
ಬಹುಭಾಷಾ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಇದ್ದಕ್ಕಿದ್ದಂತೆ 98 ಕೆಜಿ ತೂಕ ಇಳಿಸಿಕೊಂಡು, ಅಚ್ಚರಿ ಮೂಡಿಸಿದ್ದಾರೆ. ಕಿರುತೆರೆ ಜನಪ್ರಿಯ ಮನೋರಂಜನಾ ಕಾರ್ಯಕ್ರಮ 'ದಿ ಕಪಿಲ್ ಶರ್ಮಾ' ಶೋನಲ್ಲಿ ಕಾಣಿಸಿಕೊಂಡು, ತಮ್ಮ ತೂಕದ ಬಗ್ಗೆ ರಿವೀಲ್ ಮಾಡಿದ್ದಾರೆ. ಒಂದು ಕಾಲದಲ್ಲಿ 200 ಕೆಜಿ ಇದ್ದ ಗಣೇಶ್ ಆಚಾರ್ಯ 98 ಇಳಿಸಿಕೊಂಡಿದ್ದು ಹೇಗೆ? ಹಾಗಿದ್ರೆ ಈಗ ಎಷ್ಟು ಕೆಜಿ ಇದ್ದಾರೆ?
9 ತಿಂಗಳಲ್ಲಿ 23 ಕೆಜಿ ತೂಕ ಇಳಿಸಿಕೊಂಡ ಹುಡುಗಿಯ ಫಿಟ್ನೆಸ್ ಸ್ಟೋರಿ!
ಮನೋರಂಜನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ಕಲಾವಿದನಿಗೂ ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ಇದ್ದೇ ಇರುತ್ತದೆ. ಜಿಮ್, ಯೋಗ ಅಂತೆಲ್ಲಾ ವರ್ಕೌಟ್ ಮಾಡಿ ಸಣ್ಣಗಾಗುತ್ತಾರೆ. ಇನ್ನೂ ಕೆಲವರು ಡ್ಯಾನ್ಸ್ ಮಾಡಿ ತೂಕ ಇಳಿಸಿಕೊಳ್ಳುತ್ತಾರೆ. ಆದರೆ ಡ್ಯಾನ್ಸ್ ಮಾಸ್ಟರೇ ಇಷ್ಟೊಂದು ದಪ್ಪ ಹೇಗಿರುತ್ತಾರೆ? ಇದು ಎಲ್ಲರಲ್ಲಿ ಮೂಡುವ ಕಾಮನ್ ಪ್ರಶ್ನೆ. ಈ ಪ್ರಶ್ನೆಗೆ ಗಣೇಶ್ ಆಚಾರ್ಯ ಅವರಿಗೆ ಉತ್ತರಿಸುವ ಟೈಂ ಬಂದಿದೆ.
ಸಣ್ಣ ಆಗಿದ್ದು ಹೇಗೆ?
ಅರೋಗ್ಯ ಹದಗೆಟ್ಟುತ್ತಿದ್ದಂತೆ ಗಣೇಶ್ ಆಚಾರ್ಯ ವರ್ಕೌಟ್ ಮಾಡಲು ಆರಂಭಿಸಿದ್ದಾರೆ. ಪ್ರತಿ ದಿನ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ಫೋಟೋ ಹಾಗೂ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು. ಗಣೇಶ್ ಸಣ್ಣ ಆಗಲು ಮಾಸ್ಟರ್ ಅಜಯ್ ನಾಯ್ಡು ತರಬೇತಿ ನೀಡಿದ್ದಾರೆ.
ಮತ್ತೆ ಪೋರ್ನ್ ನೋಡ್ತಾ ವಿದ್ಯಾರ್ಥಿನಿಯನ್ನು ಮಂಚಕ್ಕೆ ಕರೆದ ಕೋರಿಯೋಗ್ರಾಫರ್?
'ಇಷ್ಟು ವರ್ಷ ಜನರು ದಪ್ಪ ಇರುವ ಗಣೇಶ್ ನೋಡಿದ್ದಾರೆ. ಸಣ್ಣಗಾದರೆ ಗಣೇಶ್ ಹೇಗೆ ಕಾಣಿಸುತ್ತಾರೆ ಎಂದು ಕಲ್ಪಿಸಿಕೊಳ್ಳುತ್ತಿದ್ದರು. ಈಗ ಅದನ್ನು ಸಾಬೀತು ಮಾಡಬೇಕೆಂಬ ಛಲದಲ್ಲಿ ವರ್ಕೌ ಔಟ್ ಶುರು ಮಾಡಿದ್ದು. ತಮ್ಮ ಬಹುತೇಕ ಬಟ್ಟೆಗಳು ಈಗ ತುಂಬಾ ಲೂಸ್ ಆಗಿವೆ,' ಎನ್ನುತ್ತಾರೆ ತೂಕ ಇಳಿಸಿಕೊಂಡ ಗಣೇಶ್.
ಗಣೇಶ್ ವಿಡಿಯೋ ಹಾಗೂ ಪ್ರೋಮೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವರ್ಕೌಟ್, ಫುಡ್ ಡಯಟ್ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ತೂಕ ಇಳಿಸಿಕೊಳ್ಳುವ ಜರ್ನಿಯಲ್ಲಿ ಇರೋರಿಗೆ ಗಣೇಶ್ ಸ್ಪೂರ್ತಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.