
ವಿಶಾಖಪಟ್ಟಣಂ(ಏ.30) ನಟಿ ಸಮಂತಾ ರುತ್ ಪ್ರಭು ಸದ್ಯ ಸಕ್ರಿಯವಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆರೋಗ್ಯ ಸಮಸ್ಯೆ ಬಳಿಕ ಸಿನಿಮಾದಿಂದ ದೂರ ಉಳಿದಿರೂ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ವೈಯುಕ್ತಿಕ ಜೀವನದಲ್ಲಿ ಹಿನ್ನಡೆಯಾದರೂ ಸಮಂತಾ ಅಭಿಮಾನಿಗಳು ಬೆಂಬಲ ನಿಲ್ಲಿಸಿಲ್ಲ. ಇದೀಗ ಸಮಂತಾ ರುತ್ ಪ್ರಭು 38ನೇ ವರ್ಷದ ಹುಟ್ಟು ಹಬ್ಬ ಆಚರಿಸಿದ್ದಾರೆ. ಇದರ ಜೊತೆಗೆ ಅಭಿಮಾನಿಯ ಹುಟ್ಟುಹಬ್ಬದ ಉಡುಗೊರೆ ಊಹೆಗೆ ನಿಲುಕದಂತಾಗಿದೆ. ಹೌದು, ನಟಿ ಸಮಂತಾಗೆ ಅಭಿಮಾನಿಯೊಬ್ಬ ದೇವಸ್ಥಾನ ಕಟ್ಟಿದ್ದಾನೆ. ಈ ದೇವಸ್ಥಾನದಲ್ಲಿ ಸಮಂತಾ ಅವರ ಎರಡು ಮೂರ್ತಿಗಳನ್ನು ಇಟ್ಟಿದ್ದಾನೆ. ಇದೀಗ ಸಮಂತಾ ದೇವಸ್ಥಾನ ವಿಡಿಯೋ, ಅಭಿಮಾನಿಯ ಮಾತುಗಳು ಭಾರಿ ವೈರಲ್ ಆಗಿದೆ.
ಸಮಂತಾ ಪೂಜಿಸುವ ದೇವಸ್ಥಾನ
ಆಂಧ್ರ ಪ್ರದೇಶದ ಬಾಪಟ್ಲಾ ಜಿಲ್ಲೆಯ ಅಲಪಾಡು ಗ್ರಾಮದ ಅಭಿಮಾನಿ ತೆನಾಲಿ ಸಂದೀಪ್ ನಟಿಗಾಗಿ ದೇವಸ್ಥಾನ ಕಟ್ಟಿದ್ದಾನೆ. ನಟಿಗಾಗಿ ದೊಡ್ಡ ದೇವಸ್ಥಾನವನ್ನೇ ಅಭಿಮಾನಿ ಕಟ್ಟಿದ್ದಾನೆ. 2023ರಿಂದ ಈ ದೇವಸ್ಥಾನ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ಇದೀಗ ಎರಡು ಸಮಂತಾ ಮೂರ್ತಿಗಳನ್ನು ಇಟ್ಟು ಪೂಜೆ ಮಾಡುವ ಮೂಲಕ ಸಂಪೂರ್ಣಗೊಂಡಿದೆ. ಸಮಂತಾ ಈ ಬಾರಿ 38ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಸಮಂತಾ ಹುಟ್ಟು ಹಬ್ಬಕ್ಕೆ ಅಭಿಮಾನಿ ತೆನಾಲಿ ಸಂದೀಪ್ ಇದೇ ದೇವಸ್ಥಾನದಲ್ಲಿ ಮಕ್ಕಳಿಗೆ ಅನ್ನದಾನ ನಡೆಸಿದ್ದಾನೆ.
ರಿಸ್ಕ್ ತೆಗೆದುಕೊಳ್ಳಲು ಮುಂದಾದ ಸಮಂತಾ; ಹೀಗ್ಯಾಕೆ ಮಾಡ್ತೀರಾ 'ಓ ಬೇಬಿ' ಎಂದ ಫ್ಯಾನ್ಸ್!
ಸಮಂತಾ ಹುಟ್ಟು ಹಬ್ಬ ದಿನ ದೇವಸ್ಥಾನದಲ್ಲಿ ಅನ್ನದಾನ
ಸಮಂತಾ ಹುಟ್ಟಹಬ್ಬವನ್ನು ತೇನಾಲಿ ಸಂದೀಪ್ ಈ ದೇವಸ್ಥಾನದಲ್ಲಿ ಆಚರಿಸಿದ್ದಾರೆ. ಹಲವು ಮಕ್ಕಳು ಹಾಜರಾಗಿದ್ದಾರೆ. ಸಮಂತ ಮೂರ್ತಿ ಮುಂದೆ ಕೇಕ್ ಕತ್ತರಿಸಿ ನಟಿಯ ಹುಟ್ಟು ಹಬ್ಬ ಆಚರಿಸಲಾಗಿದೆ. ಇತ್ತ ಮಕ್ಕಳು ಸಂಭ್ರಮದಿಂದ ಸಮಂತಾ ಹುಟ್ಟು ಹಬ್ಬ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಕೇಕ್ ಕತ್ತರಿಸಿದ ಬಳಿಕ ಅಭಿಮಾನಿ ತೆನಾಲಿ ಸಂದೀಪ್ ಅನಾಥ ಮಕ್ಕಳಿಗೆ ಅನ್ನದಾನ ಮಾಡಿದ್ದಾರೆ.
