ನನಗೆ ನನ್ನ ಜೀವನದಲ್ಲಿ ಅಥವಾ ವೃತ್ತಿ ಜೀವನದಲ್ಲಿ ಒಂದಾದ ಬಳಿಕ ಮತ್ತೊಂದು ಪ್ರಾಜೆಕ್ಟ್ ಸಿಗುತ್ತಲೇ ಹೋಯ್ತು. ನಾನು ಒಂದೇ ವೃತ್ತಿಯಲ್ಲಿ ತುಂಬಾ ಕಾಲ ಇದ್ದು ಬೋರ್ ಆಗುವುದು ತಪ್ಪಿತು. ಹೊಸ ಹೊಸ ಸಿನಿಮಾ ಮಾಡುವ ಮೂಲಕ ನಾನು ಏಕತಾನತೆ ಅನುಭವಿಸುವುದು ತಪ್ಪಿತು.
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರಿಗೆ ಸಂವಾದವೊಂದರಲ್ಲಿ ಹುಡುಗಿಯೊಬ್ಬಳು ಪ್ರಶ್ನೆ ಕೇಳಿದ್ದಾಳೆ. 'ನಿಮ್ಮ ಜೀವನದಲ್ಲಿ ನೀವು ಕಲಿತುಕೊಂಡ ಗ್ರೇಟೆಸ್ಟ್ ಲೆಸನ್ ಯಾವುದು' ಅಂತ. ಅದಕ್ಕೆ ನಟಿ ಪ್ರಿಯಾಂಕಾ 'ಬೆಳಿಗ್ಗೆ ನೀವು ಎದ್ದಾಗ ಇಂದು ಯಾವ ಕಾರಣಕ್ಕೆ ನಾನು ಕೆಲಸಕ್ಕೆ ಹೋಗಬೇಕು' ಎಂಬ ಪ್ರಶ್ನೆಗೆ ನಿಮ್ಮಲ್ಲಿ ಉತ್ತರ ಇರಬೇಕು. ಅಯ್ಯೋ, ಹೋಗಬೇಕಲ್ಲಾ ಎಂಬ ಮನೋಭಾವದಿಂದ ಹೋಗುವುದಾದರೆ ಅದು ತುಂಬಾ ಕಷ್ಟ ಕೊಡುತ್ತದೆ. ಪ್ಯಾಶನ್ ಆಗಲಿ, ಹಾಬಿ ಆಗಲಿ ಅಥವಾ ನಿಮ್ಮ ವೃತ್ತಿಯೇ ಆಗಲಿ, ನೀವು ಖುಷಿಯಿಂದ ಹೋಗುವಂತೆ ಇರಬೇಕು.
ನನ್ನ ಅದೃಷ್ಟ ಚೆನ್ನಾಗಿದೆ ಎಂದು ನಾನು ಹೇಳುತ್ತೇನೆ. ಕಾರಣ, ನನಗೆ ನನ್ನ ಜೀವನದಲ್ಲಿ ಅಥವಾ ವೃತ್ತಿ ಜೀವನದಲ್ಲಿ ಒಂದಾದ ಬಳಿಕ ಮತ್ತೊಂದು ಪ್ರಾಜೆಕ್ಟ್ ಸಿಗುತ್ತಲೇ ಹೋಯ್ತು. ನಾನು ಒಂದೇ ವೃತ್ತಿಯಲ್ಲಿ ತುಂಬಾ ಕಾಲ ಇದ್ದು ಬೋರ್ ಆಗುವುದು ತಪ್ಪಿತು. ಹೊಸ ಹೊಸ ಸಿನಿಮಾ ಮಾಡುವ ಮೂಲಕ ನಾನು ಏಕತಾನತೆ ಅನುಭವಿಸುವುದು ತಪ್ಪಿತು. ಜತೆಗೆ, ನನಗೆ ಜೀವನದಲ್ಲಿ ಕೂಡ ನಾನು ಅಂದುಕೊಂಡಂತೆ ಬಹಳಷ್ಟು ನಡೆಯಿತು. ನಾನು ನಿಜವಾಗಿಯೂ ಲಕ್ಕಿ ಪರ್ಸನ್ ಅಂದುಕೊಳ್ಳುತ್ತೇನೆ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ.
