ಸುಶಾಂತ್ ಸಿಂಗ್ ಅಗಲಿಕೆಯಿಂದ ಮನನೊಂದಿರುವ ಪ್ರೇಯಸಿ ರಿಯಾ ಚಕ್ರವರ್ತಿ ಅವರ ವೈರಲ್ ಆಗಿರುವ ಈ ಸಾಲುಗಳನ್ನು ಓದಿರುವವರು ಕಣ್ಣೀರಿಟ್ಟಿದ್ದಾರೆ...
ಬಾಲಿವುಡ್ ನಟ ಸುಶಾಂತ್ ಸಿಂಗ್ ಅಗಲಿ ಒಂದು ತಿಂಗಳು ಕಳೆದಿದೆ. ನಟನ ಸಾವಿನ ಬಗ್ಗೆ ಅನೇಕ ಊಹಾಪೋಹಗಳು ಕೇಳಿ ಬರುತ್ತಿದ್ದು ಯಾವುದು ಸತ್ಯ ಯಾವುದು ಸುಳ್ಳು ಎಂದು ತಿಳಿಯಲು ಮುಂಬೈ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇದೀಗ ಸುಶಾಂತ್ ಇಲ್ಲದೆ ತಿಂಗಳು ಕಳೆದ ಮೇಲೆ ಪ್ರೇಯಸಿ ರಿಯಾ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರಿಯಾ ಚಕ್ರವರ್ತಿ ಸುಶಾಂತ್ ನಿಧನದ ನಂತರ ಪೊಲೀಸ್ ತನಿಖೆ ಹೊರತು ಪಡಿಸಿ ಬೇರೆ ಎಲ್ಲಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ಅನೇಕರು ಸುಶಾಂತ್ ಸಾವಿಗೆ ರಿಯಾನೇ ಕಾರಣ ಎಂದು ಸುದ್ದಿ ಹಬ್ಬಿಸಿದ್ದರು ಆದರೆ ಇಂದು ರಿಯಾ ಬರೆದ ಸಾಲುಗಳನ್ನು ಓದಿ ಭಾವುಕರಾಗಿದ್ದಾರೆ.
ಇನ್‌ಸ್ಟಾಗ್ರಾಂ ಪೋಸ್ಟ್:
ಸುಶಾಂತ್‌ನನ್ನು ತಬ್ಬಿಕೊಂಡು ಮುದ್ದಾಡುವ ಪೋಟೋ ಶೇರ್ ಮಾಡಿದ್ದಾರೆ.'ಭಾವನೆಗಳನ್ನು ಎದುರಿಸಲು ನನಗೆ ಕಷ್ಟವಾಗುತ್ತಿದೆ. ನನ್ನ ಹೃದಯ ಒಡೆದುಹೋಗಿ ಸರಿಪಡಿಸಲಾಗದಷ್ಟು ನೋವಾಗಿದೆ. ಪ್ರೀತಿಯನ್ನು ಅರ್ಥ ಮಾಡಿಸಿ ಅದರಲ್ಲಿರುವ ಶಕ್ತಿ ಬಗ್ಗೆ ಹೇಳಿಕೊಟ್ಟ ವ್ಯಕ್ತಿ ನೀನು. ಕಷ್ಟವಾದ ಗಣಿತದ ಸಮೀಕರಣವನ್ನು ಸುಲಭ ಮಾಡಿ ಹೇಳಿಕೊಟ್ಟೆ, ಜೀವನವೂ ಅಷ್ಟೇ ಸುಲಭವೆಂದು ಹೇಳಿಕೊಟ್ಟೆ.ಅದರ ಬಗ್ಗೆ ನಿನ್ನಿಂದ ದಿನವೂ ಹೊಸ ವಿಚಾರ ಕಲಿಯುತ್ತಿದ್ದೆ. ನೀನು ಇಲ್ಲ ಎಂದು ಭಾವಿಸಲು ಕಷ್ಟವಾಗುತ್ತಿದೆ' ಎಂದು ಬರೆದುಕೊಂಡಿದ್ದಾರೆ.
