ಕೊನೆಗೂ ರಿಲೀಸ್ ಆಯ್ತು 'ಅವತಾರ್' ಸೀಕ್ವೆಲ್‌ನ ಟ್ರೈಲರ್; ದೃಶ್ಯ ವೈಭವಕ್ಕೆ ಫ್ಯಾನ್ಸ್ ಫಿದಾ

Published : May 10, 2022, 10:36 AM IST
ಕೊನೆಗೂ ರಿಲೀಸ್ ಆಯ್ತು 'ಅವತಾರ್' ಸೀಕ್ವೆಲ್‌ನ ಟ್ರೈಲರ್; ದೃಶ್ಯ ವೈಭವಕ್ಕೆ ಫ್ಯಾನ್ಸ್ ಫಿದಾ

ಸಾರಾಂಶ

ಬಹು ನಿರೀಕ್ಷೆಯ ಅವತಾರ್ ಸೀಕ್ವೆಲ್‌ನ ಟ್ರೈಲರ್ ರಿಲೀಸ್ ಆಗಿದ್ದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. 2009ರಲ್ಲಿ ತೆರೆಗೆ ಬಂದಿದ್ದ ಅವತಾರ್ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ದಾಖಲೆ ನಿರ್ಮಿಸಿತ್ತು. ಇದೀಗ ಅವತಾರ ಸಿನಿಮಾದ ಸೀಕ್ವೆಲ್ ಬಿಡುಗಡೆಗೆ ಸಿದ್ಧವಾಗಿದ್ದು ಸದ್ಯ ಟ್ರೈಲರ್ ಅಭಿಮಾನಿಗಳ ಮುಂದೆ ಬಂದಿದೆ.

ಬಹು ನಿರೀಕ್ಷೆಯ ಅವತಾರ್ ಸೀಕ್ವೆಲ್‌ನ ಟ್ರೈಲರ್ ರಿಲೀಸ್ ಆಗಿದ್ದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. 2009ರಲ್ಲಿ ತೆರೆಗೆ ಬಂದಿದ್ದ ಅವತಾರ್ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ದಾಖಲೆ ನಿರ್ಮಿಸಿತ್ತು. ಇದೀಗ ಅವತಾರ ಸಿನಿಮಾದ ಸೀಕ್ವೆಲ್ ಬಿಡುಗಡೆಗೆ ಸಿದ್ಧವಾಗಿದ್ದು ಸದ್ಯ ಟ್ರೈಲರ್ ಅಭಿಮಾನಿಗಳ ಮುಂದೆ ಬಂದಿದೆ. ಅವತಾರ್; ದಿ ವೇ ಆಫ್ ವಾಟರ್ ಹೆಸರಿನಲ್ಲಿ ಸಿನಿಮಾ ಮೂಡಿಬಂದಿದೆ. ಬಿಡುಗಡೆಯಾಗಿರುವ ಟ್ರೈಲರ್ 20 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.

ಸಿನಿಮಾ ಹೇಗಿರಲಿದೆ, ಗ್ರಾಫಿಕ್ಸ್ ಗುಣಮಟ್ಟ ಈ ಟ್ರೈಲರ್ ನಲ್ಲಿ ಗೊತ್ತಾಗುತ್ತಿದೆ. ಅದ್ದೂರಿಯಾಗಿ ಮೂಡಿಬಂದಿರುವ ಈ ಟ್ರೈಲರ್ ವೀಕ್ಷಕರ ಮೆಚ್ಚಿಗೆಗೆ ಪಾತ್ರವಾಗಿದೆ. ಅವತಾರ್ ಟ್ರೈಲರ್‌ನ ದೃಶ್ಯ ವೈಭವಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅವತಾರ್; ದಿ ವೇ ಆಫ್ ವಾಟರ್ ಹೆಸರೇ ಹೇಳುವ ಹಾಗೆ ಇದು ನೀರಿನ ಬ್ಯಾಕ್ ಡ್ರಾಪ್ ನಲ್ಲಿ ಸಿನಿಮಾ ಮೂಡಿಬಂದಿದೆ. 3ಡಿಯಲ್ಲಿ ಈ ಸಿನಿಮಾ ಮೂಡಿಬಂದಿದ್ದು ಸಿನಿಮಾ ನೋಡಲು ವಿಶ್ವದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಹಾಲಿವುಡ್‌ ಖ್ಯಾತನಟನ ಹೆಂಡತಿ ಜೊತೆ ಎಲಾನ್ ಮಸ್ಕ್ ಥ್ರೀಸಮ್‌ ಮಾಡಿದ ಆರೋಪ

