ಸೋಂಕಿತರ ಸಂಖ್ಯೆ 9 ಲಕ್ಷಕ್ಕೆ, ವಿಶ್ವಾದ್ಯಂತ 43000 ಮಂದಿ ಬಲಿ!

By Kannadaprabha NewsFirst Published Apr 2, 2020, 8:55 AM IST
Highlights

9 ಲಕ್ಷದತ್ತ ಸೋಂಕಿತರ ಸಂಖ್ಯೆ| ಕೋವಿಡ್‌ಗೆ ವಿಶ್ವಾದ್ಯಂತ 43000 ಮಂದಿ ಬಲಿ. 1..85 ಲಕ್ಷ ಜನ ಗುಣಮುಖ| ಫೆಬ್ರವರಿ ಅಂತ್ಯದಲ್ಲಿ ಮೊದಲ ಬಲಿಯಾದ ಇಟಲಿಯಲ್ಲಿ ಈವರೆಗೆ ಒಟ್ಟು 12,428 ಮಂದಿ ಸಾವು 

ಪ್ಯಾರೀಸ್‌(ಏ.02): ಚೀನಾದಲ್ಲಿ ಹುಟ್ಟಿವಿಶ್ವದೆಲ್ಲೆಡೆ ಮರಣ ಮಾರುತವನ್ನೇ ಉಂಟು ಮಾಡಿರುವ ಕೊರೋನಾ ಒಟ್ಟು 43,082 ಮಂದಿಯನ್ನು ಆಹುತಿ ಪಡೆದಿದೆ. 865,970 ಮಂದಿ ಸೋಂಕಿಗೆ ತುತ್ತಾಗಿದ್ದು, ವಿಶ್ವದ 200 ರಾಷ್ಟ್ರಗಳಲ್ಲಿ ಈ ಮಾರಿ ಕ್ರೌರ್ಯ ಮೆರೆದಿದೆ. ಒಟ್ಟು 1.85 ಲಕ್ಷ ಜನ ಗುಣಮುಖರಾಗಿದ್ದಾರೆ.

ಫೆಬ್ರವರಿ ಅಂತ್ಯದಲ್ಲಿ ಮೊದಲ ಬಲಿಯಾದ ಇಟಲಿಯಲ್ಲಿ ಈವರೆಗೆ ಒಟ್ಟು 12,428 ಮಂದಿ ಅಸುನೀಗಿದ್ದಾರೆ. 105,792 ಮಂದಿಗೆ ವ್ಯಾಧಿ ತಟ್ಟಿದ್ದು, 15,729 ಮಂದಿ ಗುಣ ಮುಖರಾಗಿದ್ದಾರೆ. ಸ್ಪೇನ್‌ನನಲ್ಲಿ 102,136 ಮಂದಿಗೆ ಸೋಕು ಆವರಿಸಿದ್ದು, 9053 ಮಂದಿ ಕೊನೆಯುಸಿರೆಳೆದಿದ್ದಾರೆ. ವೈರಸ್‌ನ ಉಗಮ ಸ್ಥಾನ ಚೀನಾ ಚೇತರಿಸಿಕೊಳ್ಳುತ್ತಿದ್ದು, ಸೋಂಕಿತರ ಹಾಗೂ ಸಾವಿನ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಅಲ್ಲಿ 3312 ಸಾವು ಸಂಭವಿಸಿದ್ದು, 81,554 ಮಂದಿಗೆ ಸೋಂಕು ತಟ್ಟಿದೆ. 76,238 ಮಂದಿ ಗುಣ ಮುಖರಾಗಿದ್ದಾರೆ.

ಇನ್ನಷ್ಟು ಮಸೀದಿಗಳಲ್ಲಿ ದೆಹಲಿ ವೈರಸ್‌ ಹಬ್ಬುವ ಅಪಾಯ!

ಇದೇ ವೇಳೆ ವಿಶ್ವದಲ್ಲೇ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಹೊಂದಿರುವ ಅತೀ ಶ್ರೀಮಂತ ರಾಷ್ಟ್ರ ಅಮೆರಿಕಾದಲ್ಲಿ ಸೊಂಕಿತರ ಸಂಖ್ಯೆ ಎರಡು ಲಕ್ಷದತ್ತ ಹೊರಳಿದ್ದು, ಈವರೆಗೆ 189633 ಮಂದಿ ಸೋಂಕಿತರಿದ್ದಾರೆ. ಸಾವು 4081ಕ್ಕೆ ಏರಿದೆ.

43,082- ವಿಶ್ವಾದ್ಯಂತ ಒಟ್ಟು ಸತ್ತವರು

865,970- ವಿಶ್ವಾದ್ಯಂತ ಒಟ್ಟು ಸೋಂಕಿತರು

200- ಸೋಂಕು ಹರಡಿರುವ ರಾಷ್ಟ್ರಗಳು

click me!