Lata Mangeshkar in ICU: ಎಲ್ಲರೂ ಪ್ರಾರ್ಥಿಸಿ, ಗಾನ ಕೋಗಿಲೆಯ ಆರೋಗ್ಯ ಅಪ್‌ಡೇಟ್!

By Suvarna News  |  First Published Jan 20, 2022, 4:46 PM IST

10 ದಿನ ಕಳೆದರೂ ಐಸಿಯುನಲ್ಲಿರುವ ಖ್ಯಾತ ಗಾಯಕಿ. ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಎಂದ ವೈದ್ಯರು. 


ಕೊರೋನಾ ಪಾಸಿಟಿವ್ (Covid19) ತಗುಲಿ, ಖ್ಯಾತ ಗಾಯಕಿ ಲತಾ ಮಂಗೇಷ್ಕರ್‌ (Lata Mangeshkar) ಅವರು ಮುಂಬೈನ ಬ್ರೀಚ್ ಕ್ಯಾಂಡಿ (Breach Candy hospital) ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ 10 ದಿನಗಳಿಂದಲೂ ಐಸಿಯುನಲ್ಲಿ (ICU) ಚಿಕಿತ್ಸೆ ಪಡೆಯುತ್ತಿರುವ ಲತಾ ಅವರು ನಿಮೋನಿಯಾದಿಂದ ( pneumonia) ಬಳಲುತ್ತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಭಾರತದ ಗಾನ ಕೋಗಿಲೆ ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಅವರಿಗೆ ಭಗವಂತ ಹೆಚ್ಚಿನ ಆಯಸ್ಸು ನೀಡಲಿ, ಎಂದು ಅಭಿಮಾನಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ. ಲತಾ ಅವರ ಆರೋಗ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ (Social Media) ಕೆಲವೊಂದು ಗಾಳಿ ಸುದ್ದಿ ಹರಿದಾಡುತ್ತಿದೆ. ಹೀಗಾಗಿ ವೈದ್ಯರು ಆವರ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 

ಇಂಡಿಯಾ ಟುಡೇ ಪ್ರಕಟಿಸಿರುವ ಮಾಹಿತಿ ಪ್ರಕಾರ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಲತಾ ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಪ್ರತೀತ್ ಸಮದಾನಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. 'ಲತಾ ಜೀ ಅವರು ಇನ್ನೂ ಆಸ್ಪತ್ರೆಯಲ್ಲಿದ್ದಾರೆ. ನಾವು ನಮ್ಮ ಶ್ರಮ ಮೀರಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಆದಷ್ಟು ಬೇಗ ಲತಾ ಜೀ ಅವರು ಚೇತರಿಸಿಕೊಳ್ಳಲಿ ಎಂದು ನೀವೆಲ್ಲರೂ ಪ್ರಾರ್ಥಿಸಬೇಕು,' ಎಂದು ಹೇಳಿದ್ದಾರೆ. ಕೊರೋನಾದ ಸಣ್ಣ ಪುಟ್ಟ ಲಕ್ಷಣಗಳು ಕಾಣಿಸಿಕೊಂಡ ಬೆನ್ನಲ್ಲೇ ಲತಾ ಮಂಗೇಷ್ಕರ್ ಆಸ್ಪತ್ರೆಗೆ ದಾಖಲಾದರು. ವಯಸ್ಸಾಗಿರುವ ಕಾರಣ ಐಸಿಯುನಲ್ಲಿ ಹೆಚ್ಚಿನ ಕಾಳಜಿ ವಹಿಸಿ, ಚಿಕಿತ್ಸೆ ನೀಡಲಾಗುತ್ತಿದೆ. 

Tap to resize

Latest Videos

ಕೆಲವರು ಲತಾ ಅವರಿಗೆ ವೆಂಟಿಲೇಟರ್ (Ventilator) ಅಳವಡಿಸಲಾಗಿದೆ, ಎಂದು ಹೇಳುತ್ತಿದ್ದಾರೆ. ಆದರೆ ಇಂಡಿಯನ್ ಎಕ್ಸ್‌ಪ್ರೆಸ್ ಮಾಹಿತಿ ಸಂಗ್ರಹಿ,ಸಿ ಪ್ರಕಟಿಸಿರುವ ವರದಿ ಪ್ರಕಾರ ಲತಾ ಜೀ ಅವರಿಗೆ ಯಾವುದೇ ರೀತಿಯ ವೆಂಟಿಲೇಟರ್ ಹಾಕಿಲ್ಲ. 'ಲತಾ ಮಂಗೇಷ್ಕರ್ ಜೀ ಅವರು ಕೆಲವು ದಿನಗಳಿಂದ ಸಾಲಿಡ್‌ ಆಹಾರ (Solid Food) ಸ್ವೀಕರಿಸುತ್ತಿದ್ದಾರೆ, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಚಿಕಿತ್ಸೆಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹೀಗಾಗಿ ಯಾವುದೇ ರೀತಿಯ ವೆಂಟಿಲೇಟರ್‌ ಅಳವಡಿಸಿಲ್ಲ,' ಎಂದು ಹೇಳಲಾಗಿದೆ. 

