ಮಗಳಿಗೆ ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಎಂದು ಸಂಸ್ಕೃತ ಹೆಸರಿಟ್ಟು ನಾಮಕರಣ ಮಾಡಿದ ಪ್ರಿಯಾಂಕಾ ಜೋನಾಸ್!

Published : Apr 21, 2022, 03:05 PM IST
ಮಗಳಿಗೆ ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಎಂದು ಸಂಸ್ಕೃತ ಹೆಸರಿಟ್ಟು ನಾಮಕರಣ ಮಾಡಿದ ಪ್ರಿಯಾಂಕಾ ಜೋನಾಸ್!

ಸಾರಾಂಶ

ಮೂರು ತಿಂಗಳ ಮಗುವಿಗೆ ಸರಳವಾಗಿ ನಾಮಕರಣ ಮಾಡಿದ ಸೆಲೆಬ್ರಿಟಿ ಕಪಲ್. ಹೆಸರಿನ ಅರ್ಥವೇನು ಗೊತ್ತಾ?  

ಬಾಲಿವುಡ್ (Bollywood) ಸಿರಿವಂತ ನಟಿ ಪ್ರಿಯಾಂಕಾ (Priyanka Chopra) ಮತ್ತು ಅಮೆರಿಕಾದ ಪಾಪ್ ಗಾಯಕ ನಿಕ್ ಜೋನಾಸ್‌ (Nick Jonas) ಸರೋಗಸಿ ವಿಧಾನದ ಮೂಲಕ ಜನವರಿ ತಿಂಗಳಲ್ಲಿ ಹೆಣ್ಣು ಮಗುವನ್ನು ಬರ ಮಾಡಿಕೊಂಡಿದ್ದಾರೆ. ಮಗಳಿಗೆ ಮೂರು ತಿಂಗಳು ತುಂಬುತ್ತಿದ್ದಂತೆ ಸರಳವಾಗಿ ನಾಮಕರಣ ಮಾಡಿದ್ದಾರೆ. ಮಗಳಿಗೆ ಇಟ್ಟಿರುವ ಹೆಸರು ತುಂಬಾನೇ ವಿಭಿನ್ನವಾಗಿದ್ದು ಅರ್ಥವೇನೆಂದು ನೆಟ್ಟಿಗರು ಹುಡುಕುವುದಕ್ಕೆ ಶುರು ಮಾಡಿದ್ದಾರೆ. 

ನಿಕ್ ಮತ್ತು ಪ್ರಿಯಾಂಕಾ ಮಗಳಿಗೆ ಮಾಲ್ತಿ ಮೇರಿ ಚೋಪ್ರಾ (Malti marie chopra) ಎಂದು ಹೆಸರಿಟ್ಟಿದ್ದಾರೆ. ಹೆಸರು ತುಂಬಾನೇ ಡಿಫರೆಂಟ್ ಆಗಿದ್ದು ಸಂಸ್ಕೃತದ ಪದ ಎನ್ನಲಾಗಿದೆ. ಪ್ರಿಯಾಂಕಾ ಪತಿ ಜೊತೆ ವಿದೇಶದಲ್ಲಿ ನೆಲೆಸಿದ್ದರೂ ತಮ್ಮ ನಾಡು ನುಡಿ ಮತ್ತು ಸಂಸ್ಕೃತಿ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ, ಅದಕ್ಕೆ ಸಾಕ್ಷಿ ಆಯ್ತು ಮಗಳ ಹೆಸರು. 

'ಮಾಲ್ತಿ ಮೇರಿ ರಾತ್ರಿ 8 ಗಂಟೆಗೆ ಜನಿಸಿದ್ದಾಳೆ. ಮಾಲ್ತಿ ಸಂಸ್ಕೃತ ಮೂಲಕ ಪದವಾಗಿದ್ದು ಹೂವಿನ ಸುವಾಸನೆ, ಬೆಳದಿಂಗಳು ಎಂಬ ಅರ್ಥ ಕೊಡುತ್ತದೆ. ಮೇರಿ ಎಂದರೆ ಲ್ಯಾಟಿಲ್‌ ಸ್ಟೆಲಾ ಮೇರಿಸ್‌ ಎಂದು ಇದರ ಅರ್ಥ ಸಮದ್ರದ ತಾರೆ ಎಂದು. ಫ್ರೆಂಚ್‌ನಲ್ಲಿ ಜೀಸ್‌ಸ್‌ ತಾಯಿ ಎಂಬರ್ಥ ಕೂಡ' ಎಂದು ಹಾಲಿವುಡ್ ಖಾಸಗಿ ಮಾಧ್ಯಮ ವರದಿ ಮಾಡಿದೆ. 

