ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ 36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ಈ ಸಂದರ್ಭ ತಮ್ಮ ಅಭಿಮಾನಿಗಳಿಗೆ ಸ್ಪೆಷಲ್ ಟ್ರೀಟ್ ಕೊಟ್ಟಿದ್ದಾರೆ. ತಮ್ಮ ಮುಂಬರುವ ಸಿನಿಮಾ ಗೆಹರಿಯಾದಿಂದ ಲೇಟೆಸ್ಟ್ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ. ಒಂದು ಪೋಸ್ಟರ್‌ನಲ್ಲಿ ಸಿದ್ಧಾಂತ್ ಚತುರ್ವೇದಿ ಜೊತೆ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಇತರ ಪೋಸ್ಟರ್‌ನಲ್ಲಿ ಅನನ್ಯ ಪಾಂಡೆ ಮತ್ತು ಧೈರ್ಯ ಕರ್ವಾವನ್ನು ಒಳಗೊಂಡಿರುವ ಚಿತ್ರದ ಪಾತ್ರವರ್ಗದ ಏಕವ್ಯಕ್ತಿ ಪೋಸ್ಟರ್ಗಳಾಗಿವೆ. ಪೋಸ್ಟರ್‌ಗಳನ್ನು ಹಂಚಿಕೊಳ್ಳುತ್ತಾ, ಬರ್ತ್‌ಡೇ ಗರ್ಲ್ ಕ್ಯಾಪ್ಶನ್ ಕೂಡಾ ಕೊಟ್ಟಿದ್ದಾರೆ.
ನೀವು ನಮಗೆ ಧಾರೆ ಎರೆದ ಎಲ್ಲಾ ಪ್ರೀತಿಗೆ ಸ್ವಲ್ಪ ಹುಟ್ಟುಹಬ್ಬದ ಉಡುಗೊರೆ ಎಂದು ಬರೆದಿದ್ದಾರೆ. ನಟಿ ಚಿತ್ರದ ಪರಿಷ್ಕೃತ ಬಿಡುಗಡೆ ದಿನಾಂಕವನ್ನೂ ಘೋಷಿಸಿದ್ದಾರೆ. ಈ ಹಿಂದೆ ಜನವರಿ 25 ರಂದು ಬಿಡುಗಡೆಯಾಗಬೇಕಿದ್ದ ಸಿನಿಮಾ ಈಗ ಫೆಬ್ರವರಿ 11 ರಂದು OTT ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ. ಚಿತ್ರದ ಪೋಸ್ಟರ್‌ಗಳನ್ನು ಹಂಚಿಕೊಂಡ ಚಿತ್ರದ ನಿರ್ದೇಶಕ ಶಕುನ್ ಬಾತ್ರಾ ಜೀವನವು ಉತ್ತಮವಾಗಿದೆ ಮತ್ತು ನೀವು ಕಾಯುತ್ತಿರುವಾಗ ಅದು ಉತ್ತಮಗೊಳ್ಳುತ್ತದೆ ಎಂದು ಬರೆದಿದ್ದರು.
ದೀಪಿಕಾ ಕಿಸ್ ವೈರಲ್, ನಟಿಯ ಬಿಕಿನಿ ಲುಕ್‌ಗೆ ಫ್ಯಾನ್ಸ್ ಫಿದಾ!
ಟೀಸರ್ ನೋಡಿದರೆ ಈ ಸಿನಿಮಾ ತ್ರಿಕೋನ ಪ್ರೇಮಕತೆಯನ್ನು ಆಧರಿಸಿದೆ ಕಾಣುತ್ತದೆ. ಹೊರಬಿದ್ದಿರುವ ಟೀಸರ್ ನಲ್ಲಿ ದೀಪಿಕಾ-ಸಿದ್ಧಾಂತ್ ರ ರೊಮ್ಯಾಂಟಿಕ್ ದೃಶ್ಯಗಳು ಕಂಡು ಬರುತ್ತಿವೆ. ಸಮುದ್ರತೀರದಲ್ಲಿ ಕುಳಿತು ಇಬ್ಬರೂ ಪರಸ್ಪರ ಚುಂಬಿಸುತ್ತಿರುವ ದೃಶ್ಯ ವೈರಲ್ ಆಗುತ್ತಿದೆ. ದೀಪಿಕಾ ಮತ್ತು ಸಿದ್ಧಾಂತ್ ಅವರ ಅದ್ಭುತ ಕೆಮಿಸ್ಟ್ರಿಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಕೆಲವು ಅಭಿಮಾನಿಗಳು ದೀಪಿಕಾ ಅವರ ಬಿಕಿನಿ ಲುಕ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು 9 ವರ್ಷಗಳ ನಂತರ ದೀಪಿಕಾ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಅವರು ಕೊನೆಯದಾಗಿ ಛಪಾಕ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ದೀಪಿಕಾ ತಮ್ಮ ಚಿತ್ರದ ಟೀಸರ್ ಅನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಜೊತೆಗೆ ಸೆಲೆಬ್ರಿಟಿಗಳು ಕೂಡ ಕಮೆಂಟ್ ಮಾಡುತ್ತಿದ್ದಾರೆ.
