
ನಟ ಮೋಹನ್ ಲಾಲ್ ನಿರೂಪಣೆ ಮಾಡುತ್ತಿರುವ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮಲಯಾಳಂ ಸೀಸನ್ 3ರ ಸೆಟ್‌ಗೆ ಸೀಲ್ ಹಾಕಲಾಗಿದೆ. ಲಾಕ್‌ಡೌನ್ ಇದ್ದರೂ, ಚಿತ್ರೀಕರಣ ಮಾಡುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಮಲಯಾಳಂ ಬಿಗ್ ಬಾಸ್ ಸೆಟ್ ಹಾಕಿರುವುದು ಚೆನ್ನೈನ ಇವಿಪಿ ಫಿಲ್ಮ್ ಸಿಟಿಯಲ್ಲಿ. ತಮಿಳುನಾಡು ಸರ್ಕಾರ ಸಿನಿಮಾ ಮತ್ತು ಧಾರಾವಾಹಿ ಚಿತ್ರೀಕರಣವನ್ನು ನಿಲ್ಲಿಸುವಂತೆ ಆದೇಶ ಹೊರಡಿಸಿತ್ತು. ಆದರೂ ಬಿಬಿ ಚಿತ್ರೀಕರಣ ಮಾಡಲಾಗುತ್ತಿತ್ತು. ಕೆಲವು ದಿನಗಳ ಹಿಂದೆಯೇ ಬಿಬಿ ಮಲಯಾಳಂ ಸೆಟ್‌ನಲ್ಲಿ ಕೆಲಸ ಮಾಡುತ್ತಿದ್ದ 6 ಮಂದಿಗೆ ಕೊರೋನಾ ಪಾಸಿಟಿವ್ ಇರುವುದು ದೃಢವಾಗಿತ್ತು. ಆದರೂ ಚಿತ್ರೀಕರಣ ಮುಂದುವರಿಸಿದರು.
ನಿಯಮ ಉಲ್ಲಂಘಿಸಿ ಚಿತ್ರೀಕರಣ ಮಾಡುತ್ತಿರುವ ಸ್ಥಳಕ್ಕೆ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ಆಗಮಿಸಿ ಸ್ಪರ್ಧಿಗಳನ್ನು ಹೊಟೇಲ್‌ಗೆ ಸ್ಥಳಾಂತರಿಸಿ, ಸಿಬ್ಬಂದಿ ಸೇರಿ ಎಲ್ಲರನ್ನೂ ಸಂಪೂರ್ಣವಾಗಿ ಖಾಲಿ ಮಾಡಿಸಿ, ಸೆಟ್‌ಗೆ ಸೀಲ್ ಹಾಕಲಾಗಿದೆ.
ಬಿಗ್‌ಬಾಸ್ ನನ್ನ ಮುಖವಾಡ ಕಳಚಿದೆ ! - ಪ್ರಶಾಂತ್ ಸಂಬರಗಿ
ಸುಮಾರು 95 ದಿನಗಳ ಕಾಲ ಬಿಗ್ ಬಾಸ್ ಶೋ ಮುಂದುವರೆದಿತ್ತು ಕೊನೆ ಕ್ಷಣದಲ್ಲಿ ರದ್ದಾಗಿರುವುದಕ್ಕೆ ವೀಕ್ಷಕರು ಹಾಗೂ ಸ್ಪರ್ಧಿಗಳಿಗೆ ಬೇಸರ ತಂದಿದೆ. ಸುಮಾರು 72 ದಿನಗಳ ಕಾಲ ನಡೆದ ಕನ್ನಡ ಬಿಗ್ ಬಾಸ್ ಸೀಸನ್8 ಅನ್ನು ಕೂಡ ಲಾಕ್‌ಡೌನ್ ನಿಯಮದ ಪ್ರಕಾರ ರದ್ದುಗೊಳಿಸಲಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.