
ಬಾಲಿವುಡ್ ಡಿಂಪಲ್, ಮಸ್ತಾನಿ ನಮ್ಮೆಲ್ಲರ ನೆಚ್ಚಿನ ಕನ್ನಡತಿ ದೀಪಿಕಾ ಪಡುಕೋಣೆ ಸಾಮಾಜಿಕ ಜಾಲತಾಣದಲ್ಲಿ ಹೆಸರು ಬದಲಾಯಿಸಿಕೊಂಡಿದ್ದಾರೆ. ಟಾಪ್ ನಟಿಯರ ಪಟ್ಟೆಯಲ್ಲಿ ಸ್ಥಾನ ಪಡೆದುಕೊಂಡು, ನಟರ ಸಮಕ್ಕೆ ಸಂಭಾವನೆ ಪಡೆಯುತ್ತಿರುವ ಡಿಪ್ಪಿ ಹೆಸರು ಬದಲಾಯಿಸಿಕೊಳ್ಳುವ ಹಿಂದೆ ಒಂದು ಕಾರಣವಿದೆ...
ಕೊನೆಗೂ ಗುಡ್ ನ್ಯೂಸ್ ಕೊಟ್ಟ ದೀಪಿಕಾ ಪಡುಕೋಣೆ!
ಕಾಕ್‌ಟೇಲ್:
ಸೈಫ್ ಅಲಿ ಖಾನ್, ಡಯಾನಾ ಪೆಂಟಿ ಹಾಗೂ ದೀಪಿಕಾ ಪಡುಕೋಣೆ ಒಟ್ಟಾಗಿ ಕಾಣಿಸಿಕೊಂಡ ಕಾಕ್‌ಟೇಲ್ ಸಿನಿಮಾ ಜುಲೈ 13ರಂದು ರಿಲೀಸ್ ಆಗಿ 8 ವರ್ಷ ಕಳೆದಿದೆ. ದೀಪಿಕಾ ವೃತ್ತಿ ಜೀವನದಲ್ಲಿ ಬ್ರೇಕ್ ಕೊಟ್ಟಂಥ ಸಿನಿಮಾಗಳಲ್ಲಿ ಇದೂ ಒಂದಾದ ಕಾರಣ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸಿದ್ದಾರೆ. ತಮ್ಮೆಲ್ಲಾ ಖಾತೆಗಳ ಹೆಸರನ್ನು ವೆರೊನಿಕಾ ಎಂದು ಬದಲಾಯಿಸಿಕೊಂಡಿದ್ದಾರೆ.
ವೆರೊನಿಕಾ:
ಕಾಕ್‌ಟೇಲ್ ಚಿತ್ರದಲ್ಲಿ ಡಿಪ್ಪಿ ನಿರ್ನಹಿಸಿರುವ ಪಾತ್ರದ ಹೆಸ ವೆರೊನಿಕಾ. ಈ ವಿಶೇಷ ಪಾತ್ರದಲ್ಲಿ ದೀಪಿಕಾ ಎರಡು ಶೇಡ್‌ಗಳಲ್ಲಿ ಮಿಂಚಿದ್ದಾರೆ. ಮೂವರು ಸ್ನೇಹಿತರ ಸಂಬಂಧದ ಬಗ್ಗೆ ಇರುವ ಈ ಸಿನಿಮಾ ಬಾಕ್ಸ್ ಆಫೀಸ್ ಕೆಲೆಕ್ಷನ್ ಮುಟ್ಟಿಲ್ಲವಾದರೂ ದೀಪಿಕಾ, ಮತ್ತು ಡಯಾನಾಗೆ ಬ್ರೇಕ್ ನೀಡಿತ್ತು.
ನೆಟ್ಟಿಗರ ಕಾಮೆಂಟ್:
ತಾತ್ಕಾಲಿಕವಾಗಿ ಹೆಸರು ಬದಲಾಯಿಸಿಕೊಂಡ ದೀಪಿಕಾಗೆ ನೆಟ್ಟಿಗರು ಇದೇ ಹೆಸರನ್ನು ಶಾಶ್ವತವಾಗಿಟ್ಟುಕೊಳ್ಳಲು ಪುಕ್ಕಟೆ ಸಲಹೆ ನೀಡುತ್ತಿದ್ದಾರೆ. ಆದರೆ ಇನ್ನೂ ಕೆಲವರು 'ಪ್ಲೀಸ್ ನೀವು ನಮ್ಮ ಪಡುಕೋಣೆ ಸರ್ ಹೆಸರು ತೆಗೆಯಬೇಡಿ. ಯಾವ ಹೆಸರಾದರೂ ಪರ್ವಾಗಿಲ್ಲ ಪಡುಕೋಣೆ ಇರಲಿ' ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅಭಿಮಾನಿಗಳ ಕಾಮೆಂಟ್ ನೋಡಿ ದೀಪಿಕಾ ಗೊಂದಲ ಬೇಡ ಎಂದು ಈಗ ವೆರೊನಿಕಾಯಿಂದ ಮತ್ತೆ ದೀಪಿಕಾ ಎಂದು ಬದಲಾಯಿಸಿಕೊಂಡಿದ್ದಾರೆ.
ಕರ್ನಾಟಕದ ಖ್ಯಾತ ಬ್ಯಾಡ್ಮಿಟನ್ ತಾರೆ ಪ್ರಕಾಶ್ ಪಡುಕೋಣೆ ಉಡುಪಿ ಮೂಲದವರು. ಇವರ ಮಗಳೇ ದೀಪಿಕಾ ಪಡುಕೋಣೆ. ಕನ್ನಡ ಭಾಷೆ, ಸಂಸ್ಕೃತಿ ಬಗ್ಗೆ ದೀಪಿಕಾಗೆ ಎಷ್ಟು ಅಭಿಮಾನವಿದೆಯೋ ಗೊತ್ತಿಲ್ಲ. ಆದರೆ, ಪಡುಕೋಣೆ ಎಂಬ ಅವರ ಸರ್ ನೇಮ್‌ನಿಂದ ದೀಪಿಕಾ ಕನ್ನಡಿಗರಿಗೆ ಬಹಳ ಹತ್ತಿರವಾಗಿರುವುದಂತೂ ಹೌದು. ಈ ಕಾರಣದಿಂದ ನೆಟ್ಟಿಗರು ಬಹುಶಃ ಈ ಹೆಸರನ್ನು ತೆಗೀಬೇಡಿ ಎಂದು ಆಗ್ರಹಿಸಿದ್ದಾರೆ. ತಮ್ಮ ಮೂಲ ಹೆಸರನ್ನೂ ದೀಪಿಕಾ ಸಹ ಉಳಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.