ದೀಪಿಕಾ ಪಡುಕೋಣೆ ಟೀಸರ್ ಶೇರ್ ಮಾಡಿ ನನ್ನ ಹೃದಯದ ತುಣುಕು ಎಂದು ಕ್ಯಾಪ್ಷನ್ ನೀಡಿದ್ದಾರೆ. ಸಿನಿಮಾದಲ್ಲಿ ಇಬ್ಬರು ಜೋಡಿಗಳಾದ ದೀಪಿಕಾ ಮತ್ತು ಧೈರ್ಯ ಕರ್ವಾ, ಅನನ್ಯ ಪಾಂಡೆ ಮತ್ತು ಸಿದ್ಧಾಂತ್ ಚತುರ್ವೇದಿ, ತಮ್ಮ ಕಾಂಪ್ಲೆಕ್ಸ್ ರಿಲೆಷನ್‌ಶಿಪ್ ಜೊತೆ ಡೀಲ್ ಮಾಡುತ್ತಾರೆ. ನಾಸಿರುದ್ದೀನ್ ಶಾ ಮತ್ತು ರಜತ್ ಕಪೂರ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಮತ್ತು ವಯಾಕಾಮ್ 18 ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಿಸಿದೆ. 2012 ರಲ್ಲಿ ಏಕ್ ಮೈನ್ ಔರ್ ಏಕ್ ತು ಮತ್ತು 2016 ರಲ್ಲಿ ಕಪೂರ್ ಅಂಡ್ ಸನ್ಸ್ ನಂತರ ಗೆಹ್ರಾಯಿಯಾ ಶಕುನ್ ಅವರ ಮೂರನೇ ಚಲನಚಿತ್ರವಾಗಿದೆ. ಸಿನಿಮಾದ ಕ್ಲಿಪ್ ಶೇರ್ ಮಾಡಿಕೊಂಡಿರುವ ಕರಣ್ ಜೋಹರ್ ಗೆಹ್ರೈಯನ್ ಆಧುನಿಕ ಸಂಬಂಧಗಳ ಆಳವಾದ, ನೈಜ ಮತ್ತು ಪ್ರಾಮಾಣಿಕ ಅವಲೋಕನವಾಗಿದೆ. ಶಕುನ್ ಮಾನವನ ಭಾವನೆಗಳ ಸಂಕೀರ್ಣತೆಯನ್ನು ತೋರಿಸಲು ಪ್ರಯತ್ನಿಸಿದ್ದಾರೆ. ಅವರ ಶ್ರಮ ಮತ್ತು ತಾರೆಯರ ಪ್ರಾಮಾಣಿಕ ಅಭಿನಯ ಚಿತ್ರದ ಕಥೆಯನ್ನು ಅದ್ಭುತವಾಗಿಸಿದೆ ಎಂದು ಬರೆದುಕೊಂಡಿದ್ದಾರೆ.
ಕಿಚ್ಚನ ಬಾಡಿಗಾರ್ಡ್ ಟ್ಯಾಟೂ ನೋಡಿ ಪತ್ನಿಗೆ ಕರೆಮಾಡಿದ ರಣ್‌ವೀರ್, ಕನ್ನಡದಲ್ಲೇ ದೀಪಿಕಾ ಮಾತು!
ಗೆಹ್ರಾಯನ್ ಚಿತ್ರವನ್ನು ಶಕುನ್ ಬಾತ್ರಾ ನಿರ್ದೇಶಿಸಿದ್ದಾರೆ ಮತ್ತು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ನಿರ್ಮಿಸಿದ್ದಾರೆ. ಶಕುನ್ ಬಾತ್ರಾ ಅವರ ಚಲನಚಿತ್ರದ ಚಿತ್ರೀಕರಣವು 2020 ರಲ್ಲಿ ಪ್ರಾರಂಭವಾಯಿತು. ಚಿತ್ರದ ಚಿತ್ರೀಕರಣಕ್ಕಾಗಿ ಅಲಿಬಾಗ್‌ಗೆ ಪ್ರಯಾಣಿಸುವಾಗ ಮತ್ತು ಅಲ್ಲಿಂದ ಬರುವಾಗ ತಾರೆಯರು ಆಗಾಗ್ಗೆ ಕಾಣಿಸಿಕೊಂಡರು - ಅವರು ಚಿತ್ರದ ಶೂಟಿಂಗ್ ವೇಳಾಪಟ್ಟಿಗಾಗಿ ಗೋವಾದಲ್ಲಿದ್ದರು. ಗೋವಾ, ಮುಂಬೈ ಮತ್ತು ಅಲಿಬಾಗ್‌ನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