Fact Check: ಅಲಿಯಾ ಭಟ್- ರಣವೀರ್ ಮದುವೆ 2020 ಕ್ಕೆ ಪಕ್ಕಾ?

Published : Oct 22, 2019, 03:09 PM ISTUpdated : Oct 24, 2019, 03:22 PM IST
Fact Check: ಅಲಿಯಾ ಭಟ್- ರಣವೀರ್ ಮದುವೆ 2020 ಕ್ಕೆ ಪಕ್ಕಾ?

ಸಾರಾಂಶ

ಅಲಿಯಾ ಭಟ್- ರಣಬೀರ್ ಕಪೂರ್ ಲಗ್ನ ಪತ್ರಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ | 2020 ಕ್ಕೆ ಮದುವೆಯಾಗುವ  ಸಾಧ್ಯತೆ | ನಿಜಕ್ಕೂ ಇವರಿಬ್ಬರೂ ಮದುವೆಯಾಗ್ತಾ ಇದ್ದಾರಾ? 

ಬಾಲಿವುಡ್ ಕ್ಯೂಟ್ ಪೇರ್ ಅಲಿಯಾ ಭಟ್- ರಣಬೀರ್ ಕಪೂರ್ ಮದುವೆಯಾಗಲಿದ್ದಾರೆ ಎನ್ನುವ ವಿಚಾರ ಬಿ ಟೌನ್ ಅಂಗಳದಲ್ಲಿ ಹರಿದಾಡುತ್ತಿದೆ. 2020, ಜನವರಿ 22 ರಂದು ಅಲಿಯಾ- ರಣವೀರ್ ಮದುವೆಯಾಗುತ್ತಾರೆ ಎಂದು ಹೇಳಲಾಗುತ್ತಿದೆ. 

ಚಂದನ್ ಶೆಟ್ಟಿ- ನಿವೇದಿತಾ ಗೌಡ ನಿಶ್ಚಿತಾರ್ಥ ಫೋಟೋಸ್!

ಈ ವೆಡ್ಡಿಂಗ್ ಕಾರ್ಡಿನಲ್ಲಿ ಅಲಿಯಾ ಭಟ್ ಸ್ಪೆಲ್ಲಿಂಗ್ ತಪ್ಪಾಗಿರುವುದನ್ನು ಗಮನಿಸಬಹುದಾಗಿದೆ. Alia ಎಂದು ಬರೆಯುವ ಬದಲು Aliya ಎಂದು ಬರೆಯಲಾಗಿದೆ. ಜೊತೆಗೆ ತಂದೆಯನ್ನು ಹೆಸರನ್ನು mahesh Bhatt ಎಂದು ಬರೆಯುವ ಬದಲು Mukesh Bhatt ಎಂದು ಬರೆಯಲಾಗಿದೆ.

ಮದುವೆ ವಿಚಾರವನ್ನು ಅಲಿಯಾ ಭಟ್ ತಳ್ಳಿ ಹಾಕಿದ್ದಾರೆ. ನಾವಿನ್ನು ಮದುವೆ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಫೇಕ್ ವೆಡ್ಡಿಂಗ್ ಕಾರ್ಡ್ ಇದಾಗಿದ್ದು ತಮಾಷೆಗಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿಯ ಬಿಡಲಾಗಿದೆ.  ಅಲಿಯಾ ಭಟ್- ರಣವೀರ್ ಕಪೂರ್ ಡೇಟಿಂಗ್ ಮಾಡುತ್ತಿರುವ ವಿಚಾರ ಬಹಿರಂಗ ಸತ್ಯವಾಗಿರುವುದರಿಂದ ಆಗಾಗ ಇಂತಹ ಮದುವೆ ವಿಚಾರ ಪಾಪ್ ಅಪ್ ಆಗುತ್ತಿರುತ್ತದೆ. 

ಹಾಲಿವುಡ್ 'ಟರ್ಮಿನೇಟರ್ ಡಾರ್ಕ್ ಫೇಟ್' ಟೀಸರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

ಇವರಿಬ್ಬರು 'ಬ್ರಹ್ಮಸೂತ್ರ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 2020 ರಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.  ಅಲಿಯಾ- ರಣವೀರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು ಅಮಿತಾಬಚ್ಚನ್, ಅಕ್ಕಿನೇನಿ ನಾಗಾರ್ಜುನ್ ಕೂಡಾ ಇರುವುದು ವಿಶೇಷ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!