Rege-Jean Page: ಜಗತ್ತಿನ ಅತಿ ಹ್ಯಾಂಡ್​ಸಮ್​ ಚಿತ್ರನಟ ಇವರೇ ನೋಡಿ...

By Suvarna NewsFirst Published Jan 28, 2023, 5:55 PM IST
Highlights

ವ್ಯಕ್ತಿಯ ಚರ್ಮದ ಬಣ್ಣ, ಎತ್ತರ, ತೂಕ, ಬಟ್ಟೆಗಳು ಇತ್ಯಾದಿಗಳ ಆಧಾರದ ಮೇಲೆ  ವಿಜ್ಞಾನಿಗಳು ಜಗತ್ತಿನ ಸುಂದರ ನಟನನ್ನು ಗುರುತಿಸಿದ್ದಾರೆ, ಅವರ್ಯಾರು ಗೊತ್ತಾ?
 

ಮಿಸ್​ ಯೂನಿವರ್ಸ್​, ಮಿಸ್​ ವರ್ಲ್ಡ್ ಸೇರಿದಂತೆ ಹಲವು ಬಗೆಯ ಸೌಂದರ್ಯ ಸ್ಪರ್ಧೆ (beauty contest)ಗಳಿವೆ. ಒಬ್ಬರಿಗಿಂತ ಇನ್ನೊಬ್ಬರು ಸುಂದರಿಯರಿದ್ದರೂ ಕೊನೆಗೆ ಒಬ್ಬರಿಗೆ ಈ ಪಟ್ಟ ಸಿಗುತ್ತದೆ. ಒಬ್ಬೊಬ್ಬರ ದೃಷ್ಟಿಯಲ್ಲಿ ಒಬ್ಬೊಬ್ಬರು ಸುಂದರಿಯರಾಗಿ ಕಾಣುತ್ತಾರೆ. ಕೆಲವೊಂದು ಸುಂದರಿಯ ಕಿರೀಟವನ್ನು ಅಂತಿಮವಾಗಿ ಧರಿಸಿರುವವರನ್ನು ನೋಡಿ ಛೇ ಇವರಿಗೆ ಹೇಗೆ ಸಿಕ್ಕಿತು ಎಂದು ಅಂದುಕೊಳ್ಳುವವರೇ ಅಧಿಕ. ಆದರೆ ಸೌಂದರ್ಯ ಸ್ಪರ್ಧೆಗಳಲ್ಲಿ ಕೇವಲ ಸೌಂದರ್ಯವನ್ನಷ್ಟೇ ಅಲ್ಲದೇ, ಹಲವಾರು ರೀತಿಯಲ್ಲಿ ಅಳೆದು ತೂಗಿ ಲೆಕ್ಕಾಚಾರ ಹಾಕಲಾಗುತ್ತದೆ. ವ್ಯಕ್ತಿಯ ಚರ್ಮದ ಬಣ್ಣ, ಎತ್ತರ, ತೂಕ, ಬಟ್ಟೆಗಳು ವ್ಯಕ್ತಿಯನ್ನು ತುಂಬಾ ಸುಂದರವಾಗಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದರೂ ಸ್ಪರ್ಧೆಯ ವಿಷಯಕ್ಕೆ ಬಂದಾಗ ಅವರ ಜಾಣ್ಮೆ, ಬುದ್ಧಿವಂತಿಕೆಯನ್ನೂ ನೋಡಲಾಗುತ್ತದೆ.

