
ನವದೆಹಲಿ (ಫೆ.13): ಬಾಲಿವುಡ್ ನಟಿ ಕೃತಿ ಸನನ್ ಅವರ ಮೇಕಪ್ ರಹಿತ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಸಲೂನ್‌ನಿಂದ ಹೊರಬರುವಾಗ ಪಾಪರಾಜಿಗಳು ಕ್ಲಿಕ್ಕಿಸಿದ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೃತಿ ಸನನ್ ಸೌಂದರ್ಯವನ್ನು ಹೊಗಳಿದ್ದಾರೆ.
ಬಾಲಿವುಡ್‌ನಲ್ಲಿ ಎಲ್ಲ ನಟಿಯರು ಮೇಕಪ್ ಇಲ್ಲದೆ ಸಿನಿಮಾದಲ್ಲಿ ನಟಿಸುವುದಿಲ್ಲ. ಇನ್ನು ಬಹುತೇಕರು ಮೇಕಪ್ ರಹಿತವಾಗಿ ಜನರ ಮುಂದೆ ಕಾಣಿಸಿಕೊಳ್ಳುವುದೇ ಇಲ್ಲ. ಅದಕ್ಕೆ ಅಪವಾದ ಎಂಬಂತೆ ಕೆಲವರು ಮೇಕಪ್ ಮಾಡಿಕೊಳ್ಳದೆಯೂ ಜನರ ಮುಂದೆ ಬರುತ್ತಾರೆ. ಹೀಗೆ ಬಂದಾಗ ಅವರ ಫೋಟೋ ಹಾಗೂ ವಿಡಿಯೋಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಮೇಕಪ್ ರಹಿತವಾಗಿ ಕಾಣುವ ಸಿನಿಮಾ ಸುಂದರಿಯರ ಎಷ್ಟು ಚೆಂದ ಕಾಣುತ್ತಾರೆ ಎಂಬುದನ್ನು ಲೆಕ್ಕಾಚಾರ ಮಾಡಿ ಜನರು ತರಹೇವಾರಿ ಕಾಮೆಂಟ್‌ಗಳನ್ನು ಕೂಡ ಮಾಡುತ್ತಾರೆ. ಇದೀಗ ನಟಿ ಕೃತಿ ಸನನ್ ಅವರು ಕೂಡ ಮೇಕಪ್ ರಹಿತವಾಗಿ ಸಾವರ್ಜನಿಕವಾಗಿ ಕಾಣಿಸಿಕೊಂಡ ಫೋಟೋ ಭಾರೀ ವಯರಲ್ ಆಗುತ್ತಿದೆ. ಅದರಲ್ಲಿ, ಕೃತಿ ಸನನ್ ಹೇಗೆ ಕಾಣಿಸುತ್ತಿದ್ದಾರೆ ಎಂಬುದನ್ನು ಜನರೇ ತಮ್ಮ ಅಭಿಪ್ರಾಯಗಳನ್ನು ಹೊರಗೆ ಹಾಕಿದ್ದಾರೆ.
ಬಾಲಿವುಡ್ ನಟಿ ಕೃತಿ ಸನೋನ್ ಅವರ ಹೆಸರು ಇಂದಿನ ಟಾಪ್ ನಟಿಯರ ಪಟ್ಟಿಯಲ್ಲಿದೆ. ಇತ್ತೀಚೆಗೆ ಮಹಿಳೆಯರ ಸಲೂನ್‌ನಿಂದ ಹೊರಗೆ ಬರುವಾಗ ಮೇಕಪ್ ಇಲ್ಲದೆ ಕಾಣಿಸಿಕೊಂಡಿರುವ ಕೃತಿ ಸನನ್ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಕೃತಿ ಸನೋನ್ ಅಲ್ಲಿದ್ದ ಪಾಪರಾಜಿಗಳಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿತು. ಅಲ್ಲಿದ್ದ ಕೃತಿಯ ಫೋಟೋ ವಿಡಿಯೋಗಳನ್ನು ಮಾಡಿದ ಎಲ್ಲ ಪಾಪರಾಜಿಗಳು ಅವುಗನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಅವುಗಳಿಗೆ ತರಹೇವಾರಿ ಕಾಮೆಂಟ್‌ಗಳು ಬರುತ್ತಿವೆ.
ಬಾಲಿವುಡ್ ಬೆಡಗಿ ಕೃತಿ ಸನನ್ ಅಭಿಮಾನಿಗಳು ಅವರ ಮೇಕಪ್ ರಹಿತ ಸೌಂದರ್ಯವನ್ನು ಹೊಗಳಿದ್ದಾರೆ. ಮೇಕಪ್ ಹೊರತಾಗಿಯೂ ಕೃತಿ ಅದ್ಭುತ ಸುಂದರಿ ಎಂದು ಹಾಡಿಹೊಗಳಿದ್ದಾರೆ. ಇನ್ನು ಕೃತಿ ಸನನ್ ಅವರು ಇತ್ತೀಚಿನ ದಿನಗಳಲ್ಲಿ ಕಬೀರ್ ಬಹಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದಾಳೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಕಬೀರ್ ದೊಡ್ಡ ಬ್ರಿಟಿಷ್ ಉದ್ಯಮಿ ಕುಲಜಿಂದರ್ ಬಹಿಯಾ ಅವರ ಮಗ. ಇಬ್ಬರ ನಡುವೆ 9 ವರ್ಷಗಳ ವ್ಯತ್ಯಾಸವಿದೆ. ಆದರೂ ಇಬ್ಬರೂ ಡೇಟಿಂಗ್‌ನಲ್ಲಿದ್ದಾರೆ ಎಂಬುದು ಹಲವು ಫೋಟೋ ವಿಡಿಯೋಗಳ ಮೂಲಕ ಬಹಿರಂಗವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.