ಚೆಕ್‌ ಬೌನ್ಸ್‌ ಪ್ರಕರಣ: ಕೋರ್ಟ್‌ಗೆ ಶರಣಾದ ನಟಿ ಅಮೀಶಾ ಪಟೇಲ್‌

Published : Jun 18, 2023, 09:24 AM IST
 ಚೆಕ್‌ ಬೌನ್ಸ್‌ ಪ್ರಕರಣ: ಕೋರ್ಟ್‌ಗೆ ಶರಣಾದ ನಟಿ ಅಮೀಶಾ ಪಟೇಲ್‌

ಸಾರಾಂಶ

ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ಅಮೀಶಾ ಪಟೇಲ್‌ ಶನಿವಾರ ರಾಂಚಿಯ ಸಿವಿಲ್‌ ಕೋರ್ಟ್ ಎದುರು ಶರಣಾದರು.

ರಾಂಚಿ: ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ಅಮೀಶಾ ಪಟೇಲ್‌ ಶನಿವಾರ ಸ್ಥಳೀಯ ಸಿವಿಲ್‌ ಕೋರ್ಟ್ ಎದುರು ಶರಣಾದರು. 2018ರಲ್ಲಿ ಜಾರ್ಖಂಡ್‌ ಮೂಲದ ಚಿತ್ರ ನಿರ್ಮಾಪಕ ಅಜಯ್‌ ಕುಮಾರ್‌ ಸಿಂಗ್‌ (Ajay kumar singh) ಅವರು ಚಿತ್ರ ನಿರ್ಮಾಣದ ಮಾಡುವಂತೆ 2.5 ಕೋಟಿ ಹಣವನ್ನು ಅಮೀಶಾ ಅವರ ಖಾತೆಗೆ ಜಮೆ ಮಾಡಿದ್ದರು.  ಆದರೆ ಚಿತ್ರ ಆಗದ ಕಾರಣ ಅಮೀಶಾ 2.5 ಕೋಟಿಯನ್ನು ಚೆಕ್‌ ಮೂಲಕ ನಿರ್ಮಾಪಕರಿಗೆ ಹಿಂತಿರುಗಿಸಿದ್ದರು. ಆದರೆ ಅದು ಚೆಕ್‌ ಬೌನ್ಸ್‌ ಆಗಿತ್ತು. ಅಮೀಶಾ ವಿರುದ್ಧ ವಂಚನೆ (Cheating) ಪ್ರಕರಣ ದಾಖಲಾಗಿತ್ತು. ಇವರಿಗೆ ಕೋರ್ಟ್‌ಗೆ ಹಾಜರಗುವಂತೆ ನ್ಯಾಯಾಲಯ ಸಮನ್ಸ್‌ ನೀಡಿದರೂ ಹಾಜರಾಗದ ಕಾರಣ, ಇವರ ವಿರುದ್ಧ ಕೋರ್ಟ್ ವಾರೆಂಟ್‌ ಜಾರಿ ಮಾಡಿತ್ತು.

ಅರ್ಜಿಯ ಪ್ರಕಾರ, ದೂರುದಾರ ಅಜಯ್ ಕುಮಾರ್ ಸಿಂಗ್ ಅವರು 2017 ರಲ್ಲಿ ಹರ್ಮು ಹೌಸಿಂಗ್ ಕಾಲೋನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಮೀಷಾರನ್ನು ಭೇಟಿಯಾದರು ಮತ್ತು ಚಲನಚಿತ್ರಗಳಲ್ಲಿ ಹೂಡಿಕೆ ಮಾಡುವ ಆಫರ್‌ ನೀಡಿದರು ಎಂದು ಹೇಳಿದ್ದಾರೆ.  ಅಮೀಷಾ ಅವರ  ದೇಸಿ ಮ್ಯಾಜಿಕ್ ಚಿತ್ರದಲ್ಲಿ ನಟಿಸಲು  ಅಜಯ್‌ ಕುಮಾರ್‌  ನಟಿಯ ಬ್ಯಾಂಕ್ ಖಾತೆಗೆ  2.5 ಕೋಟಿ ರೂ. ನೀಡಿದ್ದಾರೆ  ಆದರೆ ನಟಿ ಒಪ್ಪಿದಂತೆ ಚಿತ್ರದಲ್ಲಿ ಮುಂದುವರಿಯಲಿಲ್ಲ ಮತ್ತು ಹಣವನ್ನು ಹಿಂದಿರುಗಿಸಲಿಲ್ಲ ಎಂದು  ಅಜಯ್ ಕುಮಾರ್ ಸಿಂಗ್ ಆರೋಪಿಸಿದ್ದರು. 

ಕಹೋ ನಾ ಪ್ಯಾರ್ ಹೈ' ಮತ್ತು 'ಗದರ್: ಏಕ್ ಪ್ರೇಮ್ ಕಥಾ' ನಂತಹ ಹಿಟ್‌ಗಳಲ್ಲಿ ಕಾಣಿಸಿಕೊಂಡಿರುವ ನಟಿ ಅಮೀಷಾ ಪಟೇಲ್ (Ameesha Patel) ಇತ್ತೀಚೆಗೆ ಪಾಕಿಸ್ತಾನಿ ನಟ ಇಮ್ರಾನ್ ಅಬ್ಬಾಸ್ ಅವರೊಂದಿಗೆ ರೊಮ್ಯಾಂಟಿಕ್ ಹಾಡಿನ ವೀಡಿಯೊವನ್ನು ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಆದ ನಂತರ ಇಬ್ಬರ ನಡುವಿನ ಸಂಬಂಧ ಚರ್ಚೆಯಾಗುತ್ತಿದೆ. ಈ ವಿಷಯದ ಬಗ್ಗೆ ಮೊದಲ ಬಾರಿಗೆ ಮಾತನಾಡುತ್ತಾ ಅಮಿಶಾ ಸ್ಪಷ್ಟನೆ ನೀಡಿದ್ದರು. ಈ ಇಡೀ ವಿಷಯವು ಮೂರ್ಖತನದಿಂದ ತುಂಬಿದೆ ಪಾಕಿಸ್ತಾನಿ ನಟ ಇಮ್ರಾನ್ ಅಬ್ಬಾಸ್ ಜೊತೆಗಿನ ಸಂಬಂಧದ ವದಂತಿಗಳು ಆಧಾರರಹಿತ ಎಂದಿದ್ದರು. 

ಸಂದರ್ಶನವೊಂದರಲ್ಲಿ, ಈ ವಿಷಯದ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ ಅಮೀಷಾ, 'ನಾನು ಕೂಡ ಈ ವರದಿಗಳನ್ನು ಓದಿದ್ದೇನೆ ಮತ್ತು ನಾನು ತುಂಬಾ ನಕ್ಕಿದ್ದೇನೆ. ಬಹಳ ವರ್ಷಗಳ ನಂತರ ನನ್ನ ಸ್ನೇಹಿತನೊಬ್ಬನನ್ನು ಭೇಟಿಯಾಗಿದ್ದು. ಇದು ಕೇವಲ ಭೇಟಿಯಾಗಿತ್ತು  ಈ ಸಮಯದಲ್ಲಿ ನಾವು ಆ ವೀಡಿಯೊವನ್ನು ಮಾಡಿದ್ದೇವೆ. ಇಡೀ ವಿಷಯವು ತುಂಬಾ ಹುಚ್ಚು ಮತ್ತು ಮೂರ್ಖತನವಾಗಿದೆ ಎಂದು ಹೇಳಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?