Corona Positive: ಕಳೆದ 24 ಗಂಟೆಯಲ್ಲಿ ಪಾಸಿಟಿವ್ ದೃಢಪಟ್ಟ ಸೆಲೆಬ್ರಿಟಿಗಳಿವರು

undefined

'ಭಾರತದ ನೈಟಿಂಗೇಲ್' ಎಂದು ಜನಪ್ರಿಯರಾಗಿರುವ ಲತಾ ಮಂಗೇಶ್ಕರ್ ಅವರು ಹಿಂದಿ, ಮರಾಠಿ, ಬಂಗಾಳಿ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿಯೂ ಹಾಡಿದ್ದಾರೆ. ಭಾರತದ ಹೆಸರಾಂತ ಸಂಗೀತಗಾರರಲ್ಲಿ ಒಬ್ಬರಾದ ಅವರ ಸುಪ್ರಸಿದ್ಧ ವೃತ್ತಿ ಜೀವನದ ಅವಧಿಯಲ್ಲಿ, ಅವರು ಭಾರತ ರತ್ನ (Bharata Ratna), ಪದ್ಮವಿಭೂಷಣ (Padma Vibhushan), ಪದ್ಮಭೂಷಣ (Padma Bhushan) ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗಳ (Dadasaheb Phalke Award) ಜೊತೆಗೆ ಹಲವು ರಾಷ್ಟ್ರೀಯ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟಿದ್ದಾರೆ. ಲತಾ ಮಂಗೇಶ್ಕರ್ ಅವರ ಕೊನೆಯ ಸಂಪೂರ್ಣ ಆಲ್ಬಂ 2004 ರ ಬಾಲಿವುಡ್‌ನಲ್ಲಿ ಬಿಡುಗಡೆಯಾದ ವೀರ್-ಜಾರಾ ಆಗಿತ್ತು.

ಕೊರೋನಾ ರಿಲೀಫ್ ಫಂಡ್‌ಗೆ 7 ಲಕ್ಷ ನೀಡಿದ ಲತಾ ಮಂಗೇಶ್ಕರ್

ಲತಾ ಮಂಗೇಶ್ಕರ್ ಅವರು ಕೋವಿಡ್ -19 ಪರಿಹಾರ ಕಾರ್ಯಗಳಿಗಾಗಿ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 7 ಲಕ್ಷ ರೂಪಾಯಿ ನೀಡಿದ್ದರು. ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಮಂಗೇಶ್ಕರ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿ, ಭಾರತ್ ರತ್ನ ಲತಾ ಮಂಗೇಶ್ಕರ್ ಅವರಿಂದ 7 ಲಕ್ಷ ರೂ. ದೇಣಿಗೆ ನೀಡಿದ್ದನ್ನು ನಾವು ಕೃತಜ್ಞತೆಯಿಂದ ಸ್ವೀಕರಿಸುತ್ತೇವೆ. ಕೋವಿಡ್ -19 ವಿರುದ್ಧದ ನಮ್ಮ ಹೋರಾಟಕ್ಕೆ ಈ ಮೊತ್ತವನ್ನು ಬಳಸಲಾಗುತ್ತದೆ ಎಂದಿದ್ದರು. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ಕೊಡುಗೆ ನೀಡಲು ಬಯಸುವ ಎಲ್ಲರಿಗೂ ರಾಜ್ಯ ಸಿಎಂ ರಿಲೀಫ್ ಫಂಡ್ ಅನ್ನು ಸ್ಥಾಪಿಸಿದೆ. ನಿಧಿಗೆ ಕೊಡುಗೆ ನೀಡುವ ಮೂಲಕ ಜನರು ಮುಂದೆ ಬರಬೇಕೆಂದು ಸಿಎಂ ಒತ್ತಾಯಿಸಿದ್ದರು.

click me!