ಈ ವಿಷಯ ಇಲ್ಯಾಕೆ ಪ್ರಸ್ತಾಪವಾಗಿದೆ ಎಂದರೆ,  ಇದೀಗ ಜಗತ್ತಿನ ಅತಿ ಸುಂದರ ಚಿತ್ರನಟನ (film actor) ಪಟ್ಟ ಯಾರಿಗೆ ದಕ್ಕಿದೆ ಎಂಬ ವಿಷಯ ಹೊರಬಿದ್ದಿದೆ. ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನೇ ಜಗತ್ತಿನ ಅತಿ ಸುಂದರ ನಟ ಎನ್ನುತ್ತಾರೆ. ಆದರೆ ಹಲವಾರು ವಿಷಯಗಳನ್ನು ಗಣನೆಗೆ ತೆಗೆದುಕೊಂಡು ಒಬ್ಬನಿಗೆ ಈ ಬಿರುದನ್ನು ನೀಡಲಾಗಿದೆ. ಅಷ್ಟಕ್ಕೂ ಇವರು ಇಲ್ಲಿಯವರೆಗೂ ಕೇವಲ ನಟನಾಗಿ ಗುರುತಿಸಿಕೊಂಡಿದ್ದರು. ಇದೀಗ ರಾತ್ರೋರಾತ್ರಿ ಜಗತ್ತಿನ ಸುರಸುಂದರಾಂಗ ಎನಿಸಿಕೊಂಡಿದ್ದಾರೆ. ಇವರನ್ನು ಈಗ ವಿಶ್ವದ ಸುರಸುಂದರ ನಟ ಎಂದು ಗುರುತಿಸಲಾಗಿದೆ. ಅವರ ಹೆಸರು ರೆಗೆ- ಜೀನ್‌ ಪೇಜ್ (Rege-Jene Page).  ಈ ಸುಂದರ ನಟ ಬ್ರಿಟಿಷ್​  ಮೂಲದವರು. ವಿಶ್ವದ ಅತ್ಯಂತ ಸುಂದರ (handsome) ವ್ಯಕ್ತಿ ಎಂಬ ಮನ್ನಣೆ ಈ ಬ್ರಿಟಿಷ್​ ನಟನಿಗೆ ಸಿಕ್ಕಿದೆ.  

Anushka Shetty: ಅನುಷ್ಕಾ ಶೆಟ್ಟಿ ಸಿಗ್ತಾರೆಂದು 51 ಲಕ್ಷ ಟೋಪಿ ಹಾಕಿಸ್ಕೊಂಡ ಖ್ಯಾತ ನಿರ್ಮಾಪಕ!

ಅಷ್ಟಕ್ಕೂ ಇವರನ್ನು ಅತಿ ಸುಂದರ ವ್ಯಕ್ತಿ ಎಂದು ಘೋಷಿಸಿದ್ದು ಬೇರೆ ಯಾರೋ ಅಲ್ಲ, ಖುದ್ದು ವಿಜ್ಞಾನಿಗಳು (scientists). ಸೌಂದರ್ಯ ಸ್ಪರ್ಧೆಗಳಂತೆ ಇವರ ಜಾಣ್ಮೆ, ಬುದ್ಧಿವಂತಿಕೆಯನ್ನೆಲ್ಲಾ ಇಲ್ಲಿ ಗುರುತಿಸಿಲ್ಲ. ಬದಲಿಗೆ ವಿಜ್ಞಾನಿಗಳು ನಂಬುವ  ಚರ್ಮದ ಬಣ್ಣ, ಎತ್ತರ, ತೂಕ, ಬಟ್ಟೆ ಸೇರಿದಂತೆ ಇನ್ನಿತರ ವಿಷಯಗಳನ್ನು ಇಲ್ಲಿ ಪರಿಗಣೆಗೆ ತೆಗೆದುಕೊಳ್ಳಲಾಗಿದೆ. ಇವರನ್ನು ಅತಿ ಸುಂದರ ಎಂಬ ಹೇಳಲು ಫೇಸ್ ಮ್ಯಾಪಿಂಗ್ ಬಳಕೆ ಮಾಡಲಾಗಿದೆ. ಬ್ರಿಟಿಷ್ ಸೌಂದರ್ಯವರ್ಧಕ ಹಾಗೂ ಶಸ್ತ್ರಚಿಕಿತ್ಸಕರಾಗಿರುವ ಡಾ. ಜೂಲಿಯನ್ ಡಿ ಸಿಲ್ವಾ ಅವರು ಗಣಕೀಕೃತ ಸೌಂದರ್ಯ ಮ್ಯಾಪಿಂಗ್ (beaty mapping) ಪ್ರಕ್ರಿಯೆ ನಡೆಸಿದ್ದಾರೆ. ಅದರಲ್ಲಿ  ರೆಗೆ- ಜೀನ್‌ ಪೇಜ್ ಜಗತ್ತಿನ ಅತ್ಯಂತ ಸುಂದರ ನಟ ಎಂದು ಗುರುತಿಸಲಾಗಿದೆ. 

