ಸುಳ್ಳಿನ ವಿರುದ್ಧ ಸಾಕ್ಷಿ ನುಡಿಯುತ್ತಿದೆ ಈ ವೈರಲ್ ದೃಶ್ಯ; ಬಾಲಿವುಡ್ ಸ್ಟಾರ್‌ ನಟಿ ಬಂಡವಾಳ ಬಯಲು; 'ಓಂ ಶಾಂತಿ ಓಂ'

Published : Apr 09, 2026, 11:58 AM ISTUpdated : Apr 09, 2026, 12:06 PM IST
Deepika Padukone

ಸಾರಾಂಶ

ಅಚ್ಚರಿ ಎಂಬಂತೆ ನಟಿ ದೀಪಿಕಾ ಪಡುಕೋಣೆಯವರು ಯಾವುದೇ ಸಂದರ್ಶನದಲ್ಲಿ ಮಾತನ್ನಾಡುವಾಗ ತಮ್ಮ ಮೊದಲ ಸಿನಿಮಾ ಕನ್ನಡ ಎಂದು ಹೇಳುವ ಬದಲು ಹಿಂದಿಯ 'ಓಂ ಶಾಂತಿ ಓಂ' ಎಂದೇ ಹೇಳುತ್ತಾರೆ. ಕನ್ನಡಿಗರಿಗೆ ದೀಪಿಕಾ ಮೇಲೆ ಅಭಿಮಾನ ಇದ್ದರೂ ಈ ನಟಿಗೆ ಮಾತ್ರ ಅದೇನೋ ಹೇಳುವಂತೆ ಕನ್ನಡದ ಮೇಲೆ ಅಲರ್ಜಿ ಎನ್ನಬಹುದು. ಅದೇನೇ ಇದ್ದರೂ ನಿಜವಾದ ಇತಿಹಾಸ ಎಂದಿಗೂ ಬದಲಾಗೋದಿಲ್ಲ.

ಸ್ಯಾಂಡಲ್‌ವುಡ್‌ನಿಂದ ಶುರುವಾದ ‘ಐಶ್ವರ್ಯ’ ಪಯಣ!

ಇಂದು ದೀಪಿಕಾ ಪಡುಕೋಣೆ (Deepika Padukone) ಎಂದರೆ ಕೇವಲ ಬಾಲಿವುಡ್ ನಟಿ ಮಾತ್ರವಲ್ಲ, ಇಡೀ ವಿಶ್ವವೇ ಮೆಚ್ಚುವ ಗ್ಲೋಬಲ್ ಐಕಾನ್! ಹಾಲಿವುಡ್‌ನಿಂದ ಹಿಡಿದು ಕಾನ್ ಫಿಲ್ಮ್ ಫೆಸ್ಟಿವಲ್‌ವರೆಗೆ ಭಾರತದ ಕೀರ್ತಿ ಪತಾಕೆ ಹಾರಿಸಿರುವ ಈ 'ಡಿಂಪಿ' ಸುಂದರಿಯ ಸಿನಿ ಪಯಣದ ಬೇರುಗಳು ಇರುವುದು ನಮ್ಮ ಹೆಮ್ಮೆಯ ಕನ್ನಡ ನೆಲದಲ್ಲಿ ಎಂಬುದು ವಿಶೇಷ. ಹೌದು, ದೀಪಿಕಾ ಪಡುಕೋಣೆ ಎಂಬ ಪ್ರತಿಭೆಯನ್ನು ಬೆಳ್ಳಿತೆರೆಗೆ ಮೊದಲು ಪರಿಚಯಿಸಿದ್ದು ನಮ್ಮ ಸ್ಯಾಂಡಲ್‌ವುಡ್!

ರಿಯಲ್ ಸ್ಟಾರ್ ಜೊತೆಗಿನ ಆ ‘ಕ್ರೇಜಿ’ ಆರಂಭ!

