ಸ್ಟಾರ್ ನಟಿ ಹೇಮಾ ಬಂಧನ; ಬುರ್ಖಾ ಧರಿಸಿ ಬಂದರೂ ಬಿಡದ ಬೆಂಗಳೂರು ಪೊಲೀಸರು

By Sathish Kumar KH  |  First Published Jun 3, 2024, 5:30 PM IST

ಬೆಂಗಳೂರಿನಲ್ಲಿ ಅಕ್ರಮವಾಗಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿ ಪೊಲೀಸರನ್ನೇ ಯಾಮಾರಿಸಿದ್ದ ತೆಲುಗು ಖ್ಯಾತ ನಟಿ ಹೇಮಾ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.


ಬೆಂಗಳೂರು (ಜೂ.03):  ಬೆಂಗಳೂರಿನಲ್ಲಿ ಅಕ್ರಮವಾಗಿ ನಡೆಸಲಾಗಿದ್ದ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿದ್ದ ಖ್ಯಾತ ತೆಲುಗು ನಟಿ ಹೇಮಾ ಕೊಲ್ಲಂ ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಬಳಿಯ ಜಿ.ಆರ್. ಫಾರ್ಮ್‌ಹೌಸ್‌ನಲ್ಲಿ ಬರ್ತಡೇ ಪಾರ್ಟಿ ಹೆಸರಲ್ಲಿ ಅಕ್ರಮವಾಗಿ ರೇವ್ ಪಾರ್ಟಿ ಮಾಡಿ ಡ್ರಗ್ಸ್ ಸೇವಿಸಿದ್ದ ನಟಿ ಹೇಮಾ, ಸಿಸಿಬಿ ಪೊಲೀಸರ ವಶದಲ್ಲಿರುವಾಗಲೇ ತಾನು ಬೆಂಗಳೂರಿನಲ್ಲಿಲ್ಲ. ಟಿವಿಯಲ್ಲಿ ಪ್ರಸಾರ ಆಗುತ್ತಿರುವುದೆಲ್ಲಾ ಸುಳ್ಳು ಸುದ್ದಿ. ನಾನು ಹೈದರಾಬಾದ್‌ನಲ್ಲಿದ್ದೇನೆ ಎಂದು ಪೊಲೀಸರು, ಮಾಧ್ಯಮಗಳು ಹಾಗೂ ಅಭಿಮಾನಿಗಳ ದಿಕ್ಕು ತಪ್ಪಿಸಿದ್ದ ನಟಿ ಹೇಮಾ ಈಗ ಡ್ರಗ್ಸ್ ಸೇವಿಸಿ ಪೊಲೀಸರಿಗೆ ಸಿಕ್ಕಿಬಿದ್ದು ಬಂಧನವಾಗಿದ್ದಾರೆ. ರೇವ್‌ ಪಾರ್ಟಿಯಲ್ಲಿ ಭಾಗಿಯಾಗಿ ಸಿಸಿಬಿ ಪೊಲೀಸರ ದಾಳಿ ವೇಳೆ ಸಿಕ್ಕಿಬಿದ್ದಿದ್ ನಟಿ ಹೇಮಾ ಅವರು ತಾನು ಡ್ರಗ್‌ಸ್ ಸೇವಿಸಿಲ್ಲ ಎಂದು ಪೊಲೀಸರಿಗೆ ಅವಾಜ್ ಹಾಕಿದ್ದರು. ಈ ವೇಳೆ ಹಲವರಿಗೆ ಕರೆ ಮಾಡಿ ರೆಕೆಮೆಂಡ್ ಮಾಡಿಸಿಕೊಂಡು ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನವನ್ನೂ ಮಾಡಿದ್ದರು. ಆದರೆ, ಸಿಸಿಬಿ ಪೊಲೀಸರಿಂದ ತಪ್ಪಿಸಿಕೊಳ್ಳಲಾಗದೇ ಕೊನೆಗೆ ರಕ್ತದ ಮಾದರಿಯನ್ನು ಕೊಟ್ಟು ಅಲ್ಲಿಂದ ಬಂದಿದ್ದರು.

