Duniya Vijay: ನಂದಮೂರಿ ಬಾಲಕೃಷ್ಣ ಚಿತ್ರದಲ್ಲಿ ದುನಿಯಾ ವಿಜಯ್ ಗೆಟಪ್​ ರಿವೀಲ್!

By Suvarna News  |  First Published Mar 17, 2022, 11:33 AM IST

ಟಾಲಿವುಡ್ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ ದುನಿಯಾ ವಿಜಯ್​ ನಟಿಸುತ್ತಿದ್ದು, ಸಿನಿಮಾದಲ್ಲಿ ಯಾವ ಪಾತ್ರ ಮಾಡುತ್ತಿದ್ದಾರೆ ಅಂತ ರಿವೀಲ್​ ಆಗಿದೆ. ಈ ಲುಕ್​ ನೋಡಿ ದುನಿಯಾ ವಿಜಯ್​ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. 


ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್​ (Duniya Vijay) ಅವರ ಈಗಾಗಲೇ ಟಾಲಿವುಡ್ (Tollywood) ಅಂಗಾಳಕ್ಕೆ ಕಾಲಿಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಟನಾಗಿ ಮತ್ತು ನಿರ್ದೇಶಕನಾಗಿ ಮಿಂಚಿದ್ದ ಅವರು ಇದೀಗ  ತೆಲುಗಿನಲ್ಲಿ ತಮ್ಮ ನಟನೆಯನ್ನು ತೋರಿಸಲು ಸಜ್ಜಾಗಿದ್ದಾರೆ. ಟಾಲಿವುಡ್ ಖ್ಯಾತ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಸಿನಿಮಾದಲ್ಲಿ ವಿಜಯ್​ ನಟಿಸುತ್ತಿದ್ದು, ಇತ್ತೀಚೆಗಷ್ಟೇ ಸಿನಿಮಾ ಸೆಟ್​ಗೆ ದುನಿಯಾ ವಿಜಯ್ ಎಂಟ್ರಿಯಾಗಿದ್ದರು. ಇದೀಗ ಆ ಸಿನಿಮಾದಲ್ಲಿ ದುನಿಯಾ ವಿಜಯ್​ ಯಾವ ಪಾತ್ರ ಮಾಡುತ್ತಿದ್ದಾರೆ ಅಂತ ರಿವೀಲ್​ ಆಗಿದೆ. ಈ ಲುಕ್​ ನೋಡಿ ದುನಿಯಾ ವಿಜಯ್​ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. 

ಹೌದು! ನಂದಮೂರಿ ಬಾಲಕೃಷ್ಣ ನಟನೆಯ 107ನೇ (NBK 107) ಸಿನಿಮಾದಲ್ಲಿ ದುನಿಯಾ ವಿಜಯ್​ ಅವರು ಖಡಕ್​ ವಿಲನ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಫಸ್ಟ್​ ಲುಕ್​ ಪೋಸ್ಟರ್​ ತುಂಬ ರಗಡ್​ ಆಗಿದೆ. ಗೋಪಿಚಂದ್​ ಮಲಿನೇನಿ (Gopichand Malineni) ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ದುನಿಯ್​ ವಿಜಯ್​ ಅವರದ್ದು ಪವರ್​ಫುಲ್​ ಪಾತ್ರ ಎಂದು ಅವರು ಹೇಳಿದ್ದಾರೆ. ಗಡ್ಡ ಬಿಟ್ಟು, ಸಿಗರೇಟ್​ ಸೇದುತ್ತ, ಖಡಕ್ ಲುಕ್‌ನಲ್ಲಿ ದುನಿಯಾ ವಿಜಯ್​ ಪೋಸ್​ ನೀಡಿದ್ದು, ಮುಸಲಿ ಮಡುಗು ಪ್ರತಾಪ್ ರೆಡ್ಡಿ ಎಂಬ ಪಾತ್ರದಲ್ಲಿ ದುನಿಯಾ ವಿಜಯ್ ಅಬ್ಬರಿಸಲಿದ್ದಾರೆ. ಸದ್ಯ ಈ ಪೋಸ್ಟರ್​ ನೋಡಿದ ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ. 

Tap to resize

Latest Videos

undefined

Duniya Vijay ನಟನೆ, ನಿರ್ದೇಶನದ ಹೊಸ ಚಿತ್ರ 'ಭೀಮ'

ದುನಿಯಾ ವಿಜಯ್​ ಅವರಿಗೆ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇದೆ. ನಟನೆಯಲ್ಲಿ ಅವರು ಈಗಾಗಲೇ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಕಳೆದ ವರ್ಷ ತೆರೆಕಂಡ 'ಸಲಗ' (Salaga) ಚಿತ್ರಕ್ಕೆ ಅವರು ಆ್ಯಕ್ಷನ್​-ಕಟ್​ ಹೇಳಿದ್ದರು. ಅದು ಅವರ ಮೊದಲ ನಿರ್ದೇಶನದ ಪ್ರಯತ್ನ. ಚೊಚ್ಚಲ ನಿರ್ದೇಶನದಲ್ಲೇ ಅವರಿಗೆ ಗೆಲುವು ಸಿಕ್ಕಿತು. 'ಸಲಗ' ಸಕ್ಸಸ್​ ಬಳಿಕ ಅವರನ್ನುಹುಡುಕಿಕೊಂಡು ಬಂದಿದ್ದೇ ಟಾಲಿವುಡ್​ ಅವಕಾಶ. ಖ್ಯಾತ ನಟ ನಂದಮೂರಿ ಬಾಲಕೃಷ್ಣ ಜೊತೆ ತೆರೆ ಹಂಚಿಕೊಳ್ಳುವ ಚಾನ್ಸ್​ ಪಡೆದಿರುವ ದುನಿಯಾ ವಿಜಯ್​ ಅವರು ಈಗ ಫಸ್ಟ್​ಲುಕ್ (Firstlook)​ ಪೋಸ್ಟರ್​ ಮೂಲಕ ಗಮನ ಸೆಳೆಯುತ್ತಿದ್ದಾರೆ. ಪೂರ್ತಿ ಸಿನಿಮಾದಲ್ಲಿ ಅವರ ಪಾತ್ರ ಹೇಗೆ ಮೂಡಿಬರಬಹುದು ಎಂಬ ಕೌತುಕ ಅಭಿಮಾನಿಗಳಲ್ಲಿ ಇದೆ. ಪೋಸ್ಟರ್​ ಕಂಡು ಎಲ್ಲರೂ ಪಾಸಿಟಿವ್​ ಆಗಿ ಕಮೆಂಟ್​ ಮಾಡುತ್ತಿದ್ದಾರೆ. 