ವರ್ಷ 2006; ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎದ್ದಿದ್ದ ಸಮಯ. ಆಗ ತಾನೇ ಮಾಡೆಲಿಂಗ್ ಲೋಕದಲ್ಲಿ ಮಿಂಚುತ್ತಿದ್ದ ಬೆಂಗಳೂರಿನ ಈ ಹುಡುಗಿ, 'ರಿಯಲ್ ಸ್ಟಾರ್' ಉಪೇಂದ್ರ ಅವರಿಗೆ ಜೋಡಿಯಾಗಿ 'ಐಶ್ವರ್ಯಾ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಸ್ಟೈಲಿಶ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ದೀಪಿಕಾ ಅವರಲ್ಲಿದ್ದ ಗ್ಲಾಮರ್ ಮತ್ತು ನಟನಾ ಸಾಮರ್ಥ್ಯವನ್ನು ಗುರುತಿಸಿ ಈ ಚಿತ್ರದ ಮೂಲಕ ಲಾಂಚ್ ಮಾಡಿದ್ದರು. ಉಪ್ಪಿ ಅವರ ವಿಭಿನ್ನ ಮ್ಯಾನರಿಸಂ ಮತ್ತು ದೀಪಿಕಾ ಅವರ ಕಣ್ಣುಸೆಳೆಯುವ ಸೌಂದರ್ಯಕ್ಕೆ ಕನ್ನಡಿಗರು ಅಕ್ಷರಶಃ ಫಿದಾ ಆಗಿದ್ದರು. ಇಂದಿಗೂ 'ಐಶ್ವರ್ಯಾ' ಸಿನಿಮಾದ ಹಾಡುಗಳು ಕನ್ನಡಿಗರ ಫೇವರಿಟ್ ಲಿಸ್ಟ್‌ನಲ್ಲಿವೆ.

ಬೆಂಗಳೂರಿನಿಂದ ಬಾಲಿವುಡ್‌ಗೆ ಹಾರಿದ ಪಾರಿಜಾತ!

ಕನ್ನಡದಲ್ಲಿ ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಕಂಡ ದೀಪಿಕಾ ಅವರಿಗೆ ಬಾಲಿವುಡ್‌ನ ಮಾಯಾನಗರಿ ಕೆಂಪು ಹಾಸಿನ ಸ್ವಾಗತ ಕೋರಿತು. ಅದು ಅಂತಿಂಥಾ ಆಫರ್ ಅಲ್ಲ, ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ 'ಓಂ ಶಾಂತಿ ಓಂ' ಚಿತ್ರದಲ್ಲಿ ನಟಿಸುವ ಬೃಹತ್ ಅವಕಾಶ! ಫರಾ ಖಾನ್ ನಿರ್ದೇಶನದ ಈ ಚಿತ್ರದಲ್ಲಿ ಶಾಂತಿಪ್ರಿಯಾ ಎಂಬ ಪಾತ್ರದಲ್ಲಿ ದೀಪಿಕಾ ನೀಡಿದ ಎಂಟ್ರಿ ಇಂದಿಗೂ ಭಾರತೀಯ ಚಿತ್ರರಂಗದ ಬೆಸ್ಟ್ ಡೆಬ್ಯೂಗಳಲ್ಲಿ ಒಂದು. ಶಾರುಖ್ ಪಕ್ಕದಲ್ಲಿ ನಟಿಸುತ್ತಿದ್ದರೂ ದೀಪಿಕಾ ಎಲ್ಲೂ ನರ್ವಸ್ ಆಗದೆ, ಅದ್ಭುತ ನಟನೆಯ ಮೂಲಕ ಓವರ್ ನೈಟ್ ಸ್ಟಾರ್ ಆಗಿಬಿಟ್ಟರು.

ಸಕ್ಸಸ್ ಮೆಟ್ಟಿಲೇರಿದ ನಗುಮುಖದ ಸುಂದರಿ

'ಓಂ ಶಾಂತಿ ಓಂ' ಸೂಪರ್ ಹಿಟ್ ಆಗುತ್ತಿದ್ದಂತೆ ದೀಪಿಕಾ ಅವರ ಅದೃಷ್ಟದ ಬಾಗಿಲು ತೆರೆಯಿತು. ಅಲ್ಲಿಂದ ಶುರುವಾದ ಅವರ ಗೆಲುವಿನ ಓಟ ಇಂದಿಗೂ ನಿಂತಿಲ್ಲ. ರಣಬೀರ್ ಕಪೂರ್, ರಣವೀರ್ ಸಿಂಗ್, ಅಮಿತಾಬ್ ಬಚ್ಚನ್ ಅಂತಹ ದೈತ್ಯ ನಟರ ಜೊತೆ ನಟಿಸಿ ನಂಬರ್ ಒನ್ ಸ್ಥಾನಕ್ಕೆ ಏರಿದರು. 'ಪದ್ಮಾವತ್', 'ಬಾಜಿರಾವ್ ಮಸ್ತಾನಿ'ಯಂತಹ ಸಿನಿಮಾಗಳ ಮೂಲಕ ರಾಣಿಯಂತೆ ಮೆರೆದರು.

