ಬ್ಲೂ ಫಿಲ್ಮ್ಂ ಕೇಸ್ನಲ್ಲಿ ಸಿಕ್ಕಿಬಿದ್ದಿರೋ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾರ ಕುರಿತು ಜಾರಿ ನಿರ್ದೇಶನಾಲಯದ ತನಿಖಾಧಿಕಾರಿಗಳಿಂದ ಹೊಸ ವಿಷಯ ಬಯಲಿಗೆ ಬಂದಿದೆ. ಏನದು?
ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರ ಕುರಿತು ಹೊಸ ವಿಷಯವೊಂದನ್ನು ತನಿಖಾಧಿಕಾರಿಗಳು ಇದೀಗ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ, 2021ರಲ್ಲಿ ಶಿಲ್ಪಾ ಬಾಳಲ್ಲಿ ಬಿರುಗಾಳಿ ಬಂದಿದ್ದು ಎಲ್ಲರಿಗೂ ತಿಳಿದಿರುವ ವಿಷಯವೇ. ಇವರ ಪತಿ, ರಾಜ್ ಕುಂದ್ರಾ ನೀಲಿ ಚಿತ್ರ (porn film) ಕೇಸ್ನಲ್ಲಿ ಸಿಲುಕಿ ಬಿದ್ದಿದ್ದರು. ನಟಿಯರನ್ನು ಮತ್ತು ಮಾಡೆಲ್ಗಳನ್ನು ಬಳಸಿಕೊಂಡು ರಾಜ್ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರು ಹಲವು ಸಾಕ್ಷ್ಯಗಳನ್ನು ಒದಗಿಸಿದ್ದರು. ಬ್ಲೂ ಫಿಲ್ಮ್ ಆರೋಪದ ಮೇಲೆ ಅವರು 63 ದಿನಗಳವರೆಗೆ ಜೈಲಿನಲ್ಲಿ ಇದ್ದರು. ನೀಲಿ ಚಿತ್ರಗಳ ನಿರ್ಮಾಣ ದಂಧೆಯಲ್ಲಿ ತೊಡಗಿದ್ದ ಆರೋಪವನ್ನು ಇಂದಿಗೂ ರಾಜ್ ಕುಂದ್ರಾ ಇಂದಿಗೂ ಎದುರಿಸುತ್ತಿದ್ದಾರೆ. ‘ನಾನು ಮಾಡಿದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕದ ಸಿನಿಮಾ ಮಾತ್ರ’ ಎಂದು ರಾಜ್ ಕುಂದ್ರಾ ಹೇಳಿಕೆ ನೀಡಿದ್ದರು. ತಾವು ಬ್ಲೂಫಿಲ್ಮ್ ಮಾಡುವುದನ್ನು ಅವರು ಒಪ್ಪಿಕೊಂಡಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಹಲವು ನಟಿಯರ ಜೊತೆ ಖುದ್ದು ಶಿಲ್ಪಾ ಶೆಟ್ಟಿಯವರ (Shilpa Shetty) ಹೆಸರೂ ಥಳಕು ಹಾಕಿಕೊಂಡಿತ್ತು.
ಈ ಕೇಸ್ನಲ್ಲಿ ರಾಜ್ ಕುಂದ್ರಾ ಜೈಲುವಾಸ ಅನುಭವಿಸಿದ್ದರು. ಇದಾದ ಬಳಿಕ ಕೆಲ ತಿಂಗಳು ರಾಜ್ ಕುಂದ್ರಾ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ನಂತರ ಗಣೇಶೋತ್ಸವದ ವೇಳೆ ಕಾಣಿಸಿಕೊಂಡರೂ ಮಾಸ್ಕ್ ಧರಿಸಿಯೇ ಓಡಾಡುತ್ತಿದ್ದರು. ಇದೀಗ ಮೊದಲೇ ಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಆಗಲೂ ಮಾಸ್ಕ್ ಧರಿಸಿ ಬಂದಿದ್ದಾರೆ. ಈ ವಿಡಿಯೋದಲ್ಲಿ ಅವರು ಸ್ಟ್ಯಾಂಡ್-ಅಪ್ ಕಾಮಿಡಿ ಮಾಡುತ್ತಿದ್ದಾರೆ. ಕಪ್ಪು ಬಣ್ಣದ ಜಂಪ್ಸ್ಯೂಟ್ ಹಾಕಿ ಶೋಗೆ ಬಂದ ರಾಜ್ ಕುಂದ್ರಾ ಜೊತೆ ಸಾಕಷ್ಟು ಬಾಡಿಗಾರ್ಡ್ಸ್ ಇದ್ದರು. ಮುಖಕ್ಕೆ ಮಾಸ್ಕ್ ಹಾಕಿದ್ದರಿಂದ ತಮ್ಮನ್ನು ತಾವು ಅವರು ಪರಿಚಯಿಸಿಕೊಂಡರು. ‘ನಾನು ರಾಜ್ ಕುಂದ್ರಾ. ಮಾಸ್ಕ್ ಮ್ಯಾನ್ ಎಂದೇ ಫೇಮಸ್. ಶಿಲ್ಪಾ ಶೆಟ್ಟಿ ಪತಿ ಅಂತಲೂ ಜನಪ್ರಿಯತೆ ಪಡೆದಿದ್ದೇನೆ’ ಎಂದಿದ್ದರು.
