್ ಕುಮಾರ್:  100 ರಿಂದ 165 ಕೋಟಿ ರೂಪಾಯಿ
ಸಲ್ಮಾನ್ ಖಾನ್:  100 ರಿಂದ 150 ಕೋಟಿ ರೂಪಾಯಿ
ಕಮಲ್ ಹಸನ್: 100 ರಿಂದ 150 ಕೋಟಿ ರೂಪಾಯಿ
ಅಕ್ಷಯ್ ಕುಮಾರ್:  60 ರಿಂದ 145 ಕೋಟಿ ರೂಪಾಯಿ

2024 ಹಾೂಗೂ 2025ರ ಆರಂಭದಲ್ಲಿ ಬಿಡುಗಡೆಯಾದ ಚಿತ್ರಕ್ಕೆ ಪಡೆದ ಸಂಭಾವನೆ ಪಟ್ಟಿ ಇದು. ಈ ಪಟ್ಟಿಯಲ್ಲಿ ಕಾಂತಾರ 1 ಚಾಪ್ಟರ್ ಚಿತ್ರದ ಸೇರಿಲ್ಲ. ಮೂಲಗಳ ಪ್ರಕಾರ ಕಾಂತಾರ 1 ಚಿತ್ರಕ್ಕೆ ರಿಷಬ್ ಶೆಟ್ಟಿ ಗರಿಷ್ಠ ಸಂಭಾವನೆ ಪಡೆಯುತ್ತಿದ್ದಾರೆ. 

ಸಲ್ಮಾನ್ ಖಾನ್ ನಿವ್ವಳ ಆಸ್ತಿ ಮೌಲ್ಯ ಇಷ್ಟೊಂದಾ? ನಟನ ಬಳಿ ಏನೇನೆಲ್ಲ ಇವೆ ಅಂದ್ರೆ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?