ಖುಷ್ಬೂ ಆಯ್ತು ಈಗ ಸಮಂತಾಗೆ ದೇವಸ್ಥಾನ ಕಟ್ಟಿಸಿದ ಅಭಿಮಾನಿ; ವಿಶೇಷ ಪೂಜೆ ಮೂಲಕ ಉದ್ಘಾಟನೆ

Published : Apr 29, 2023, 04:19 PM IST
ಖುಷ್ಬೂ ಆಯ್ತು ಈಗ ಸಮಂತಾಗೆ ದೇವಸ್ಥಾನ ಕಟ್ಟಿಸಿದ ಅಭಿಮಾನಿ; ವಿಶೇಷ ಪೂಜೆ ಮೂಲಕ ಉದ್ಘಾಟನೆ

ಸಾರಾಂಶ

ಖುಷ್ಬೂ ಆಯ್ತು ಈಗ ಸಮಂತಾಗೆ ಅಭಿಮಾನಿಯೊಬ್ಬ ದೇವಸ್ಥಾನ ಕಟ್ಟಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ಸಮಂತಾ ದೇವಸ್ಥಾನ ನಿರ್ಮಾಣವಾಗಿದ್ದು ಉದ್ಘಾಟನೆ ಕೂಡ ಆಗಿದೆ.

ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಸಮಂತಾ ರುತ್ ಪ್ರಭು ಕೂಡ ಒಬ್ಬರು. ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿರುವ ಸಮಂತಾ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಅದ್ಭುತ ನಟನೆ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಸಮಂತಾ. ಸಮಂತಾ ಕ್ರೇಸ್ ಎಚ್ಚರ ಮಟ್ಟಿಗೆ ಇದೆ ಎಂದರೆ ಇದೀಗ ಅಭಿಮಾನಿಗಳು ಅವರಿಗಾಗಿ ದೇವಸ್ಥಾನ ಕಟ್ಟಿಸಿದ್ದಾರೆ. ನಟಿಯರ ಹೆಸರಲ್ಲಿ ಹೀಗೆ ದೇವಸ್ಥಾನ ಕಟ್ಟಿಸಿರುವುದು ಇದೇ ಮೊದಲಲ್ಲ. ಈ ಮೊದಲು ತಮಿಳುನಾಡಿನಲ್ಲಿ ಖ್ಯಾತ ನಟಿ ಖುಷ್ಬೂ, ನಿಧಿ ಆಗರ್ವಾಲ್ ಮತ್ತು ಹನ್ಸಿಕಾ ಅವರಿಗಾಗಿ ಅಭಿಮಾನಿಗಳು ದೇವಸ್ಥಾನ ಕಟ್ಟಿಸಿದ್ದರು. ಇದೀಗ ಆಂಧ್ರಪ್ರದೇಶದಲ್ಲೂ ಇಂಥ ಅಭಿಮಾನ ಸುರುವಾಗಿದೆ.   

ಸಮಂತಾ ಅವರ ಹಾರ್ಡ್‌ಕೋರ್ ಅಭಿಮಾನಿ ತನಾಲಿ ಸಂದೀಪ್ ಈ ಕೆಲಸ ಮಾಡಿದ್ದಾರೆ. ಆಂಧ್ರಪ್ರದೇಶದ ಬಬಟ್ಲಾ ಜಿಲ್ಲೆಯ ಅಲಪಾಡು ಎಂಬಲ್ಲಿ ಸಮಂತಾ ದೇವಸ್ಥಾನ ನಿರ್ಮಾಣವಾಗಿದೆ. ಗರ್ಭಗುಡಿಯಲ್ಲಿ ಸಮಂತಾ ಅವರ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಇತ್ತೀಚೆಗಷ್ಟೆ ಸಮಂತಾ ದೇವಸ್ಥಾನವನ್ನು ಅದ್ದೂರಿಯಾಗಿ ಅದ್ಘಾಟನೆ ಮಾಡಲಾಗಿದೆ. ವಿಶೇಷ ಪೂಜೆ ಮೂಲಕ ದೇವಸ್ಥಾನ ಉದ್ಘಾಟನೆಗೊಂಡಿದೆ. ಉದ್ಘಾಟನ ಕಾರ್ಯಕ್ರಮದಲ್ಲಿ ಅನೇಕ ಅಭಿಮಾನಿಗಳು ಭಾಗಿಯಾಗಿದ್ದರು. 

