ರಾಮ್‌ ಚರಣ್‌ ಮಗುವಿಗೆ ಜಾತಕ ದೋಷ; ಜ್ಯೂತಿಷಿ ವೇಣು ಸ್ವಾಮಿ ಹೇಳಿಕೆ ವೈರಲ್!

Published : Jun 22, 2023, 12:03 PM ISTUpdated : Jun 22, 2023, 12:10 PM IST
ರಾಮ್‌ ಚರಣ್‌ ಮಗುವಿಗೆ ಜಾತಕ ದೋಷ; ಜ್ಯೂತಿಷಿ ವೇಣು ಸ್ವಾಮಿ ಹೇಳಿಕೆ ವೈರಲ್!

ಸಾರಾಂಶ

ಕೂಸು ಹುಟ್ಟುತ್ತಿದ್ದಂತೆ ಭವಿಷ್ಯ ನುಡಿದ ವೇಣು ಸ್ವಾಮಿ. ನೆಗೆಟಿವ್ ಹೇಳಿಕೆಗೆ ನೆಟ್ಟಿಗರ ಆಕ್ರೋಶ...

ಟಾಲಿವುಡ್ ಮೆಗಾ ಸ್ಟಾರ್ ರಾಮ್ ಚರಣ್ ಮತ್ತು ಉಪಾಸನಾ ಮನೆಗೆ ಮಹಾಲಕ್ಷ್ಮಿಯನ್ನು ಬರ ಮಾಡಿಕೊಂಡಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ ಫ್ಯಾಮಿಲಿಯಲ್ಲಿ ಸಂಭ್ರಮವೋ ಸಂಭ್ರಮ. ಹೀಗಿರುವಾಗ ಜ್ಯೋತಿಷಿ ವೇಣು ಸ್ವಾಮಿ ಖಾಸಗಿ ಯುಟ್ಯೂಬ್ ಚಾನೆಲ್‌ನಲ್ಲಿ ಕುಳಿತುಕೊಂಡು ಭವಿಷ್ಯ ನುಡಿದಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. 

ಹೌದು! ಮಗುವಿನ ಪಿನ್ ಟು ಪಿನ್ ಭವಿಷ್ಯ ಹೇಳಿರುವ ವೇಣು ಸ್ವಾಮಿ ಸಣ್ಣಪುಟ್ಟ ದೋಷಗಳಿದೆ ಎಂದು ಹೇಳಿದ್ದಾರೆ. ಹಲ್ಲು ಹಾಗೂ ಕಿವಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಹೆಚ್ಚಿದೆ ಎಂದಿದ್ದಾರೆ. ಅಲ್ಲದೆ ಮಗುವಿನ ಜನನದಿಂದ ತಾಯಿ, ತಂದೆ, ತಾತ ಹಾಗೂ ಎಲ್ಲರೂ ಒಂದಾಗುತ್ತಾರೆ ಎಂದಿದ್ದಾರೆ. ಎಲ್ಲಾ ಹೇಳಿಕೆಗೂ ಸ್ಪಷ್ಟನೆ ಕೊಡುವ ವೇಣು ಸ್ವಾಮಿ ಈ ಮಾತಿನ ಅರ್ಥ ಏನೆಂದು ಬಿಡಿಸಿ ಹೇಳಲಿಲ್ಲ ಹೀಗಾಗಿ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಮನೆಗೆ ಮಗು ಬಂದಿಲ್ಲ ಆಗಲೇ ನಿಮ್ಮ ಕೊಂಕು ಶುರು ಎಂದು ಗರಂ ಆಗಿದ್ದಾರೆ. 

