ತಿಮಿಂಗಿಲ ಜತೆ ಸಾಗರದಲ್ಲಿ ಈಜಿದ ನಟಿಯ ವಿಡಿಯೋ ವೈರಲ್‌; ಯಾರೀಕೆ?

Suvarna News   | Asianet News
Published : Jun 11, 2020, 12:09 PM ISTUpdated : Jun 11, 2020, 12:18 PM IST
ತಿಮಿಂಗಿಲ ಜತೆ ಸಾಗರದಲ್ಲಿ ಈಜಿದ ನಟಿಯ ವಿಡಿಯೋ ವೈರಲ್‌; ಯಾರೀಕೆ?

ಸಾರಾಂಶ

ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ ಸೆಲೆಬ್ರಿಟಿಗಳು ಅಂಡರ್‌ವಾಟರ್‌ ಸ್ವಿಮಿಂಗ್ ವಿಡಿಯೋ. ಜಲಜೀವಿಗಳ ಜತೆ ಈಜಿದ ವಿಡಿಯೋ ನೋಡಿದ್ರೆ ರೋಮಾಂಚನವಾಗುತ್ತದೆ.

ಕೋವಿಡ್‌-19ನಿಂದಾಗಿ ನಟ-ನಟಿಯರು ಮನೆಯಿಂದ ಹೊರಬಾರದೆ ಸರ್ಕಾರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದಾರೆ ಹಾಗೂ ತಮ್ಮ ಗ್ಯಾಲರಿಯಲ್ಲಿರುವ ಅಮೇಜಿಂಗ್ ವಿಡಿಯೋ ಹಾಗೂ ಪೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್  ಪ್ರೊಫೈಲ್ ನಲ್ಲಿ  ಶೇರ್ ಮಾಡಿಕೊಳ್ಳುತ್ತಿದ್ದಾರೆ. 

ಜೂನ್‌ 8 ವಿಶ್ವ ಸಾಗರ ದಿನವಾಗಿದ್ದು ಬಾಲಿವುಡ್‌ ಕ್ಯಾಟ್‌ ಕತ್ರಿನ್‌ ಕೈಫ್‌ ಇನ್‌ಸ್ಟಾಗ್ರಾಂನಲ್ಲಿ ರೋಮಾಂಚನಕಾರಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಆಕೆಯ ಧೈರ್ಯ ಕಂಡು ಚಿತ್ರರಂಗದ ಅನೇಕ ಗಣ್ಯರು ಕಾಮೆಂಟ್ ಮಾಡಿ ಭೇಷ್‌ ಎಂದಿದ್ದಾರೆ.

Ex ಗರ್ಲ್‌ಫ್ರೆಂಡ್ಸ್‌ ಬಗ್ಗೆ ಬಾಯಿಬಿಟ್ಟ ಬ್ಯಾಡ್ ಬಾಯಿ ಸಲ್ಮಾನ್ ಖಾನ್

ಹೌದು! ನಟಿ ಕತ್ರಿನಾ ಕೈಫ್‌ ಬಿಕಿನಿ ತೊಟ್ಟು ಅಂಡರ್‌ವಾಟರ್‌ ಡೈವ್ ಮಾಡಿದ್ದಾರೆ ಈಜುತ್ತಾ ದಡ ಸೇರುವಾಗ ನಡುವೆಲ್ಲಿ ಆಕೆಯ ಬಳಿ ತಮಿಂಗಿಲವೊಂದು ಬಂದಿದೆ. ಹೆದರದೆ ಕತ್ರಿನಾ ವಿಡಿಯೋಗೆ ಪೋಸ್‌ ನೀಡಿದ್ದಾರೆ.  'ತುಂಬಾ ಹಳೆ ವಿಡಿಯೋ, ಸಾಗರದಲ್ಲಿ ಸಮಯ ಕಳೆಯುವುದೆಂದರೆ ತುಂಬಾ ಇಷ್ಟ. ನನ್ನ Incredible ಫ್ರೆಂಡ್‌ ಅಂದ್ರೆ ಸಾಗರ' ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗೆ ನಟ ಹೃತಿಕ್‌ ರೋಷನ್‌ 'ಕೂಲ್' ಎಂದು ಕಾಮೆಂಟ್ ಮಾಡಿದ್ದಾರೆ ಹಾಗೂ ನಿರ್ದೇಶಕ ಜೋಯಾ ಹಾರ್ಟ್‌ ಎಮೋಜಿ ಹಾಕಿದ್ದಾರೆ.

 

ಕತ್ರಿನಾ ವಿಡಿಯೋ ವೈರಲ್‌ ಆಗುತ್ತಿದ್ದಂತೆ ದಬ್ಬಂಗ್ ನಟಿ ಸೋನಾಕ್ಷಿ ಸಿನ್ನ ಸ್ಕೂಬಾ ಡೈವಿಂಗ್ ವಿಡಿಯೋ ಶೇರ್ ಮಾಡಿದ್ದಾರೆ. 'ಸಾಗರದ ದಿನ ಆಚರಣೆ ಮಾಡುವ ಕಾರಣವೇ ಅವುಗಳ ಮಹತ್ವ ತಿಳಿದುಕೊಳ್ಳಲು ಎಂದು. ನಾನು ಈಜುವಾಗ ಆಮೆಗಳು ಕಂಡವು. ನನಗೆ ಮತ್ಸ್ಯಕನ್ಯೆ  ಭಾಸವಾಗಿತ್ತು' ಎಂದು ಸೋನಾಕ್ಷಿ ಬರೆದುಕೊಂಡಿದ್ದಾರೆ.

 

ಲಾಕ್‌ಡೌನ್‌ ಕಾರಣದಿಂದಾದರೂ ನಮ್ಮ ನಟಿಯರು ಇಂಥ ಅದ್ಭುತ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವಂತೆ ಆಯ್ತು ಎಂಬುದು ಅಭಿಮಾನಿಗಳ ಮಾತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?