ನಟಿ ದೀಪಿಕಾ ಪಡುಕೋಣೆ ಹಳದಿ ಬಣ್ಣದ ಬಿಕಿನಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಸ್ಪೇನ್ ನಲ್ಲಿ ಚಿತ್ರೀಕರಣದಲ್ಲಿರುವ ದೀಪಿಕಾ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಬಾಲಿವುಡ್ ನಟಿಮಣಿಯರು ಬಿಕಿನಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇದೀಗ ನಟಿ ದೀಪಿಕಾ ಪಡುಕೋಣೆ(Deepika Padukone) ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳು ಬೆರಗಾಗುವಂತೆ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಸದ್ಯ ಸ್ಪೇನ್ ನಲ್ಲಿದ್ದಾರೆ. ಶಾರುಖ್ ಖಾನ್(Shahrukh Khan) ನಟನೆಯ ಪಠಾಣ್(Pathan) ಸಿನಿಮಾದಲ್ಲಿ ನಟಿಸುತ್ತಿರುವ ದೀಪಿಕಾ ಚಿತ್ರೀಕರಣಕ್ಕೆಂದು ಸ್ಪೇನ್ ಗೆ ತೆರಳಿದ್ದಾರೆ. ಚಿತ್ರದ ಪ್ರಮುಖ ಹಾಡಿನ ದೃಶ್ಯದ ಚಿತ್ರೀಕರಣ ನಡೆಯುತ್ತಿದೆ. ಈ ಹಾಡಿಗಾಗಿ ದೀಪಿಕಾ ಸಿಕ್ಕಾಪಟ್ಟೆ ಹಾಟ್ ಆಗಿದ್ದಾರೆ.
ಹಳದಿ ಬಣ್ಣದ ಬಿಕಿನಿಯಲ್ಲಿ(Pikini) ಕಾಣಿಸಿಕೊಂಡಿರುವ ದೀಪಿಕಾ ಫೋಟೋಗಳು ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿವೆ. ದೀಪಿಕಾರ ಈ ಅವತಾರ ಕಂಡು ನೆಟ್ಟಿಗರು ದಂಗಾಗಿದ್ದಾರೆ. ಈಜುಕೊಳದಲ್ಲಿ ಚಿತ್ರೀಕರಣ ಮಾಡುತ್ತಿರುವ ದೃಶ್ಯ ಇದಾಗಿದೆ. ಮೂಲಗಳ ಪ್ರಕಾರ ಇದು ಚಿತ್ರದ ಹಾಟೆಸ್ಟ್ ಹಾಡಾಗಿದೆ ಎನ್ನಲಾಗುತ್ತಿದೆ.
ಇತ್ತೀಚಿಗೆ ನಟ ಶಾರುಖ್ ಖಾನ್ 8ಪ್ಯಾಕ್(shahrukh khan 8 pack) ಫೋಟೋ ಕೂಡ ವೈರಲ್ ಆಗಿತ್ತು. ಸ್ಪೇನ್ ನಲ್ಲಿ ಚಿತ್ರೀಕರಣ ಮಾಡುತ್ತಿರುವ ಶಾರುಖ್ ಫೋಟೋಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿತ್ತು. ಫೋಟೋದಲ್ಲಿ ಶಾರುಖ್ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಬೇರ್ ಬಾಡಿ ಪ್ರದರ್ಶನ ಮಾಡಿದ್ದ ಶಾರುಖ್ ಉದ್ದ ಕೂದಲು ಬಿಟ್ಟು ಕಾರ್ಗೋ ಪ್ಯಾಂಟ್ ನಲ್ಲಿ ಕಾಣಿಸಿಕೊಂಡಿದ್ದರು. ಶಾರುಖ್ ಹೊಸ ಲುಕ್ ಅಭಿಮಾನಿಗಳಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು. ಕಿಂಗ್ ಈಸ್ ಬ್ಯಾಕ್ ಎಂದು ಅಭಿಮಾನಿಗಳು ಸಂಭ್ರಮಿಸಿದ್ದರು.
Shah Rukh Khan 'ಪಠಾಣ್' ಚಿತ್ರದ ಗೆಟಪ್ ಲೀಕ್; ಕಿಂಗ್ ಖಾನ್ 8ಪ್ಯಾಕ್ ಫೋಟೋ ವೈರಲ್
ಇದೀಗ ದೀಪಿಕಾ ಕೂಡ ಬಿಕಿನಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಂದಹಾಗೆ ದೀಪಿಕಾ ಬಿಕಿನಿ ಧರಿಸಿ ಸದ್ದು ಮಾಡುತ್ತಿರುವುದು ಇದೇ ಹೊಸದೇನಲ್ಲ. ಈ ಹಿಂದೆ ಬಿಡುಗಡೆಯಾಗಿದ್ದ ಗೆಹರಾಯಿಯಾ(Gehraiyaan) ಸಿನಿಮಾದಲ್ಲೂ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ವಿರುದ್ಧ ಅನೇಕರು ಅಸಮಾಧಾನ ಹೊರಹಾಕಿದ್ದರು. ಆದರೆ ದೀಪಿಕಾ ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ಮತ್ತೆ ಹಳದಿ ಬಿಕಿನಿ ಧರಿಸಿ ಯುವಕರ ನಿದ್ದೆಗೆಡಿಸಿದ್ದಾರೆ.