undefined
ಆದರೆ ಇದೀಗ ಜಾರಿ ನಿರ್ದೇಶನಲಾಯದ (ಇಡಿ) ಅಧಿಕಾರಿಗಳಿಂದ ಬಿಗ್ ಅಪ್ಡೇಟ್ ಒಂದು ಹೊರಬಂದಿದೆ. ಅದೇನೆಂದರೆ, ಜುಲೈ 2021 ರಲ್ಲಿ ಅಶ್ಲೀಲ ದಂಧೆಯಲ್ಲಿ ತೊಡಗಿರುವ ಮೂಲಕ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ಕೇಸ್ನಲ್ಲಿ ಸಿಲುಕಿರುವ ರಾಜ್ ಕುಂದ್ರಾ ಹಾಗೂ ಅಶ್ಲೀಲ ದಂಧೆಗೆ ಯಾವುದೇ ನೇರ ಸಂಪರ್ಕ ಇರುವುದು ಇದುವರೆಗೆ ತಿಳಿದುಬಂದಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಬ್ರಿಟನ್ ಮೂಲದ ಕೆನ್ರಿನ್ ಕಂಪನಿಯ ವಿವಿಧ ಬ್ಯಾಂಕ್ ವಹಿವಾಟುಗಳಿಗೆ ಸಂಬಂಧಿಸಿದ ಹಣದ ಜಾಡುಗಳ ಮೇಲೆ ಇಡಿ ಗಮನಹರಿಸುತ್ತಿದ್ದು, ಸದ್ಯ ಯಾವುದೇ ನೇರ ವಹಿವಾಟು ನಡೆದಿರುವುದು ತಿಳಿದುಬಂದಿಲ್ಲ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ, ಪೋರ್ನ್ ವಿಡಿಯೋ ಕೇಸ್ನಲ್ಲಿ ರಾಜ್ ಕುಂದ್ರಾ ಅವರು ನೇರವಾಗಿ ಪಾಲ್ಗೊಂಡಿಲ್ಲ ಎನ್ನುವುದು ಸದ್ಯದ ಮಟ್ಟಿಗೆ ತಿಳಿದುಬಂದಿದ್ದು, ಇದರ ತನಿಖೆ ಮುಂದುವರೆದಿದೆ.
ತಾವು ತಪ್ಪು ಮಾಡಿಲ್ಲ ಎಂದು ರಾಜ್ಕುಂದ್ರಾ ಹೇಳುತ್ತಲೇ ಬಂದಿದ್ದಾರೆ. ಇದರ ಮಧ್ಯೆಯೇ 63 ದಿನ ಜೈಲಿನಲ್ಲಿ ಕಳೆದಿರುವ ರಾಜ್ ಕುಂದ್ರಅ ಅವರು, ಜೈಲಿನ ಜೀವನ ಜೈಲಿನಲ್ಲಿ ಹೇಗಿತ್ತು? ಅಲ್ಲಿ ಅನುಭವಿಸಿದ್ದ ಕಷ್ಟಗಳೇನು? ಕಳೆದ ದಿನಗಳು ಹೇಗಿದ್ದವು? ಊಟ ಹೇಗಿತ್ತು ಎಂಬ ಬಗ್ಗೆ ರಿಯಲ್ ಲೈಫ್ ಕುರಿತು UT 69 ಸಿನಿಮಾ ಮಾಡಿದ್ದಾರೆ. UT ಎಂದರೆ Under Trial ಅರ್ಥಾತ್ ವಿಚಾರಣಾಧೀನ ಕೈದಿ ನಂಬರ್ 69. ಇದರ ಟ್ರೇಲರ್ ರಿಲೀಸ್ ಆಗಿದೆ. ರಾಜ್ ಕುಂದ್ರಾ ಅವರ ಜೀವನ ಮತ್ತು ಅದಕ್ಕೆ ಸಂಬಂಧಿಸಿದ ಪ್ರಮುಖ ಘಟನೆಗಳನ್ನು ಆಧರಿಸಿದ 'ಯುಟಿ 69' ಚಿತ್ರ ಇದಾಗಿದೆ. ವಿಶೇಷವೆಂದರೆ ಚಿತ್ರದಲ್ಲಿ ಅವರ ಪಾತ್ರವನ್ನು ಸ್ವತಃ ರಾಜ್ ಕುಂದ್ರಾ ನಿರ್ವಹಿಸಿದ್ದಾರೆ. ಎಎ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ತಯಾರಾದ ಈ ಚಿತ್ರವನ್ನು ಶಾನವಾಜ್ ಅಲಿ ನಿರ್ದೇಶಿಸಿದ್ದಾರೆ. 'UT 69' ನವೆಂಬರ್ 3 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಸಿನಿಮಾದಲ್ಲಿ ಸಂಪೂರ್ಣ ಬೆತ್ತಲಾದ್ರೆ ಹೀಗೂ ಆಗತ್ತಾ? 'ಅನಿಮಲ್' ನಟಿ ತೃಪ್ತಿ ದಿಮ್ರಿಗೆ ಡಬಲ್ ಧಮಾಕಾ!