Tap to resize

Latest Videos

ಸಿನಿಮಾ ನಟಿ ಹೇಮಾ ಇಷ್ಟು ದೊಡ್ಡ ಮಾದಕ ವ್ಯಸನಿಯಾ? ಆಕೆ ತೆಗೆದುಕೊಂಡಿದ್ದ ಡೇಂಜರಸ್ ಡ್ರಗ್ಸ್ ಇಲ್ಲಿದೆ ನೋಡಿ..

ಬೆಂಗಳೂರಿನ ಸಿಸಿಬಿ ಪೊಲೀಸರು ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ 103 ಜನರ ರಕ್ತದ ಮಾದರಿ ಪರೀಕ್ಷೆ ಮಾಡಿಸಿದ್ದರು. ಈ ವೇಳೆ ನಟಿ ಹೇಮಾ ಸೇರಿದಂತೆ 86 ಮಂದಿ ಡ್ರಗ್ಸ್ ಸೇವನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸುಳ್ಳು ವಿಡಿಯೋ ಹರಿಬಿಟ್ಟು ಮಾಧ್ಯಮಗಳನ್ನು ಮತ್ತು ಪೊಲೀಸರನ್ನು ಯಾಮಾರಿಸಿದ್ದ ನಟಿ ಹೇಮಾ ಅವರು ಅಪಾಯಕಾರಿ ಡ್ರಗ್ಸ್ ಸೇವನೆ ಮಾಡಿರುವುದು ರಕ್ತದ ಮಾದರಿಯಲ್ಲಿ ಪತ್ತೆಯಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನಟಿ ಹೇಮಾಗೆ ನೋಟೀಸ್ ಜಾರಿ ಮಾಡಿದ್ದರು.

ಬೆಂಗಳೂರು ರೇವ್ ಪಾರ್ಟೀಲಿ ಸಿಕ್ಕಿಬಿದ್ದ ಮತ್ತೊಬ್ಬ ನಟಿ; ರಕ್ಷಣೆಗಾಗಿ ಕೈ ಮುಗಿದು ಸಹಾಯ ಕೇಳಿದ ಸುಂದರಿ

ಹೈದರಾಬಾದ್‌ನಿಂದ ಬೆಂಗಳೂರಿಗೆ ಆಗಮಿಸಿದ್ದ ನಟಿ ಹೇಮಾ ಬುರ್ಖಾ ಧರಿಸಿ ಸಿಸಿಬಿ ಪೊಲೀಸರ ಮುಂದೆ ಹಾಜರಾಗಿದ್ದರು. ಈ ವೇಳೆ ಡ್ರಗ್ಸ್ ಸೇವನೆ ಬಗ್ಗೆ ಪೊಲೀಸರು ಕೇಳಿದ ಪ್ರಶ್ನೆಗೆ ವಿಚಾರಣೆ ವೇಳೆ ಸರಿಯಾಗಿ ಉತ್ತರಿಸದೇ, ಪೊಲೀಸರ ದಿಕ್ಕು ತಪ್ಪಿಸುವ ಯತ್ನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ನಟಿ ಹೇಮಾ ಅವರನ್ನು ಬಂಧಿಸಿದ್ದಾರೆ. ವಿಚಾರಣೆ ಸ್ಥಳದಿಂದ ಕೆ.ಸಿ. ಜನರಲ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಿದ್ದಾರೆ. ಇನ್ನು ಸಂಜೆಯಾಗಿರುವ ಹಿನ್ನೆಲೆಯಲ್ಲಿ ಕೋರ್ಟ್‌ಗಳ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ನಾಳೆ ಬೆಳಗ್ಎ ಆನೇಕಲ್‌ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ.

click me!