ಸವಾಲುಗಳು ಬರುತ್ತವೆ, ನೀವು ಗೆದ್ದು ಬರುತ್ತೀರಿ ಎನ್ನುವ ಖಾತ್ರಿ ಇದೆ; ಸಮಂತಾಗೆ ಚಿರಂಜೀವಿ ಪತ್ರ

By Shruthi Krishna  |  First Published Oct 31, 2022, 10:12 AM IST

ತೆಲುಗು ಮೆಗಾಸ್ಟಾರ್ ಚಿರಂಜೀವಿ ಕೂಡ ಸಮಂತಾ ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಚಿರಂಜೀವಿ, ಸವಾಲುಗಳು ಬರುತ್ತಿರುತ್ತವೆ, ಆದನ್ನು ಗೆದ್ದು ಬರುತ್ತೀರಿ ಎನ್ನುವ ನಂಬಿಕೆ ಇದೆ ಎಂದು ಹೇಳಿದ್ದಾರೆ. 


ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಕೆಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಈ ಬಗ್ಗೆ ಸ್ಯಾಮ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಆದರೆ ಈಗ ಆನಾರೋಗ್ಯದ ಬಗ್ಗೆ ಮೌನ ಮುರಿದಿರುವ ಸಮಂತಾ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಬಹಿರಂಗ ಪಡಿಸಿದ್ದಾರೆ. Myositis ಎನ್ನುವ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹಳಿದ್ದಾರೆ. ಸಮಂತಾ ತನ್ನ ಅನಾರೋಗ್ಯಯದ ಬಗ್ಗೆ ಬಹಿರಂಗ ಪಡಿಸುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ. ನೆಚ್ಚಿನ ನಟಿ ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಸ್ಟಾರ್ ಕಲಾವಿದರು ಸಹ ಶೀಘ್ರ ಗುಣುಮುಖರಾಗುವಂತೆ ವಿಶ್ ಮಾಡುತ್ತಿದ್ದಾರೆ. 

ಇದೀಗ ತೆಲುಗು ಮೆಗಾಸ್ಟಾರ್ ಚಿರಂಜೀವಿ ಕೂಡ ಸಮಂತಾ ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಚಿರಂಜೀವಿ, ಸವಾಲುಗಳು ಬರುತ್ತಿರುತ್ತವೆ, ಆದನ್ನು ಗೆದ್ದು ಬರುತ್ತೀರಿ ಎನ್ನುವ ನಂಬಿಕೆ ಇದೆ ಎಂದು ಹೇಳಿದ್ದಾರೆ. ಕಾಲ ಕಾಲಕ್ಕೆ ಸವಾಲುಗಳು ಬರುತ್ತವೆ. ಇದು ನಮಗೆ ನಮ್ಮೊಳಗಿನ ಶಕ್ತಿಯನ್ನು ಕಂಡುಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ನೀವು ಇನ್ನು ಹೆಚ್ಚಿನ ಶಕ್ತಿ ಹೊಂದಿರುವ ಅದ್ಭುತ ಹುಡುಗಿ. ನೀವು ಈ ಸವಾಲನ್ನು ಜಯಿಸುತ್ತೀರಿ ಎನ್ನುವ ಖಾತ್ರಿ ನನಗಿದೆ. ನಿಮಗೆ ಮತ್ತಷ್ಟು ಧೈರ್ಯ ಬರಲಿ ಎಂದು ಹಾರೈಸುತ್ತೇನೆ. ಶೀಘ್ರ ಚೇತರಿಸಿಕೊಳ್ಳಿ' ಎಂದು ಹೇಳಿದ್ದಾರೆ.

Wishing you speedy recovery!! pic.twitter.com/ZWGUv767VD

— Chiranjeevi Konidela (@KChiruTweets)

Tap to resize

Latest Videos

ನಟಿ ಸಮಂತಾ ರುತ್ ಪ್ರಭುಗೆ Myositis ಕಾಯಿಲೆ: ಈ ರೋಗದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ..

ಅನಾರೋಗ್ಯದ ಬಗ್ಗೆ ಸಮಂತಾ ಪೋಸ್ಟ್, ‘ಯಶೋದಾ ಚಿತ್ರದ ಟ್ರೇಲರ್​ಗೆ ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿ ಆಯಿತು. ನಿಮ್ಮ ಪ್ರೀತಿ ನನಗೆ ಸವಾಲುಗಳನ್ನು ಎದುರಿಸಲು ಶಕ್ತಿ ನೀಡಿದೆ. ಕೆಲ ತಿಂಗಳ ಹಿಂದೆ ನನ್ನಲ್ಲಿ Myositis ಹೆಸರಿನ ಸಮಸ್ಯೆ ಇರುವುದು ಪತ್ತೆ ಆಯಿತು. ಇದು ಕಡಿಮೆ ಆದ ನಂತರದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕು ಎಂದುಕೊಂಡಿದ್ದೆ. ಆದರೆ, ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಸಮಯವನ್ನು ಇದು ತೆಗೆದುಕೊಳ್ಳುತ್ತಿದೆ’ 

ಸಮಂತಾಳನ್ನು ಮೊದಲು ಪ್ರೀತಿಸಿದ್ದು ನಾನು: ವಿಜಯ್ ದೇವರಕೊಂಡ ಶಾಕಿಂಗ್ ಹೇಳಿಕೆ

‘ಶೀಘ್ರದಲ್ಲೇ ನಾನು ಸಂಪೂರ್ಣ ಗುಣಮುಖ ಆಗುತ್ತೇನೆ ಎಂಬ ಭರವಸೆಯನ್ನು ವೈದ್ಯರು ನೀಡಿದ್ದಾರೆ. ನನ್ನ ಜೀವನದಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಒಳ್ಳೆಯ ಹಾಗೂ ಕೆಟ್ಟ ದಿನ ಎರಡೂ ಇದ್ದವು. ಇದನ್ನು ನಿರ್ವಹಿಸಲು ಸಾಧ್ಯವೇ ಇಲ್ಲ ಎಂದುಕೊಂಡ ಪರಿಸ್ಥಿತಿಗಳೂ ಕಳೆದು ಹೋಗಿವೆ. ಚೇತರಿಕೆ ಕಾಣಲು ಇನ್ನೂ ಹತ್ತಿರವಾಗುತ್ತಿದ್ದೇನೆ ಅನಿಸುತ್ತದೆ. ಐ ಲವ್​ ಯೂ. ಈ ಸಮಯ ಕಳೆಯುತ್ತದೆ’ಎಂದು ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. 

  

click me!