ಮಗು ಹುಟ್ಟೋ ಮುಂಚೆ ಕುಲಾವಿ ಹೊಲೀತಿದಾರೆ ರಣಬೀರ್-ಆಲಿಯಾ!

Suvarna News   | Asianet News
Published : Jan 28, 2020, 12:12 PM IST
ಮಗು ಹುಟ್ಟೋ ಮುಂಚೆ ಕುಲಾವಿ ಹೊಲೀತಿದಾರೆ ರಣಬೀರ್-ಆಲಿಯಾ!

ಸಾರಾಂಶ

ಬಾಲಿವುಡ್‌ ಚಾಕೊಲೇಟ್‌ ಕಪಲ್ ರಣ್ಬೀರ್ ಕಪೂರ್‌ ಹಾಗೂ ಆಲಿಯಾ ಭಟ್‌ ಮದುವೆ ಡೇಟ್‌ ಫಿಕ್ಸ್‌ ಇನ್ನೂ ಮಾಡಿಲ್ಲ. ಆದರೆ, ಈ ವರ್ಷವೇ ಸಪ್ತಪದಿ ತುಳಿಯುವುದಾಗಿ ಹಲವೆಡೆ ಹೇಳಿ ಕೊಂಡಿದ್ದಾರೆ. ಅದಕ್ಕೂ ಮುನ್ನ ಮತ್ತೊಂದು ನ್ಯೂಸ್ ಕೊಟ್ಟಿದ್ದಾನೆ... ಏನದು?  

ಸೋನಂ ಕಪೂರ್‌ ಹಾಗೂ ಆನಂದ್ ಮದುವೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡ ರಣ್ಬೀರ್ - ಆಲಿಯಾ ತಮ್ಮ ಲವ್‌ ಸ್ಟೋರಿಯನ್ನು ಈಗಲೂ ಸಸ್ಪೆನ್ಸ್‌ನಲ್ಲಿಯೇ ಇಟ್ಟಿದ್ದಾರೆ. ಅವಾರ್ಡ್‌ ಕಾರ್ಯಕ್ರಮಗಳಲ್ಲಿ ಒಬ್ಬರನ್ನೊಬ್ಬರು  ಥ್ಯಾಂಕ್‌ ಮಾಡುತ್ತಾರೆ. ಹುಟ್ಟು ಹಬ್ಬಕ್ಕೆ ಕೇಕ್‌ ಬೇಕ್‌ ಮಾಡುತ್ತಾರೆ. ವಿಶೇಷ ದಿನಗಳನ್ನು ಕುಟುಂಬದ ಸದಸ್ಯರೊಂದಿಗೆ ಕಳೆದು ದುಬಾರಿ ಉಡುಗೊರೆ ಎಕ್ಸ್‌ಚೇಂಜ್ ಮಾಡಿ ಕೊಳ್ಳುತ್ತಾರೆ. ಆದರೂ ಎಲ್ಲಿಯೂ ತಮ್ಮ ಲವ್‌ ಸ್ಟೋರಿ ರಿವೀಲ್ ಮಾಡಿಲ್ಲ. ಮದುವೆ ವಿಷಯ ಮಾತನಾಡೋಲ್ಲ. ಸಹಜವಾಗಿಯೇ ಆಗಾಗ ಇವರಿಬ್ಬರ ಮದುವೆ ಗಾಸಿಪ್ ಸುದ್ದಿ ಬಾಲಿವುಡ್‌ನಲ್ಲಿ ಹಾರಿದಾಡುತ್ತಲೇ ಇರುತ್ತದೆ.

ಕೆಲವು ದಿನಗಳ ಹಿಂದೆ ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ರಣಬೀರ್ ಕಪೂರ್‌ ಹಾಗೂ ಆಲಿಯಾ ಭಟ್ ತಮ್ಮ ಹನಿಮೂನ್‌ ಡೆಸ್ಟಿನೇಷನ್‌ ಲಿಸ್ಟ್‌ ರೆಡಿ ಮಾಡಿಕೊಂಡಿದ್ದಾರಂತೆ! ಅಲ್ಲಾ ಸ್ವಾಮಿ, ಇನ್ನು ಮದುವೆ ಯಾವಾಗ ಎಂದೇ ರಿವೀಲ್ ಮಾಡಿಲ್ಲ. ಮದುವೆ ಆಗ್ತಾರೋ, ಇಲ್ಲವೋ ಗೊತ್ತಿಲ್ಲ. ಆಗಲೇ ಹನಿಮೂನ್ ಡೆಸ್ಟಿನೇಷನ್ ಲಿಸ್ಟ್ ರೆಡಿ ಆಯಿತಾ? ಬಾಲಿವುಡ್ ಮಂದಿಯದ್ದು ಏನು ಕಥೆಯೋ, ಏನೋ? ಯಾರಿಗೆ ಗೊತ್ತು? ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಈ ಕಪಲ್ ಲಿಸ್ಟ್‌ನಲ್ಲಿ ಸ್ವಿಡ್ಜರ್ಲ್ಯಾಂಡ್, ಬಹಮಾಸ್ ಹಾಗೂ ಫಿನ್‌ಲ್ಯಾಂಡ್‌ಗೆ ಹೋಗೋ ಪ್ಲ್ಯಾನ್ ಇದೆಯಂತೆ. ಮದುವೆ ಯಾವಾಗ ಆಗ್ತಾರೋ, ಮದುವೆಗೂ ಮುಂಚೆಯೇ ಹನಿಮೂನಿಗೆ ಹೋಗೋ ಪ್ಲ್ಯಾನೋ ಗೊತ್ತಿಲ್ಲ.

ಇನ್ನು ಈ ಕ್ಯೂಟ್‌ ಜೋಡಿಯ ಮದುವೆಗಾಗಿ ಸಿನಿಮಾ ಮಂದಿ ತುದಿಗಾಲಲ್ಲಿ ನಿಂತಿದ್ದಾರೆ. ಈ ವರ್ಷವೇ ಮದುವೆಯಾಗ್ತಾರೋ ಗೊತ್ತಿಲ್ಲ. ಹಾಗಂತ ಸುದ್ದಿ ಇದೆ. ನೋಡೋಣ ಯಾವಾಗ, ಎಲ್ಲಿ, ಹೇಗೆ ಮದುವೆ ಆಗ್ತಾರೆ ಅಂತ. ಹನಿಮೂನಿಗೆ ಎಲ್ಲಿಗೆ ಹೋಗ್ತಾರೆ ಎನ್ನೋ ವಿಷ್ಯ ಹೇಗೂ ರಿವೀಲ್ ಆಗಿದೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!