undefined
ಸದ್ಯ ಲೀಕ್ ಆಗಿರುವ ದೀಪಿಕಾ ಮತ್ತು ಶಾರುಖ್ ಫೋಟೋಗಳು ನೋಡಿದ್ರೆ ಪಠಾಣ್ ಸಿನಿಮಾದಲ್ಲಿ ಇಬ್ಬರೂ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುಳಿವು ನೀಡುತ್ತಿವೆ. ಚಿತ್ರಕ್ಕೆ ಶಾರುಖ್ ಕೂಡ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದಾರೆ. ದೇಹವನ್ನು ಹೇಗೆ ಹುರಿಗೊಳಿಸಿದ್ದಾರೆ ಎನ್ನುವ ವಿಡಿಯೋವನ್ನು ಸಹ ಮಾಡಿದ್ದಾರಂತೆ. ಶಾರುಖ್ 8ಪ್ಯಾಕ್ ಮಾಡಿಕೊಂಡ ವಿಡಿಯೊ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಸ್ಪೇನ್‌ನಲ್ಲಿ ದೀಪಿಕಾ, ತಮ್ಮ ಹೊಸ ಮನೆ ಫೋಟೋ ಹಂಚಿಕೊಂಡ ನಟಿ!
ಇನ್ನು ಪಠಾಣ್ ಸಿನಿಮಾದಲ್ಲಿ ಜಾನ್ ಅಬ್ರಾಹಂ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪಠಾಣ್ ಚಿತ್ರಕ್ಕೆ ಸಿದ್ಧಾರ್ಥ್ ಆನಂದ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಯಶ್ ರಾಜ್ ನಿರ್ಮಾಣದಲ್ಲಿ ಸಿನಿಮಾ ಮೂಡಿಬರುತ್ತಿದೆ. ಬಹುನಿರೀಕ್ಷೆಯ ಸಿನಿಮಾ ಮುಂದಿನ ವರ್ಷ ಜನವರಿಯಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಅಂದಹಾಗೆ ಶಾರುಖ್ ಖಾನ್ ಸಿನಿಮಾ ಬಿಡುಗಡೆಯಾಗದೆ ನಾಲ್ಕೈದು ವರ್ಷಗಳಾಗಿವೆ. ಹಾಗಾಗಿ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ಕಿಂಗ್ ಖಾನ್ ಕೊನೆಯದಾಗಿ ಝೀರೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ಬಣ್ಣ ಹಚ್ಚುವುದನ್ನೇ ಬಿಟ್ಟಿದ್ದರು. ಇದೀಗ ಮತ್ತೆ ಅಭಿಮಾನಿಗಳ ಮುಂದೆ ಬರಲು ತಯಾರಾಗಿದ್ದಾರೆ. ಶಾರುಖ್ ಸಿನಿಮಾ ಜೊತೆಗೆ ಒಟಿಟಿ ಜಗತ್ತಿಗೂ ಕಾಲಿಟ್ಟಿದ್ದಾರೆ. ನಟನೆ, ನಿರ್ಮಾಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಶಾರುಖ್ ತನ್ನದೆ ಆದ ಹೊಸ ಒಟಿಟಿ ಪ್ರಾರಂಭ ಮಾಡುತ್ತಿದ್ದಾರೆ. ಈ ಬಗ್ಗೆ ಶಾರುಖ್ ಈಗಾಗಲೇ ಬಹಿರಂಗ ಪಡಿಸಿದ್ದಾರೆ. ಹೊಸ ಒಟಿಟಿ SRK Plus ಸದ್ಯದಲ್ಲೇ ಬರಲಿದೆ ಎಂದು ಘೋಷಿಸಿದ್ದಾರೆ. ಈ ಮೂಲಕ ಒಟಿಟಿ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ನಿರೀಕ್ಷೆ ಮೂಡಿಸಿದ್ದಾರೆ. ಇನ್ನು ದೀಪಿಕಾ ಪಡುಕೋಣೆ ಈ ಸಿನಿಮಾ ಜೊತೆಗೆ ಪ್ರಭಾಸ್ ನಟನೆಯ ನಾಗ್ ಅಶ್ವಿನ್ ನಿರ್ದೇಶನದ ಹೊಸ ಸಿನಿಮಾದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.