'ಸ್ಯಾಂಡಲ್​ವುಡ್​ ಸೆನ್ಸೇಷನ್​ ದುನಿಯಾ ವಿಜಯ್ ಅವರನ್ನು ಒಂದು ಪವರ್​ಫುಲ್​ ಪಾತ್ರದಲ್ಲಿ ಪರಿಚಯಿಸುತ್ತಿದ್ದೇವೆ. ಈಗಾಗಲೇ ಹೇಳಿದಂತೆ ವಿಲನ್​ ಎಂದರೆ ಏನು ಎಂಬುದನ್ನು ಅವರು ಮರು ವ್ಯಾಖ್ಯಾನ ಮಾಡಲಿದ್ದಾರೆ' ಎಂಬ ಕ್ಯಾಪ್ಷನ್ ಬರೆದು ನಿರ್ದೇಶಕ ಗೋಪಿಚಂದ್​ ಮಲಿನೇನಿ ಅವರು ಸಾಮಾಜಿಕ ಜಾಲತಾಣದಲ್ಲಿ (Social Media) ಫಸ್ಟ್‌ಲುಕ್ ಪೋಸ್ಟರನ್ನು​ ಹಂಚಿಕೊಂಡಿದ್ದು, ಮುಸಲಿ ಮಡುಗು ಪ್ರತಾಪ್​ ರೆಡ್ಡಿ ಎಂಬುದು ದುನಿಯಾ ವಿಜಯ್​ ನಿಭಾಯಿಸಲಿರುವ ಪಾತ್ರದ ಹೆಸರು ಎಂದು ಕೂಡ ನಿರ್ದೇಶಕರು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಈ ಮೊದಲು ದುನಿಯಾ ವಿಜಯ್​ ಅವರು NBK107 ಚಿತ್ರದ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು. ಚಿತ್ರೀಕರಣದ ಸೆಟ್​ಗೆ ತೆರಳಿದ್ದ ಅವರಿಗೆ ಚಿತ್ರತಂಡದಿಂದ ಭರ್ಜರಿ ಸ್ವಾಗತ ಸಿಕ್ಕಿತ್ತು. ಆ ವಿಷಯವನ್ನು ಅವರು ಸೋಶಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದರು.

Duniya Vijay: ಮತ್ತೊಂದು ರಕ್ತಸಿಕ್ತ ಅಧ್ಯಾಯಕ್ಕೆ ಆಕ್ಷನ್ ಕಟ್ ಹೇಳಲು ಸಜ್ಜಾದ 'ಸಲಗ'

ಇನ್ನು ದುನಿಯಾ ವಿಜಯ್ ತಮ್ಮ ಪಾತ್ರದ ಫಸ್ಟ್‌ಲುಕ್ ಪೋಸ್ಟರನ್ನು ಟ್ವೀಟರ್‌ನಲ್ಲಿ (Twitter) ಶೇರ್ ಮಾಡಿಕೊಂಡಿದ್ದು, 'ಇಂಥ ಖಳನಾಯಕನ ಪಾತ್ರ ನೀಡಿರುವುದಕ್ಕೆ ನಿರ್ದೇಶಕ ಗೋಪಿಚಂದ್‌ ಅವರಿಗೆ ಧನ್ಯವಾದ. ಖಳನಾಯಕನ ಈ ನೋಟವೇ ಆ ಪಾತ್ರದ ಪೂರ್ಣ ವಿವರಣೆಯನ್ನು ನೀಡುತ್ತದೆ. ಪಾತ್ರ ಹಾಗೂ ಚಿತ್ರದ ಕುರಿತು ಮತ್ತಷ್ಟು ಮಾಹಿತಿಯನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತೇನೆ' ಎಂದು ಬರೆದುಕೊಂಡಿದ್ದಾರೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್‌ ನಿರ್ಮಾಣ ಮಾಡುತ್ತಿದ್ದು, ನಾಯಕಿಯಾಗಿ ಶ್ರುತಿ ಹಾಸನ್​ (Shruti Hassan) ಕಾಣಿಸಿಕೊಳ್ಳಲಿದ್ದಾರೆ.  ರಾಯಲಸೀಮಾ ಹಿನ್ನೆಲೆಯಲ್ಲಿ ಚಿತ್ರ ಮೂಡಿ ಬರಲಿದ್ದು, ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. 
 

Unveiling the first look of fierce, vicious & barbaric Musali Madugu Pratap Reddy from to you all.
All thanks to for giving me such a monstrous role.
The look says a lot about his character in the movie.
More updates in queue. pic.twitter.com/NDA1o8PYpB

— Duniya Vijay (@OfficialViji)
click me!