ಡಾಕ್ಟರ್ ಸ್ಟ್ರೇಂಜ್ ಸಿನಿಮಾ ಬಿಡುಗಡೆಯಾಗಿದ್ದು ಈ ಸಿನಿಮಾಗೂ ಮೊದಲು ಅವತಾರ್; ದಿ ವೇ ಆಫ್ ವಾಟರ್ ಸಿನಿಮಾದ ಟ್ರೈಲರ್ ಬಿತ್ತರವಾಗಿದೆ. ಚಿತ್ರಮಂದಿರಗಳಲ್ಲಿ ಟ್ರೈಲರ್ ನೋಡಿ ಸಿನಿ ಪ್ರಿಯರು ಸಖತ್ ಥ್ರಿಲ್ ಆಗಿದ್ದಾರೆ. 13 ವರ್ಷಗಳ ಬಳಿಕ ಅವತಾರ್ ಸರಣಿ ಬಂದಿದ್ದು ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ. ಅವತಾರ್ ಸರಣಿಯಲ್ಲಿ 5 ಸಿನಿಮಾಗಳು ಬರಲಿವೆ. ಮೊದಲ ಸರಣಿ 2009ರಲ್ಲಿ ಬಂದಿದೆ. ಎರಡನೇ ಸರಣಿ ಈ ವರ್ಷ ತೆರೆಗೆ ಬರುತ್ತಿದೆ. ಇನ್ನು ಉಳಿದ ಮೂರು ಸರಣಿಗಳ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಅವತಾರ್ 3ನೇ ಸರಣಿ 2024 ಡಿಸೆಂಬರ್ 20ನಲ್ಲಿ ತೆರೆಗೆ ಬರುತ್ತಿದೆ. ಅವತಾರ್ 4, 2026 ಡಿಸೆಂಬರ್ 24ರಂದು ಬಿಡುಗಡೆಯಾಗುತ್ತಿದೆ. ಅವತಾರ್ 5 ಸಿನಿಮಾ 2028 ಡಿಸೆಂಬರ್ 22ರಂದು ಬಿಡುಗಡೆಯಾಗುತ್ತಿದೆ. 

ಟಾಪ್‌ಲೆಸ್ ಆಗಿ ಬಂಗಾರದ ಬಣ್ಣ ಬಳಿದುಕೊಂಡು ಬಂದ ಖ್ಯಾತ ನಟಿ; ನೆಟ್ಟಿಗರು ಕಂಗಾಲು

ಅವತಾರ್-2 ಕುಟುಂಬ ಕೇಂದ್ರಿತ ಸಿನಿಮಾವಾಗಿದೆ ಎನ್ನುವ ಭರವಸೆ ನೀಡುತ್ತದೆ. ಒಂದು ಹಂತದಲ್ಲಿ ಜೇಕ್ ಕೂಡ 'ನಾವು ಎಲ್ಲಿಗೆ ಹೋದರು ಈ ಕುಟುಂಬವು ನಮ್ಮ ಕೋಟೆಯಾಗಿದೆ' ಎಂದು ಹೇಳುತ್ತಾನೆ. ಟ್ರೈಲರ್ ಬಿಡುಗಡೆ ಸಮಯದಲ್ಲಿ ಮಾತನಾಡಿದ ಜೇಮ್ಸ್ ಕ್ಯಾಮರಾನ್, ಮೊದಲ ಅವತಾರ್ ಅನೇಕ ಮಿತಿಗಳಲ್ಲಿ ಬಿಗ್ ಸ್ಕ್ರೀನ್ ಮೇಲೆ ಬಂದಿತ್ತು. ಹೊಸ ಅವತಾರ್ 3ಡಿಯೊಂದಿಗೆ ತೆರೆಮೇಲೆ ಬರ್ತಿದೆ ಎಂದಿದ್ದಾರೆ.

ಅವತಾರ್ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡ ಸಿನಿಮಾವಾಗಿದೆ. ಸಾರ್ವಕಾಲಿಕ ಅತಿ ಹೆಚ್ಚು ಹಣ ಗಳಿಸಿದ ಚಿತ್ರವಾಗಿ ಉಳಿದಿದೆ. ಈ ಚಿತ್ರದಲ್ಲಿ ಸ್ಯಾಮ್ ವರ್ಥಿಂಗ್ಟನ್, ಜೊಯ್ ಸಲ್ಡಾನಾ, ಸ್ಟೀಫನ್ ಲ್ಯಾಂಗ್, ಮಿಚೆಲ್ ರೋಡ್ರಿಗಸ್ ಸೇರಿದಂತೆ ಅನೇಕರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಂದಹಾಗೆ ಬಹುನಿರೀಕ್ಷೆಯ ಅವತಾರ್2 ಸಿನಿಮಾ ಡಿಸೆಂಬರ್ 16ರಂದು ತೆರೆಗೆ ಬರುತ್ತಿದೆ. ಭಾರತದ ಅನೇಕ ಭಾಷೆಗಳಲ್ಲಿ ಸಿನಿಮಾ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಕನ್ನಡಲ್ಲೂ ಬರ್ತಿದೆ ಅವತಾರ್-2. ಕನ್ನಡಿಗರು ಕನ್ನಡದಲ್ಲೇ ಸಿನಿಮಾ ನೋಡಿ ಎಂಜಾಯ್ ಮಾಡಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