ಪ್ರಿಯಾಂಕಾ ಮಾತು:

'ನನ್ನ ಆಸೆಗಳು, ಭಯಗಳನ್ನು ಮಗಳ ಮೇಲೆ ಹೇರಲು ನನಗೆ ಇಷ್ಟವಿಲ್ಲ ನಾನು ಬಯಸುವುದಿಲ್ಲ. ಇದು ನನ್ನ ಮಗು ನಾನು ಶೇಪ್ ಕೊಡುವೆ ಎಂದು ನಾನು ಅಂದುಕೊಳ್ಳುವುದಿಲ್ಲ. ಮಕ್ಕಳು ಅವರ ಜೀವನನ್ನು ಅವರೇ ರೂಪಿಸಿಕೊಳ್ಳಬೇಕು ಸಮಯಕ್ಕೆ ತಕ್ಕಂತೆ ಅವರೇ ಜೀವನ ಕಂಡುಕೊಂಡು ಕಟ್ಟಿಕೊಳ್ಳಬೇಕು. ನನ್ನ ಪೋಷಕರು ಕೂಡ ಇದೇ ಹಾದಿಯಲ್ಲಿ ನಡೆದುಕೊಂಡು ಬಂದವರು' ಎಂದು ಪ್ರಿಯಾಂಕಾ ಮಗಳ ಬಗ್ಗೆ ಈ ಹಿಂದೆ ಸಂದರ್ಶನದಲ್ಲಿ ಮಾತನಾಡಿದ್ದರು. 

ಬಾಲ್ಯದ ಫೋಟೋ ಶೇರ್ ಮಾಡಿ ಪ್ರೀತಿಯ ಅಜ್ಜಿಗೆ ಪ್ರಿಯಾಂಕಾ ಚೋಪ್ರಾ ಬರ್ತಡೇ ವಿಶ್

'ಸರೋಗೆಸಿ ಮೂಲಕ ನಾವು ನಮ್ಮ ಮಗುವನ್ನು ಸ್ವಾಗತಿಸಿಕೊಂಡಿದ್ದೇವೆ. ನಾವು ಕುಟುಂಬದ ಕಡೆಗೆ ಈ ವಿಶೇಷ ಸಮಯದಲ್ಲಿ ಹೆಚ್ಚಿನ ಗಮನ ಕೊಡಬೇಕಾಗಿರೋದರಿಂದ ನಮಗೆ ಪ್ರೈವಸಿ ಬೇಕಿದೆ. ಥ್ಯಾಂಕ್ಸ್‌' ಎಂದು ಪ್ರಿಯಾಂಕಾ ಸೋಷಿಯಲ್ ಮೀಡಿಯಾದಲ್ಲಿ ಜನವರಿ 22ರಂದು ಪೋಸ್ಟ್‌ ಹಾಕಿದ್ದರು.  ಪ್ರಿಯಾಂಕಾ ತಡವಾಗಿ ಜನರಿಗೆ ಮಗು ಬಗ್ಗೆ ತಿಳಿಸಿದ್ದಾರೆ ಎನ್ನು ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. 12 ವಾರಗಳು ಮುಂಚಿತವಾಗಿಯೇ ಮಗು ಬಾಡಿಗೆ ತಾಯಿ ಮೂಲಕ ಹುಟ್ಟಿದ್ದು ಪ್ರೀ-ಮೆಚ್ಯೂರ್ ಬೇಬಿಯಾಗಿದೆ. ಬಾಡಿ ತಾಯಿಯನ್ನು ಕೆಲವು ದಿನಗಳ ಕಾಲ ಕ್ಯಾಲಿಪೋರ್ನಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಸೆಲೆಬ್ರಿಟಿ ಕಪಲ್‌ಗಳು ಇದುವರೆಗೂ ಮಗುವಿನ ಫೋಟೋ ರಿವೀಲ್ ಮಾಡಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?