ಅಂದಹಾಗೆ ಸಂದೀಪ್ ಅವರು ಈ ದೇವಸ್ಥಾನ ಕಟ್ಟಿಸಿದ್ದು ಅವರ ಸಿನಿಮಾ ಅಥವಾ ನಟನೆಯ ಅಭಿಮಾನಿಯಾಗಿ ಅಷ್ಟೆಯಲ್ಲ ಅವರ ಚಾರಿಟಿಯಿಂದ ಬಡವರು ಮತ್ತು ನಿರ್ಗತಿಕರಿಗೆ ಮಾಡುತ್ತಿರುವ ಸಹಾಯವನ್ನು ನೋಡಿ ದೇವಸ್ಥಾನ ನಿರ್ಮಿಸಿದ್ದಾರೆ.    

ಡಿಯರೆಸ್ಟ್ ಸಮಂತಾ... ನಿಮ್ಮ ಬಗ್ಗೆ ತುಂಬಾ ಹೆಮ್ಮೆಯಿದೆ: ರಾಮ್ ಚರಣ್ ಪ್ರೀತಿಯ ವಿಶ್

ಮಯೋಸಿಟಿಸ್‌ ನಿಂದ ಸಮಂತಾ ಬಳಲುತ್ತಿದ್ದಾರೆ ಎನ್ನುವ ವಿಚಾರ ತಿಳಿದ ಬಳಿಕ ಅಭಿಮಾನಿ ಸಂದೀಪ್, ತಿರುಪತಿ, ಚೆನ್ನೈ, ವೆಲಂಕಣಿ ಮತ್ತು ಕಡಪಾ ಸೇರಿದಂತೆ ಅನೇಕ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಸಮಂತಾ ಬೇಗ ಚೇತರಿಸಿಕೊಳ್ಳಲಿ ಎಂದು ವಿಶೇಷ ಪೂಜೆಗಳನ್ನು ಸಹ ಮಾಡಿಸಿದ್ದಾರೆ. ಇದೀಗ ದೇವಸ್ಥಾನ ನಿರ್ಮಿಸಿದ್ದಾರೆ. ತನಗಾಗಿ ನಿರ್ಮಾಣವಾಗಿರುವ ದೇವಸ್ಥಾನದ ಬಗ್ಗೆ ಸಮಂತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸ್ಯಾಮ್ ಸದ್ಯ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಸಮಂತಾ ಸದ್ಯ ಸಿಟಾಡೆಲ್ ವೆಬ್ ಸೀರಿಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಿಟಾಡೆಲ್ ಹಿಂದಿ ವರ್ಷನ್‌ನಲ್ಲಿ ಸಮಂತಾ ನಟಿಸುತ್ತಿದ್ದಾರೆ. ವೆಬ್ ಸೀರಿಸ್‌ಗೆ ರಾಜ್ ಮತ್ತು ಡಿಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವರುಣ್ ಧವನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ. ಈ ಸಿನಿಮಾ ಜೊತೆಗೆ ಸಮಂತಾ ತೆಲುಗಿನಲ್ಲಿ ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಜೊತೆ ಸಮಂತಾ ನಟಿಸುತ್ತಿದ್ದಾರೆ. ಕೊನೆಯದಾಗಿ ಸಮಂತಾ ಶಾಕುಂತಲಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಆ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ.  
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಜೊತೆ ರಾಜಮೌಳಿ ಯಾಕೆ ಸಿನಿಮಾ ಮಾಡಿಲ್ಲ? ಕಾರಣ ಕೇಳಿದ್ರೆ ಆಶ್ಚರ್ಯಪಡ್ತೀರಾ!
ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?