ಈ ಮ್ಯಾಪಿಂಗ್​ ಕುರಿತು ಒಂದಿಷ್ಟು ಹೇಳುವುದಾದರೆ, ಈ ಬ್ಯೂಟಿ ಮ್ಯಾಪಿಂಗ್ ಪ್ರಕ್ರಿಯೆಯ ಮೂಲಕ, ವ್ಯಕ್ತಿಯ  ಕಣ್ಣುಗಳು, ಮೂಗು, ಹುಬ್ಬುಗಳು, ತುಟಿಗಳು, ದವಡೆ ಮತ್ತು ಮುಖದ ಆಕಾರವನ್ನು ಪರಗಣನೆಗೆ ತೆಗೆದುಕೊಳ್ಳಲಾಗುವುದು. ಇದನ್ನು ಸಾಂಪ್ರದಾಯಿಕ ಫೇಸ್ ಮ್ಯಾಪಿಂಗ್ ವಿಧಾನದ ಗ್ರೀನ್ ಗೋಲ್ಡನ್ ರೇಶಿಯೋ ಆಫ್ ಬ್ಯೂಟಿ (Green golden ratio of beauty) ಬಳಸಿ ನಿರ್ಧರಿಸಲಾಗಿದೆ. ಈ ವಿಧಾನದಿಂದ ವ್ಯಕ್ತಿಯ ಮುಖ ಎಷ್ಟು ಪರಿಪೂರ್ಣವಾಗಿದೆ ಎಂಬುದನ್ನು ಲೆಕ್ಕ ಹಾಕಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Urfi Javed: ಶಾರುಖ್​ ಖಾನ್​ ಎರಡನೇ ಹೆಂಡ್ತಿಯಾಗಲು ಉರ್ಫಿ ಸಿದ್ಧ , ಏನಿದು ಹೊಸ ವಿಷ್ಯ?

ಇದನ್ನು ಬಳಸಿ ಕೆಲವು ಸುಂದರರು ಎಂದ ನಟರ ಪರೀಕ್ಷೆ ನಡೆಸಲಾಗಿತ್ತು. ಬೇರೆಯವರಿಗೆ ಹೋಲಿಸಿದರೆ ರೆಗೆ- ಜೀನ್‌ ಪೇಜ್ ಅವರಿಗೆ ಶೇಕಡಾ 93.65 ಅಂಕ ಬಂದಿದೆ.  ಆದ್ದರಿಂದ ಇವರೇ ಜಗತ್ತಿನ ಅತಿ ಸುಂದರ ನಟ ಎಂದು ಗುರುತಿಸಲಾಗಿದೆ. ಇನ್ನು ಕೆಲವು ನಟರ ಮುಖಚೆಹರೆಯನ್ನು ಇದೇ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ ಥಾರ್ ನಟ ಕ್ರಿಸ್ ಹೆಮ್ಸ್‌ವರ್ತ್ ಅವರಿಗೆ ಶೇ. 93.53 ಅಂಕಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ಇವರು ಜಗತ್ತಿನ ಎರಡನೇ ಅತ್ಯಂತ ಸುಂದರ ವ್ಯಕ್ತಿ ಎನಿಸಿದ್ದಾರೆ. ಇವರನ್ನು ಹೊರತುಪಡಿಸಿದರೆ  ಬ್ಲ್ಯಾಕ್ ಪ್ಯಾಂಥರ್ ನಟ ಮೈಕೆಲ್ ಬಿ. ಜೋರ್ಡಾನ್ (Michel Jordan) ಅವರಿಗೆ ಶೇ. 93.46 ಅಂಕ ಮತ್ತು  ಗಾಯಕ ಹ್ಯಾರಿ ಸ್ಟೈಲ್ಸ್ ಅವರಿಗೆ ಶೇ. 92.30 ಅಂಕ ಬಂದಿದ್ದು ಅವರು ಕ್ರಮವಾಗಿ ಮೂರು ಮತ್ತು ನಾಲ್ಕನೆಯ ಸ್ಥಾನದಲ್ಲಿದ್ದಾರೆ.

click me!