ಸೌತ್ ಇಂಡಿಯನ್ ಚಿತ್ರಕ್ಕೆ ಜಾಹ್ನವಿ ಕಪೂರ್ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ!

Suvarna News   | Asianet News
Published : Dec 19, 2019, 11:15 AM IST
ಸೌತ್ ಇಂಡಿಯನ್ ಚಿತ್ರಕ್ಕೆ ಜಾಹ್ನವಿ ಕಪೂರ್  ಸಂಭಾವನೆ ಕೇಳಿದ್ರೆ  ಶಾಕ್ ಆಗ್ತೀರಾ!

ಸಾರಾಂಶ

ರೊಮ್ಯಾಂಟಿಕ್ ಮ್ಯಾನ್ ವಿಜಯ್ ದೇವರಕೊಂಡ ಜೊತೆ 'ಫೈಟರ್‌' ಚಿತ್ರದಲ್ಲಿ ನಟಿಸಲು ಜಾಹ್ನವಿ ಕಪೂರ್ ಪಡೆಯುತ್ತಿರುವ ಸಂಭಾವನೆ ಕೇಳಿದ್ರೆ ನೀವು ಖಂಡಿತಾ ಶಾಕ್ ಆಗ್ತೀರಿ!

ಬಾಲಿವುಡ್‌ ಎವರ್ ಗ್ರೀನ್ ನಟಿ  ಶ್ರೀ ದೇವಿಯ ಹಿರಿಯ ಪುತ್ರಿ ಜಾಹ್ನವಿ ಕಪೂರ್ ಸೌತ್ ಇಂಡಿಯನ್ ಚಿತ್ರಗಳಲ್ಲಿ ನಟಿಸುತ್ತಾರೆ ಎಂಬ ಮಾತುಗಳು ಹರಿದಾಡುತಿದ್ದು ಚಿತ್ರತಂಡ ಉತ್ತರಿಸುವ ಮೂಲಕ ಅಭಿಮಾನಿಗಳಲ್ಲಿದ್ದ ಗೊಂದಲಕ್ಕೆ ಬ್ರೇಕ್ ಹಾಕಿದ್ದಾರೆ. 

ಅಯ್ಯೋ! ರಶ್ಮಿಕಾನ ಬಿಡ್ರಿ, ಈಗ ಲಿಸ್ಟ್‌ಗೆ ಜಾಹ್ನವಿ ಕಪೂರ್ ಸೇರಿಕೊಂಡಿದ್ದಾರೆ!

'ಧಡಕ್' ಚಿತ್ರದ ಮೂಲಕ ಬಾಲಿವುಡ್ ಬಣ್ಣದ ಲೋಕಕ್ಕೆ ಕಾಲಿಟ್ಟ ಜಾಹ್ನವಿ ಕಪೂರ್ ಯಶಸ್ಸಿನ  ಹಾದಿಯಲ್ಲಿದ್ದಾರೆ.  'ಕಾರ್ಗಿಲ್ ಗರ್ಲ್‌' ಚಿತ್ರದಲ್ಲಿ ಮುಖ್ಯ ಪಾತ್ರ ಮಾಡುತ್ತಿದ್ದಾರೆ ಹಾಗೂ ದೋಸ್ತಾನ-2 ಚಿತ್ರದಲ್ಲಿ ಬಿ-ಟೌನ್ ಸ್ನೇಹಿತರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು 'ಅರ್ಜುನ್ ರೆಡ್ಡಿ' ಚಿತ್ರದ ಮೂಲಕ ಟಾಲಿವುಡ್‌ಗೆ ಕಾಲಿಟ್ಟ ವಿಜಯ್ ದೇವರಕೊಂಡ ಸಣ್ಣ ಅವಧಿಯಲ್ಲಿ ದೊಡ್ಡ ಮಟ್ಟಕ್ಕೆ ಹೆಸರು ಮಾಡಿದ ನಟ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಚಿತ್ರ 'ಫೈಟರ್‌'ಗೆ ಜಾಹ್ನವಿ ಕೇಳಿರುವ ಸಂಭಾವನೆ ಗಗನ ಮುಟ್ಟಿದೆ.  

ಅಯ್ಯಯ್ಯೋ... ಇದನ್ನು ತೆಗೆಯಲು ಮರೆತೇ ಬಿಟ್ರಾ ಜಾನ್ವಿ ಕಪೂರ್?

ಬಾಲಿವುಡ್‌ ಚಿತ್ರದಲ್ಲಿ ಎಷ್ಟು ತೊಗೋಳ್ತಾರೋ  ಏನೋ ಆದ್ರೆ ಸೌತ್ ಇಂಡಿಯನ್ ಫಿಲ್ಮ್‌ನಲ್ಲಿ ಮಾಡೊಕೆ ಬರೋಬರಿ 3.5 ಕೋಟಿ ಕೇಳಿದ್ದಾರಂತೆ. ಈ ಚಿತ್ರಕ್ಕೆ ಕರಣ್‌ ಜೋಹಾರ್‌ ಹಾಗೂ ಪುರಿ ಜಗನ್ನಾಥ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ತೆಲುಗು ಮತ್ತು ಹಿಂದಿಯಲ್ಲಿ ತೆರೆ ಕಾಣಲಿದೆ.  ಜಾಹ್ನವಿ ಕಪೂರ್ ಕಾಲ್ ಶೀಟ್ ಫ್ರೀ ಇಲ್ಲದ ಕಾರಣ ಚಿತ್ರವನ್ನು ಜನವರಿ 2020 ಆರಂಭಿಸಲಾಗುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?
ಅಖಂಡ 2 ಪ್ರೀಮಿಯರ್ ಶೋಗಳು ರದ್ದು, ನಿರ್ಮಾಪಕರಿಗೆ ಸಂಕಷ್ಟ.. ಬಾಲಯ್ಯ ಸಿನಿಮಾ ರಿಲೀಸ್ ಕಥೆಯೇನು?