ಇದು ಹಿಂದಿರುಗುವ ಸಮಯ, ಪ್ರೀತಿಗೆ ಚಿರಋಣಿ; ಸಿನಿಮಾಗೆ ವಿದಾಯ ಹೇಳಿದ 12th ಫೇಲ್ ನಟ ವಿಕ್ರಾಂತ್ ಮೆಸ್ಸಿ

By Mahmad Rafik  |  First Published Dec 2, 2024, 1:25 PM IST

ಪ್ರತಿಭಾನ್ವಿತ ನಟ ವಿಕ್ರಾಂತ್ ಮೆಸ್ಸಿ ಚಿತ್ರರಂಗದಿಂದ ನಿವೃತ್ತಿ ಘೋಷಿಸಿದ್ದಾರೆ. ಕೌಟುಂಬಿಕ ಜೀವನಕ್ಕೆ ಆದ್ಯತೆ ನೀಡಲು ಈ ನಿರ್ಧಾರ ಕೈಗೊಂಡಿದ್ದು, 2025 ರಲ್ಲಿ ತಮ್ಮ ಕೊನೆಯ ಎರಡು ಚಿತ್ರಗಳು ಬಿಡುಗಡೆಯಾಗಲಿವೆ ಎಂದು ತಿಳಿಸಿದ್ದಾರೆ.


ಮುಂಬೈ: ಪ್ರತಿಭಾನ್ವಿತ ನಟ ವಿಕ್ರಾಂತ್ ಮೆಸ್ಸಿ ಬಣ್ಣದ ಲೋಕಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. 12th ಫೇಲ್, ಸೆಕ್ಟರ್ 36,  ಮಿರ್ಜಾಪುರ, ದಿ ಸಾಬರಮತಿ ಎಕ್ಸ್‌ಪ್ರೆಸ್ ಅಂತಯ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ, ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿರುವಾಗಲೇ ಸಿನಿಮಾ ಬದುಕಿಗೆ ವಿಕ್ರಾಂತ್ ಮೆಸ್ಸಿ ವಿದಾಯ ಹೇಳಿದ್ದಾರೆ. 37 ವರ್ಷದ ವಿಕ್ರಾಂತ್ ಮೆಸ್ಸಿ ತಮ್ಮ ಸಹಜ ನಟನೆಯಿಂದಲೇ ಗುರುತಿಸಿಕೊಂಡಿರುವ ಕಲಾವಿದ. ಇನ್‌ಸ್ಟಾಗ್ರಾಂನಲ್ಲಿ ನಿವೃತ್ತಿಯ ಬಗ್ಗೆ ವಿಕ್ರಾಂತ್ ಮೆಸ್ಸಿ ನಿವೃತ್ತಿ ಬಗ್ಗೆ ಬರೆದುಕೊಂಡಿದ್ದಾರೆ. 

ಕಳೆದ ಕೆಲವು ವರ್ಷಗಳು ನಿರೀಕ್ಷೆಗೂ ಮೀರಿದ್ದಾಗಿತ್ತು. ಎಂದೂ ಮರೆಯಲಾಗದ ನಿಮ್ಮೆಲ್ಲರ ಬೆಂಬಲಕ್ಕೆ ನಾನು ಚಿರಋಣಿಯಾಗಿದ್ದೇನೆ. ಇದೀಗ ನಾನು ಮನೆಗೆ ಹಿಂದಿರಗುವ ಸಮಯ ಬಂದಿದೆ. ನನ್ನನ್ನು ನಾನು ಅರಿತುಕೊಳ್ಳಲು ಇದುವೇ ಸೂಕ್ತವಾದ ಸಮಯ. ನಟನಾಗಿರುವ ನಾನು ಒಬ್ಬ ಗಂಡನಾಗಿ, ತಂದೆ ಮತ್ತು ಮಗನಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ.  

Tap to resize

Latest Videos

ಇದನ್ನೂ ಓದಿ: ಒಂದೇ ಒಂದು ಸುದ್ದಿಯಿಂದ ₹72 ಷೇರು ಖರೀದಿಗೆ ಮುಗಿಬಿದ್ದ ಜನರು; ಈ ನಟನ ಮಗಳ ಬಳಿಯಲ್ಲಿವೆ 1  ಕೋಟಿ ಷೇರು

ಮುಂದುವರಿದು ಮಾತನಾಡಿರುವ ವಿಕ್ರಾಂತ್ ಮೆಸ್ಸಿ, 2025ರಲ್ಲಿ ಕೊನೆಯ ಬಾರಿ ಸಿನಿಮಾ ಮೂಲಕ ನಿಮ್ಮನ್ನು ಕೊನೆಯ ಬಾರಿಗೆ ಭೇಟಿಯಾಗುತ್ತೇನೆ.  ಕೊನೆಯ 2 ಸಿನಿಮಾಗಳು ಮತ್ತು ಹಲವು ವರ್ಷಗಳ ನೆನಪುಗಳು ನನ್ನೊಂದಿಗಿವೆ.  ಎಲ್ಲಾ ವಿಷಯಗಳಿಗೂ ಮತ್ತು ನಮ್ಮ ನಡುವಿನ ಎಲ್ಲಾ ಸಂಬಂಧಕ್ಕೂ ಮತ್ತೊಮ್ಮೆ ಧನ್ಯವಾದಗಳನ್ನು ಹೇಳುತ್ತೇನೆ.  ನಿಮ್ಮೆಲ್ಲರ ಪ್ರೀತಿಗೆ ಯಾವಾಗಲೂ ಆಭಾರಿಯಾಗಿರುತ್ತೇನೆ ಎಂದು ವಿಕ್ರಾಂತ್ ಮೆಸ್ಸಿ ಹೇಳಿಕೊಂಡಿದ್ದಾರೆ.

ಈ ಪೋಸ್ಟ್ ನೋಡುತ್ತಿದ್ದಂತೆ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ  ನಿರ್ಧಾರವನ್ನು ಹಿಂದೆ ತೆಗೆದುಕೊಳ್ಳಬೇಕು. ನಿಮ್ಮನ್ನು ಸದಾ ನಾವು ತೆರೆಯ ಮೇಲೆ ನೋಡಲು ಇಷ್ಟಪಡುತ್ತೇವೆ. ಈ ನಿರ್ಧಾರದ ಹಿಂದಿನ ಕಾರಣ ಏನು ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಚೀನಾದಲ್ಲಿ ರಜನಿ ಲೈಫ್ ಟೈಮ್ ಕಲೆಕ್ಷನ್ ದಾಖಲೆ ಉಡೀಸ್ ಮಾಡಿದ ಮಹಾರಾಜ

click me!