
ಮುಂಬೈ(ಸೆ.02): ಅಶ್ಲೀಲ ಸಿನಿಮಾ ನಿರ್ಮಾಣ ಮತ್ತು ಹಂಚಿಕೆ ಪ್ರಕರಣದಲ್ಲಿ ರಾಜ್‌ಕುಂದ್ರಾ ಮುಂಬೈ ಪೊಲೀಸರ ವಶವಾಗಿರುವ ಬೆನ್ನಲ್ಲೇ, ಪತಿಯಿಂದ ದೂರವಾಗಲು ನಟಿ ಶಿಲ್ಪಾ ಶೆಟ್ಟಿ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಪ್ಪು ಮಾಡ್ಬಿಟ್ಟೆ ಎಂದ ಶಿಲ್ಪಾ ಶೆಟ್ಟಿ: ಹೊಸ ಪೋಸ್ಟ್‌ನಲ್ಲಿ ಹೇಳಿದ್ದಿಷ್ಟು
ಹಣಕ್ಕಾಗಿ ಪತಿ ಮಾಡುತ್ತಿದ್ದ ಕೆಲಸಗಳು ಶಿಲ್ಪಾ ಶೆಟ್ಟಿಮತ್ತು ಅವರ ಕುಟುಂಬಕ್ಕೆ ತೀವ್ರ ಮುಜುಗರ ಉಂಟುಮಾಡಿದೆ. ಅದರಲ್ಲೂ ಈ ಪ್ರಕರಣ ತಮ್ಮ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುವುದು ಖಚಿತ ಎಂಬ ನಿರ್ಧಾರಕ್ಕೆ ಬಂದಿರುವ ಶಿಲ್ಪಾ, ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದ್ದಾರೆ ಎಂದು ಬಾಲಿವುಡ್ ಹಂಗಾಮ ಎಂಬ ವೆಬ್‌ಸೈಟ್ ವರದಿ ಮಾಡಿದೆ.
2009ರಲ್ಲಿ ರಾಜ್‌ರನ್ನು ಮದುವೆಯಾಗಿದ್ದ ಶಿಲ್ಪಾಗೆ ವಿಹಾನ್ ಮತ್ತು ಸಮಿಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಹೇಗಿದ್ದರೂ ಪತಿಯ ಕೇಸ್ ಸದ್ಯಕ್ಕೆ ಮುಗಿಯುವುದಿಲ್ಲ. ಹೀಗಾಗಿ ಪತಿ ಜೊತೆಗಿದ್ದರೆ ತಾವೂ ಕಿರಿಕಿರಿ ಅನುಭವಿಸುವ ಜೊತೆಗೆ ಮಕ್ಕಳೂ ಸಮಸ್ಯೆ ಎದುರಿಸಬೇಕಾಗುತ್ತದೆ. ಜೊತೆಗೆ ವೈಯಕ್ತಿಕವಾಗಿಯೂ ತಾವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಸಂಪಾದನೆ ಮಾಡುತ್ತಿರುವ ಕಾರಣ, ಪ್ರತ್ಯೇಕವಾಗಿರುವುದೇ ಸೂಕ್ತ ಎನ್ನುವ ನಿರ್ಧಾರಕ್ಕೆ ಶಿಲ್ಪಾ ಬಂದಿದ್ದಾರೆ ಎನ್ನಲಾಗಿದೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.