ಬಿಗ್ ಬಾಸ್ ಮನೆಯಲ್ಲಿ ನಗೆಯ ಬುಗ್ಗೆ; ಮಾವುತನೋ ಮೇಕೆಯೋ, ಕನ್‌ಫ್ಯೂಸ್ ಆದ್ರಾ!
ಸಂದರ್ಶನದಲ್ಲಿ ಮಾತನಾಡುವಾಗ ನಟಿ ಪ್ರಿಯಾಂಕಾ ಚೋಪ್ರಾ ಮುಖದಲ್ಲಿ ಮಂದಹಾಸ ಮತ್ತು ಕಾನ್ಫಿಡೆನ್ಸ್ ಎದ್ದು ಕಾಣುತ್ತಿತ್ತು. ಬಾಲಿವುಡ್‌ನಲ್ಲಿ ಸಕ್ಸಸ್‌ಫುಲ್ ನಟಿ ಎನಿಸಿಕೊಂಡ ಮೇಲೆ ಈಗ ಪ್ರಿಯಾಂಕಾ ಹಾಲಿವುಡ್ ಸಿನಿಮಾ ಹಾಗು ವೆಬ್ ಸಿರೀಸ್ ಕಡೆ ತಮ್ಮ ದೃಷ್ಟಿ ನೆಟ್ಟಿದ್ದಾರೆ. ಅಮೆರಿಕಾದ ಹಾಲಿವುಡ್ ನಟ ನಿಕ್ ಜೊನಾಸ್ ಅವರನ್ನು ಮದುವೆಯಾದ ಬಳಿಕ ನಟಿ ಪ್ರಿಯಾಂಕಾ ಚೋಪ್ರಾ ಅವರು ಗಂಡನ ಜತೆ ಅಮೆರಿಕಾದಲ್ಲೇ ಸೆಟ್ಲ್ ಆಗಿದ್ದಾರೆ. ಭಾರತಕ್ಕೆ ಆಗಾಗ ಫ್ಯಾಮಿಲಿ, ಫ್ರೆಂಡ್ಸ್ ಎಂದು ಬರುವುದು-ಹೋಗುವುದು ಮಾಡುತ್ತಾರೆ ಅಷ್ಟೇ. ಆದರೆ ಅವರು ಬಾಲಿವುಡ್ ಚಿತ್ರಗಳಲ್ಲಿ ಮತ್ತೆ ನಟಿಸುತ್ತಿಲ್ಲ.
ಭಾರತೀಯರು ಬರುತ್ತಿದ್ದೇವೆ ಎಂದು ಜಗತ್ತಿನ ಮುಂದೆ ತಲೆಯೆತ್ತಿ ಹೇಳ್ಬೇಕು; ರಾಕಿಂಗ್ ಸ್ಟಾರ್ ಯಶ್
ಭಾರತದ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಹಲವು ಹಾಲಿವುಡ್ ಸಂದರ್ಶಕರು ಮಾತನಾಡಿಸುತ್ತಾರೆ. ಭಾರತದ ಬಗ್ಗೆ ಮಾತುಕತೆ ಬಂದಾಗಲೆಲ್ಲ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ತಾಯ್ನೆಲದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಜತೆಗೆ, ಯಾರಾದರೂ ಪೂರ್ವಾಗ್ರಹ ಪೀಡಿತರಾಗಿ ಪ್ರಶ್ನೆ ಕೇಳಿದರೆ, ಅವರಿಗೆ ನಿಜವಾದ ಭಾರತದ ದರ್ಶನ ಮಾಡಿಸುವಷ್ಟರ ಮಟ್ಟಿಗೆ ನಟಿ ಪ್ರಿಯಾಂಕಾಗೆ ಮೆಚ್ಯುರಿಟಿ ಇದೆ. ಹಾಗಾಗಿಯೇ ಅವರಿಗೆ ಇನ್ನೂ ಕೂಡ ಭಾರತದಲ್ಲಿ ಅಭಿಮಾನಿ ಬಳಗ ಸಕ್ರಿಯವಾಗಿದೆ.