ಸಮಂತಾ ಹಾದಿಯಲ್ಲಿ ಅಭಿಮಾನಿ
ಸಮಂತಾ ಉತ್ತಮ ನಟಿ ಎಂದು ಅಭಿಮಾನಿ ತೆನಾಲಿ ಸಂದೀಪ್ ಹೇಳಿದ್ದಾನೆ. ಸಮಂತಾ ಪ್ರತಿ ಸಿನಿಮಾಗಳನ್ನು ನೋಡುತ್ತೇನೆ. ಅವರ ಸಿನಿಮಾ ಒಂದೆಡೆ ಸ್ಪೂರ್ತಿಯಾದರೆ, ಸಮಂತಾ ಅವರ ಸಮಾಜ ಸೇವೆಯೂ ನನಗೆ ಸ್ಪೂರ್ತಿಯಾಗಿದೆ. ಹೀಗಾಗಿ ಸಮಂತಾ ಅವರ ದಾರಿಯಲ್ಲೇ ಮುನ್ನಡೆಯುತ್ತೇನೆ. ನನ್ನ ಕೈಲಾದಷ್ಟು ಸಮಾಜ ಸೇವೆ ಮಾಡುತ್ತಿದ್ದೇನೆ ಎಂದು ಸಂದೀಪ್ ಹೇಳಿದ್ದಾರೆ. ಬಡ ಮಕ್ಕಳಿಗೆ ನೆರವು, ಅನಾಥ ಮಕ್ಕಳಿಗೆ ಅನ್ನದಾನ ಸೇರಿದಂತೆ ಹಲವು ರೀತಿಯ ನೆರವನ್ನು ಮಾಡುತ್ತಿದ್ದೇನೆ ಎಂದು ಸಂದೀಪ್ ಹೇಳಿದ್ದಾರೆ.
ದೇವಸ್ಥಾನದ ಮುಂಭಾಗದಲ್ಲಿ ಟೆಂಪಲ್ ಆಫ್ ಸಮಂತಾ ಎಂದು ಮರದ ಕೆತ್ತನೆ ಮೇಲೆ ಬೋರ್ಡ್ ಹಾಕಲಾಗಿದೆ. ಹುಟ್ಟು ಹಬ್ಬ ಪ್ರಯುಕ್ತ ದೇವಸ್ಥಾನವ್ನು ಸಂಪೂರ್ಣ ಅಲಂಕರಿಸಲಾಗಿತ್ತು. ಹೂವು ಸೇರಿದಂತೆ ಇತರ ಅಲಂಕಾರಿ ವಸ್ತುಗಳಿಂದ ಅಲಂಕಾರ ಮಾಡಲಾಗಿತ್ತು. ಸಮಂತಾ ಅವರ ಎರಡು ಮೂರ್ತಿಗಳು ಈ ದೇವಸ್ಥಾನದಲ್ಲಿದೆ. ಒಂದು ಬಂಗಾರ ಬಣ್ಣದ ಮೂರ್ತಿಯಾಗಿದ್ದರೆ, ಮತ್ತೊಂದು ಕೆಂಪು ಸೇರಿ ತೊಟ್ಟಿರುವ ಮೂರ್ತಿ. ಎರಡು ಮೂರ್ತಿಗಳಿಗೂ ಪೂಜೆ ಸಲ್ಲಿಸಲಾಗುತ್ತಿದೆ.
ಸಮಂತಾ ದೇವಸ್ಥಾನಕ್ಕೆ ಅಭಿಮಾನಿಗಳ ದಂಡು
ನಟಿ ಸಮಂತಾಗಾಗಿ ದೇವಾಲಯ ಕಟ್ಟಿರುವ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಸಮಂತಾ ಅಭಿಮಾನಿಗಳು ಈ ದೇವಾಲಕ್ಕೆ ಆಗಮಿಸುತ್ತಿದ್ದಾರೆ. ಸಮಂತಾ ಅಭಿಮಾನಿಗಳು ದೇವಸ್ಥಾನಕ್ಕೆ ಆಗಮಿಸಿ ತೆನಾಲಿ ಸಂದೀಪ್ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ. ಹಲವರು ಒಟ್ಟು ಖರ್ಚು ವೆಚ್ಚದ ಮಾಹಿತಿ ಪಡೆದು ತೆರಳಿದ್ದಾರೆ. ಸಮಂತಾಗಾಗಿ ಅಭಿಮಾನಿಗಳು ಮತ್ತೊಂದು ದೇವಸ್ಥಾನ ಕಟ್ಟಿದರೂ ಅಚ್ಚರಿಯಿಲ್ಲ. ಈ ದೇವಸ್ಥಾನದ ವಿಡಿಯೋ ವೈರಲ್ ಆಗಿದೆ. ಹಲವರು ಈ ದೇವಸ್ಥಾನ ಕುರಿತು ಪ್ರತಿಕ್ರಿಯಿಸಿದ್ದಾರೆ.
1000 ಕೋಟಿ ಸಿನಿಮಾ ಆಫರ್ ತಿರಸ್ಕರಿಸಿದ್ಯಾಕೆ ಸಮಂತಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.