ಭೌತಶಾಸ್ತ್ರಜ್ಞ ಸುಶಾಂತ್:
ನಟ ಸುಶಾಂತ್ ಸಿಂಗ್‌ಗೆ ಆಕಾಶದ ವಿಚಾರಗಳು ತುಂಬಾನೇ ಗಮನ ಸೆಳೆಯುತ್ತಿತು ಅದರಲ್ಲೂ ಗ್ಯಾಲಕ್ಸಿ ಮತ್ತು ನಕ್ಷತ್ರ ಎಂದರೆ ಆತನಿಗೆ ತುಂಬಾನೇ ಅಚ್ಚು-ಮೆಚ್ಚು. 'ಅತಿ ಹೆಚ್ಚು ನೆಮ್ಮದಿ ಇರುವ ಜಾಗಕ್ಕೆ ನೀನು ಹೋಗಿರುವೆ ಸುಶಾಂತ್. ಚಂದಿರ, ನಕ್ಷತ್ರ ಮತ್ತು ಗ್ಯಾಲಕ್ಸಿ ಎಲ್ಲವೂ ಒಬ್ಬ ಗ್ರೇಟ್ ಭೌತಶಾಸ್ತ್ರಜ್ಞನನ್ನು ಬರ ಮಾಡಿಕೊಂಡಿದೆ. ನೀನು ಒಬ್ಬ ಅದ್ಭುತ ವ್ಯಕ್ತಿ, ಎಂಥವರ ಜೀವನವನ್ನು ಬ್ಯೂಟಿಫುಲ್ ಮಾಡುವೆ. ಪದಗಳಲ್ಲಿ ನಮ್ಮಿಬ್ಬರ ಪ್ರೀತಿ ವರ್ಣಿಸಲು ಸಾಧ್ಯವಿಲ್ಲ. ನೀನು ಆಕಾಶದಲ್ಲಿ ಶೂಟಿಂಗ್ ಸ್ಟಾರ್ ಆಗಿ ನನ್ನೆದುರು ಬಂದರೆ ನೀನು ಮತ್ತೆ ಹುಟ್ಟಿ ಬರಲಿ ಎಂದು ಬೇಡಿಕೊಳ್ಳುವೆ' ಎಂದು ಹೇಳಿದ್ದಾರೆ.
ಮಿಸ್ ಯು ಸುಶಿ:
ನಮ್ಮ ಪ್ರೀತಿಯನ್ನು ಅಷ್ಟು ಸುಲಭವಾಗಿ ವರ್ಣಿಸಲು ಸಾಧ್ಯವಿಲ್ಲ ಎಂದು ನೀನೇ ಹೇಳಿದ್ದೆ ಅಲ್ವಾ? ಎಲ್ಲರನ್ನೂ , ಎಲ್ಲವನ್ನೂ ನೀನು ಒಂದೇ ರೀತಿ ನೋಡಿ ಪ್ರೀತಿಸಿದ ಹುಡುಗ . ನೆಮ್ಮದಿಯಾಗಿರು ಸುಶಿ. ನೀನಿಲ್ಲದೆ 30 ದಿನಗಳು ಕಳೆದಿದೆ ಆದರೆ ನಮ್ಮ ಪ್ರೀತಿ ಎಂದಿಗೂ ಶಾಶ್ವತ. ಮಿಸ್ ಯು ಸುಶಿ' ಎಂದು ಹೇಳುತ್ತಾ ಭಾವುಕರಾಗಿದ್ದಾರೆ.
ನಟ ಸುಶಾಂತ್ ಸಿಂಗ್ ಬಗ್ಗೆ ರಿಯಾ ಬರೆದ ಸಾಲುಗಳಿಗೆ ನಟ-ನಟಿಯರು ಮತ್ತು ಆಪ್ತರು ಕಾಮೆಂಟ್ ಮಾಡಿದ್ದಾರೆ.ಅದರಲ್ಲೂ ಸುಶಾಂತ್ ಜೊತೆ ಉತ್ತಮ ಸಂಪರ್ಕ ಹೊಂದಿದ್ದ ಸಿನಿಮಾ ನಿರೂಪಕರು ರಿಯಾಗೆ ಸಾಂತ್ವನ ಹೇಳಿದ್ದಾರೆ.