Crime Shocking: ಲೈಂಗಿಕ ಕಿರುಕುಳ ಆರೋಪದಲ್ಲಿ FIR; 'ಧುರಂಧರ್' ಟೀಮ್ ಸದಸ್ಯನ ಪರಿಸ್ಥಿತಿ ಏನಾಗಿದೆ ಈಗ?

Published : May 27, 2026, 01:21 PM IST
Saini S Johray

ಸಾರಾಂಶ

ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿರುವಾಗಲೇ ಇಂತಹ ಘಟನೆ ನಡೆದಿರುವುದು ಆತಂಕಕಾರಿ. 'ಧುರಂಧರ್' ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದ ತಂಡಕ್ಕೆ ಈ ಕಾನೂನು ಸಮರ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಸದ್ಯಕ್ಕೆ ಆರೋಪಿ ಜೋಹ್ರ ಮೌನ ವಹಿಸಿದ್ದಾರೆ. 

ಶಾಕಿಂಗ್‌ ನ್ಯೂಸ್‌: 'ಧುರಂಧರ್' ಚಿತ್ರತಂಡದಲ್ಲಿ 'ಮೀ ಟೂ' ಕಂಪನ! ಹೋಟೆಲ್ ರೂಮಿನಲ್ಲಿ ನಡೆದಿದ್ದೇನು?

ಚಿತ್ರರಂಗ ಅಂದಮೇಲೆ ಅಲ್ಲಿ ಬಣ್ಣದ ಲೋಕದ ಹೊಳಪು ಎಷ್ಟು ಇರುತ್ತದೋ, ಅಷ್ಟೇ ಕರಾಳ ಮುಖಗಳು ಆಗಾಗ ಅನಾವರಣಗೊಳ್ಳುತ್ತಲೇ ಇರುತ್ತವೆ. ಸದ್ಯ ಸಿನಿದುನಿಯಾದಲ್ಲಿ ಅಂತಹದ್ದೇ ಒಂದು ಕಹಿ ಸುದ್ದಿ ಸಂಚಲನ ಮೂಡಿಸಿದೆ. ಬಹುನಿರೀಕ್ಷಿತ 'ಧುರಂಧರ್' (Dhurandhar) ಚಿತ್ರದ ಪ್ರೊಡಕ್ಷನ್ ಡಿಸೈನರ್ ಸೈನಿ ಎಸ್. ಜೋಹ್ರ (Saini S Johray) ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಕೇಳಿಬಂದಿದ್ದು, ಇಡೀ ಚಿತ್ರತಂಡ ಈಗ ಮುಜುಗರಕ್ಕೆ ಈಡಾಗಿದೆ.

ಕೆಲಸದ ನೆಪ, ಹೋಟೆಲ್‌ನಲ್ಲಿ ಟ್ರ್ಯಾಪ್!

ದೂರು ನೀಡಿರುವ ಮಹಿಳೆಯು ಅದೇ ಚಿತ್ರತಂಡದಲ್ಲಿ ಕೆಲಸ ಮಾಡುತ್ತಿದ್ದವರಾಗಿದ್ದು, ಅವರ ಕಥೆ ಕೇಳಿದರೆ ಎದೆ ನಡುಗುತ್ತದೆ. ದೂರಿನ ಪ್ರಕಾರ, ಪ್ರೊಡಕ್ಷನ್ ಡಿಸೈನರ್ ಸೈನಿ ಎಸ್. ಜೋಹ್ರ ಕೆಲಸದ ವಿಷಯ ಚರ್ಚಿಸಬೇಕು ಎಂಬ ನೆಪದಲ್ಲಿ ಮಹಿಳೆಯನ್ನು ಚಂಡೀಗಢದ ಪ್ರತಿಷ್ಠಿತ 'ತಾಜ್ ಹೋಟೆಲ್'ಗೆ ಕರೆಸಿಕೊಂಡಿದ್ದನು. ಮೊದಮೊದಲು ಅದು ಸಾಮಾನ್ಯ ಮೀಟಿಂಗ್ ಎಂದು ನಂಬಿದ್ದ ಆಕೆಗೆ, ಅಲ್ಲಿ ಹೋದ ನಂತರವೇ ಗೊತ್ತಾಗಿದ್ದು ಅಲ್ಲಿ ಇನ್ಯಾರೂ ಇಲ್ಲ, ಕೇವಲ ಜೋಹ್ರ ಮಾತ್ರ ಇದ್ದಾನೆ ಎಂದು!