ಆದರೆ, ಕನ್ನಡಿಗರಿಗೆ ಮಾತ್ರ ದೀಪಿಕಾ ಎಂದಿಗೂ ನಮ್ಮೂರಿನ ಹುಡುಗಿ. ಆಕೆ ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದರೂ, ಆಕೆಯ ಮೊದಲ ಸಿನಿಮಾ ‘ಕನ್ನಡ’ ಎನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಸ್ಯಾಂಡಲ್‌ವುಡ್ ಎಂಬ ಲಕ್ಕಿ ಫ್ಲಾಟ್‌ಫಾರ್ಮ್‌ನಿಂದ ಶುರುವಾದ ದೀಪಿಕಾ ಅವರ ಈ 'ಐಶ್ವರ್ಯ'ದ ಹಾದಿ, ಇಂದಿಗೂ ಯುವ ನಟಿಯರಿಗೆ ದೊಡ್ಡ ಸ್ಫೂರ್ತಿ!

ಆದರೆ, ಅಚ್ಚರಿ ಎಂಬಂತೆ ನಟಿ ದೀಪಿಕಾ ಪಡುಕೋಣೆಯವರು ಯಾವುದೇ ಸಂದರ್ಶನದಲ್ಲಿ ಮಾತನ್ನಾಡುವಾಗ ತಮ್ಮ ಮೊದಲ ಸಿನಿಮಾ ಕನ್ನಡ ಎಂದು ಹೇಳುವ ಬದಲು ಹಿಂದಿಯ 'ಓಂ ಶಾಂತಿ ಓಂ' ಎಂದೇ ಹೇಳುತ್ತಾರೆ. ಕನ್ನಡಿಗರಿಗೆ ದೀಪಿಕಾ ಮೇಲೆ ಅಭಿಮಾನ ಇದ್ದರೂ ಈ ನಟಿಗೆ ಮಾತ್ರ ಅದೇನೋ ಹೇಳುವಂತೆ ಕನ್ನಡದ ಮೇಲೆ ಅಲರ್ಜಿ ಎನ್ನಬಹುದು. ಅದೇನೇ ಇದ್ದರೂ ನಿಜವಾದ ಇತಿಹಾಸ ಎಂದಿಗೂ ಬದಲಾಗೋದಿಲ್ಲ. ಸದ್ಯಕ್ಕೆ ಸೋಷಿಯಲ್ ಮೀಡಿಯಾಗಲಲ್ಲಿ ದೀಪಿಕಾ ನಟನೆಯ 'ಐಶ್ವರ್ಯಾ' ಚಿತ್ರದ ಒಂದು ದೃಶ್ಯ ಆಕೆ ಕನ್ನಡದಲ್ಲಿ ನಟಿಸಿರುವ ಬಗ್ಗೆ ಸಾಕ್ಷಿ ನುಡಿಯುವಂತೆ ಓಡಾಡುತ್ತಿದೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸ್ಟೈಲ್ ಮನ್ನಾರ್ ಫ್ಯಾನ್ಸ್‌ಗೆ ಹಬ್ಬ: 75ರ ಹರೆಯದ ಸೂಪರ್ ಸ್ಟಾರ್‌ ನಟನ 2 ಸಿನಿಮಾ ಸದ್ಯದಲ್ಲೇ ತೆರೆಗೆ!
ಹಣದಾಸೆಗೆ ಇನ್‌ಸ್ಟಾಗ್ರಾಂ ಸಬ್‌ಸ್ಕ್ರಿಪ್ಷನ್ ಅಕೌಂಟ್ ಮಾಡಿದ ನಟಿ; ₹399 ಪಾವತಿಸಿದವರ ಬೇಡಿಕೆಗೆ ನಟಿ ಶಾಕ್!