
'ರಾವಣ' ಯಶ್ ಜೊತೆಗಿಒನ ಕ್ಲೈಮ್ಯಾಕ್ಸ್ ಗುಟ್ಟು ಬಿಟ್ಟುಕೊಟ್ಟ ‘ರಾಮ’ ರಣಬೀರ್ ಕಪೂರ್'..!
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ನಿರೀಕ್ಷಿತ ಚಿತ್ರವಾಗಿರುವ 'ರಾಮಾಯಣ' (Ramayana Movie) ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಮೆರಿಕದ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ 2026ರ ವೇದಿಕೆಯಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಚಿತ್ರದ ಬಗ್ಗೆ ಹಂಚಿಕೊಂಡಿರುವ ವಿಷಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿವೆ. ಅದರಲ್ಲೂ ವಿಶೇಷವಾಗಿ ರಾಕಿಂಗ್ ಸ್ಟಾರ್ ಯಶ್ (Yash) ಮತ್ತು ರಣಬೀರ್ ಕಪೂರ್ (Ranbir Kapoor) ನಡುವಿನ ಮುಖಾಮುಖಿಯ ಬಗ್ಗೆ ರಣಬೀರ್ ನೀಡಿರುವ ಹೇಳಿಕೆ ಅಭಿಮಾನಿಗಳಲ್ಲಿ ಕುತೂಹಲವನ್ನು ದುಪ್ಪಟ್ಟು ಮಾಡಿದೆ.
ನಿತೇಶ್ ತಿವಾರಿ ನಿರ್ದೇಶನದ ಈ ಮಹಾಕಾವ್ಯದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡರೆ, ನಮ್ಮ ಹೆಮ್ಮೆಯ ಕನ್ನಡಿಗ ಯಶ್ ರಾವಣನಾಗಿ ಅಬ್ಬರಿಸಲಿದ್ದಾರೆ. ಆದರೆ, ಅಭಿಮಾನಿಗಳಿಗೆ ಶಾಕಿಂಗ್ ಎನಿಸುವ ವಿಷಯವೆಂದರೆ, ರಾಮಾಯಣದ ಮೊದಲ ಭಾಗದ ಬಿಡುಗಡೆ ಹತ್ತಿರವಿದ್ದರೂ ರಣಬೀರ್ ಮತ್ತು ಯಶ್ ಇದುವರೆಗೆ ಒಂದೇ ಒಂದು ದೃಶ್ಯವನ್ನು ಒಟ್ಟಿಗೆ ಚಿತ್ರೀಕರಿಸಿಲ್ಲವಂತೆ!
ಯಶ್ 'ರಾವಣ'ನ ಬಗ್ಗೆ ರಣಬೀರ್ ಮೆಚ್ಚುಗೆ:
ಯಶ್ ಬಗ್ಗೆ ಅತ್ಯಂತ ಗೌರವದಿಂದ ಮಾತನಾಡಿದ ರಣಬೀರ್, "ನಾನು ಯಶ್ ಅವರ ಕೆಲಸದ ದೊಡ್ಡ ಅಭಿಮಾನಿ. ರಾವಣನ ಪಾತ್ರಕ್ಕೆ ಯಶ್ ಅವರಂತಹ ವ್ಯಕ್ತಿತ್ವ (Aura), ಅವರ ಸ್ಟಾರ್‌ಡಮ್ ಮತ್ತು ಅವರ ವಿಭಿನ್ನ ದೃಷ್ಟಿಕೋನದ ಅಗತ್ಯವಿತ್ತು. ಇಲ್ಲಿಯವರೆಗೆ ನಾವು ರಾವಣನನ್ನು ಒಂದು ಸಾಂಪ್ರದಾಯಿಕ ಅಥವಾ ಸ್ಟೀರಿಯೋಟಿಪಿಕಲ್ ಮಾದರಿಯಲ್ಲಿ ನೋಡಿದ್ದೇವೆ. ಆದರೆ ಯಶ್ ಆ ಪಾತ್ರಕ್ಕೆ ಹೊಸ ಆಯಾಮ ನೀಡಿದ್ದಾರೆ. ಅವರು ರಾವಣನ ಪಾತ್ರವನ್ನು ಎಷ್ಟು 'ಸ್ವಾಗ್' ಮತ್ತು ಪ್ರಾಮಾಣಿಕತೆಯಿಂದ ನಿಭಾಯಿಸಿದ್ದಾರೆ ಎಂದರೆ, ರಾವಣ ನಿಜವಾಗಿಯೂ ಕಣ್ಣಮುಂದೆ ಜೀವಂತವಾಗಿ ಬಂದಂತೆ ಭಾಸವಾಗುತ್ತದೆ," ಎಂದು ಹೊಗಳಿದ್ದಾರೆ.
ತಾರಾಗಣ ಮತ್ತು ತಾಂತ್ರಿಕತೆ:
ಈ ದೃಶ್ಯ ವೈಭವವನ್ನು ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ಸಾಯಿ ಪಲ್ಲವಿ ಸೀತೆಯಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ನಟಿಸುತ್ತಿದ್ದಾರೆ. ಜೊತೆಗೆ, ನಟಿಯರಾದ ರಾಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್‌ವಾಲ್ ಸಹ ನಟಿಸಿದ್ದಾರೆ. ಇಷ್ಟೇ ಅಲ್ಲ, ಅರುಣ್ ಗೋವಿಲ್, ಕುನಾಲ್ ಕಪೂರ್ ಮತ್ತು ಶೀಬಾ ಚಡ್ಡಾ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.
ಬಿಡುಗಡೆಯ ವಿವರ:
ಸಂಪೂರ್ಣವಾಗಿ ಐಮ್ಯಾಕ್ಸ್ (IMAX) ಫಾರ್ಮ್ಯಾಟ್‌ನಲ್ಲಿ ಚಿತ್ರೀಕರಿಸಲಾಗಿರುವ ಈ ಚಿತ್ರವು ಎರಡು ಭಾಗಗಳಲ್ಲಿ ಬರಲಿದೆ. 'ರಾಮಾಯಣ: ಭಾಗ 1' ಈ ವರ್ಷದ ದೀಪಾವಳಿಗೆ ಅದ್ಧೂರಿಯಾಗಿ ತೆರೆಕಾಣಲಿದ್ದರೆ, ಯುದ್ಧ ಮತ್ತು ಕ್ಲೈಮ್ಯಾಕ್ಸ್ ಪ್ರಧಾನವಾಗಿರುವ 'ಭಾಗ 2' 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ. ಒಟ್ಟಿನಲ್ಲಿ, ರಾಮ-ರಾವಣರ ಈ ಮಹಾಯುದ್ಧವನ್ನು ಬೆಳ್ಳಿತೆರೆಯ ಮೇಲೆ ನೋಡಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಇನ್ನೇನು, ಮೊದಲ ಭಾಗವನ್ನು ಬರಲಿರುವ ದೀಪಾವಳಿಗೆ ನೋಡಿ ಎಂಜಾಯ್ ಮಾಡಬಹುದು. ಮುಂದಿನ ಭಾಗವನ್ನು ನೋಡಲು ಮುಂದಿನ ವರ್ಷದವರೆಗೆ ಕಾಯಬೇಕಷ್ಟೇ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.