ಮದ್ಯ ಕುಡಿಸಿ ವಿಕೃತಿ ಮೆರೆದ ಆರೋಪ:

ಸೆಪ್ಟೆಂಬರ್ 10ರ ರಾತ್ರಿ ನಡೆದ ಆ ಘಟನೆ ನಿಜಕ್ಕೂ ಭಯಾನಕವಾಗಿತ್ತು. ರಾತ್ರಿ 8:30ರ ಸುಮಾರಿಗೆ ಹೋಟೆಲ್ ತಲುಪಿದ ದೂರುದಾರ ಮಹಿಳೆಗೆ ಜೋಹ್ರ ಮದ್ಯ ಸೇವಿಸುವಂತೆ ಬಲವಂತ ಮಾಡಿದ್ದಾನೆ. ಮಹಿಳೆ ನಿರಾಕರಿಸಿದರೂ ಕೇಳದ ಆತ, ವೈನ್ ಮತ್ತು ರಮ್ ಬೆರೆಸಿದ ಪಾನೀಯವನ್ನು ಸಿದ್ಧಪಡಿಸಿ ಅದನ್ನು ಕುಡಿಯಲೇಬೇಕು ಎಂದು ಒತ್ತಾಯಿಸಿದ್ದಾನೆ. ಪಾನೀಯ ಸೇವಿಸಿದ ಕೆಲವೇ ಕ್ಷಣಗಳಲ್ಲಿ ಆಕೆಗೆ ತಲೆತಿರುಗಲು ಶುರುವಾಗಿದೆ. ಅಸ್ವಸ್ಥಗೊಂಡ ಆಕೆ ರೂಮಿನಿಂದ ಹೊರಗೆ ಹೋಗಲು ಪ್ರಯತ್ನಿಸಿದರೂ, ಕಾಮಾಂಧ ಜೋಹ್ರ ಅದಕ್ಕೆ ಅವಕಾಶ ನೀಡಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.

ನೃತ್ಯದ ಹೆಸರಲ್ಲಿ ಅಸಭ್ಯ ವರ್ತನೆ:

ಇಷ್ಟಕ್ಕೇ ನಿಲ್ಲದ ಈತನ ವಿಕೃತಿ, ನೃತ್ಯ ಕಲಿಸುವ ನೆಪದಲ್ಲಿ ಮಹಿಳೆಯ ಜೊತೆ ಅನುಚಿತವಾಗಿ ದೈಹಿಕ ಸಂಪರ್ಕ ಬೆಳೆಸಲು ಮುಂದಾಗಿದ್ದಾನೆ. ಮಹಿಳೆ ವಾಂತಿ ಮಾಡಿಕೊಂಡು ತೀವ್ರ ಅಸ್ವಸ್ಥಗೊಂಡಿದ್ದರೂ, ಆಕೆಯನ್ನು ರೂಮಿನಿಂದ ಹೊರಗೆ ಹೋಗದಂತೆ ತಡೆದು ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ವಿಷಯ ಯಾರಿಗೂ ತಿಳಿಸಬಾರದು, ತಿಳಿಸಿದರೆ ನಿನ್ನ ವೃತ್ತಿಜೀವನ ಹಾಳು ಮಾಡುತ್ತೇನೆ ಎಂದು ಬೆದರಿಕೆಯನ್ನೂ ಹಾಕಿದ್ದನಂತೆ!

ಖಾಕಿ ಕಣ್ಗಾವಲಿನಲ್ಲಿ 'ಧುರಂಧರ್' ಸೈನಿಕ!

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಚಂಡೀಗಢ ಪೊಲೀಸರು, ಸೈನಿ ಎಸ್. ಜೋಹ್ರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 74, 79, 123 ಮತ್ತು 126(2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಹ್ರ ಈಗಾಗಲೇ ಜಾಮೀನು ಪಡೆದುಕೊಂಡಿದ್ದಾನೆ ಎನ್ನಲಾಗಿದ್ದರೂ, ತನಿಖೆ ಮಾತ್ರ ಚುರುಕಾಗಿ ಸಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿರುವಾಗಲೇ ಇಂತಹ ಘಟನೆ ನಡೆದಿರುವುದು ಆತಂಕಕಾರಿ. 'ಧುರಂಧರ್' ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದ ತಂಡಕ್ಕೆ ಈ ಕಾನೂನು ಸಮರ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಸದ್ಯಕ್ಕೆ ಆರೋಪಿ ಜೋಹ್ರ ಮೌನ ವಹಿಸಿದ್ದು, ಪೊಲೀಸರ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.

ಒಟ್ಟಿನಲ್ಲಿ, ಬೆಳ್ಳಿಪರದೆಯ ಮೇಲೆ ಹೀರೋಯಿಸಂ ತೋರಿಸುವ ಚಿತ್ರರಂಗದ ಒಳಗಿನ ಇಂತಹ 'ವಿಲನ್' ಚೇಷ್ಟೆಗಳು ಸಾರ್ವಜನಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ID Card- Shocking: ಕಂಡಕ್ಟರ್ ಆಗಿದ್ದ ರಜನಿಕಾಂತ್ ಐಡಿ ಕಾರ್ಡ್ ವೈರಲ್.. ಆ ಕಾಲದಲ್ಲಿ ತಿಂಗಳ ಸಂಬಳ ಇಷ್ಟಿತ್ತು!
‌ಇಂಟರ್‌ನ್ಯಾಶನಲ್‌ ಕ್ರಿಕೆಟರ್‌ನನ್ನು ಮದುವೆಯಾಗಿರೋ 'ಹಳ್ಳಿಮೇಷ್ಟ್ರು' ಸಿನಿಮಾ ಹೀರೋಯಿನ್ ಬಿಂದಿಯಾ! ಯಾರದು?