ರಾಮ್ ಚರಣ್ ದಂಪತಿಗೆ ವಿಶೇಷ ತೊಟ್ಟಿಲು ಗಿಫ್ಟ್: ಸಂತಸ ಹಂಚಿಕೊಂಡ ಉಪಾಸನಾ

ರಾಮ್ ಚರಣ್ ಮತ್ತು ಉಪಾಸನಾ ಮದುವೆಯಾಗಿ 11 ವರ್ಷಗಳ ನಂತರ ಹುಟ್ಟಿರುವ ಈ ಮುದ್ದು ಮಗು ಮೆಗಾ ಕುಟುಂಬಕ್ಕೆ ದೊಡ್ಡ ಮಟ್ಟದಲ್ಲಿ ಅದೃಷ್ಟ ತರುತ್ತಾಳಂತೆ. ತಾತ ಚಿರಂಜೀವಿ ಹಾಗೂ ತಂದೆ ರಾಮ್ ಚರಣ್ ಪಡೆದಿರುವ ಯಶಸ್ಸನ್ನು ಮೀರಿಸಿ ಹೆಸರು ಮಾಡುತ್ತಾಳಂತೆ. 20 ಜೂನ್ 2023 ಸುಮಾರು 1.46ಕ್ಕೆ ಹುಟ್ಟಿರುವ ಮಗು ಪುನರ್ವಸು ನಕ್ಷತ್ರ ಮಿಥುನ ರಾಶಿಯಲ್ಲಿ ಜೆನಿಸಿದ್ದಾಳೆ. ಇದರ ಅರ್ಥ ಕುಟುಂಬಕ್ಕೆ ರಾಜಯೋಗ ಬರಲಿದೆ. ಈ ಪಾಸಿಟಿವ್ ಭವಿಷ್ಯದ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ ಆದರೆ ವೇಣು ಸ್ವಾಮಿ ಮೇಲೆ ಸಮಾಧಾನವಿದೆ. 

ಸಾಮಾನ್ಯವಾಗಿ ವೇಣು ಸ್ವಾಮಿ ಹೇಳುವ ಭವಿಷ್ಯವನ್ನು ಟಾಲಿವುಡ್ ಮಂದಿ ನಂಬುತ್ತಾರೆ. ರಶ್ಮಿಕಾ ಮಂದಣ್ಣ ಬ್ರೇಕಪ್, ವಿಜಯ್ ದೇವರಕೊಂಡ ಫ್ಯೂಚರ್, ಪ್ರಭಾಸ್ ಮದುವೆ, ಅದಿಪುರುಷ ಯಶಸ್ಸು ಹೀಗೆ ಸಾಲು ಸಾಲು ಹೇಳಿದ್ದಾರೆ ಪ್ರತಿಯೊಂದು ಸತ್ಯವಾಗಿದೆ. ಹೀಗಾಗಿ ಸಣ್ಣ ಪುಟ್ಟ ದೋಷಗಳು ಕೂಡ ಸತ್ಯ ಆಗಲಿದೆ ಅನ್ನೋ ಭಯದಲ್ಲಿದ್ದಾರೆ ಫ್ಯಾನ್ಸ್‌. ಈ ವಿಚಾರದ ಬಗ್ಗೆ ಮಗಾ ಫ್ಯಾಮಿಲಿಯಲ್ಲಿ ಯಾರೂ ರಿಯಾಕ್ಟ್‌ ಮಾಡಿಲ್ಲ. ಮೆಗಾಸ್ಟಾರ್ ಚಿರಂಜೀವಿ ಮತ್ತು ಅವರ ಕುಟುಂಬ ಆಂಜನೇಯ ಸ್ವಾಮಿಯ ಭಕ್ತರು. ಅಲ್ಲದೇ ಮಂಗಳಕರ ಮಂಗಳವಾರದಂದು ಮಗು ಜನಿಸಿರುವುದು ಒಂದು ಆಶೀರ್ವಾದವಾಗಿದೆ. ಅಪೋಲೋ ಆಸ್ಪತ್ರೆಯ ಅತ್ಯುತ್ತಮ ವೈದ್ಯರ ತಂಡದಿಂದ ಹೆರಿಗೆ ಸುಗಮವಾಗಿ ನಡೆದಿದೆ ಎಂದು ಮೆಗಾ ಕುಟುಂಬ ಹೇಳಿದೆ.

ಉಪಾಸನಾ ಬಗ್ಗೆ ಕೆಟ್ಟದಾಗಿ ಮಾತಾಡಿದ ವ್ಯಕ್ತಿ: ಹಿಗ್ಗಾಮುಗ್ಗಾ ಥಳಿಸಿದ ರಾಮ್ ಚರಣ್ ಫ್ಯಾನ್ಸ್, ವಿಡಿಯೋ ವೈರಲ್

'ಲಿಟಲ್ ಮೆಗಾ ಪ್ರಿನ್ಸೆಸ್‌ಗೆ ಸುಸ್ವಾಗತ. ನಿನ್ನ ಆಗಮನ ಲಕ್ಷಾಂತರ ಮೆಗಾ ಕುಟುಂಬದಲ್ಲಿ ಉತ್ಸಾಹ ತುಂಬಿದ್ದಿಯಾ. ನೀನು ಪೋಷಕರಾದ ರಾಮ್ ಚರಣ್ ಮತ್ತು ಉಪಾಸನಾ ಕೊನಿಡೇಲಾ ಮತ್ತು ನಾವು ಅಜ್ಜ-ಅಜ್ಜಿಯರಿಗೆ ಸಂತೋಷ ಮತ್ತು ಹೆಮ್ಮೆ ಪಡುವಂತೆ ಮಾಡಿದ್ದೀಯಾ' ಎಂದು ಚಿರಂಜೀವಿ ಬರೆದುಕೊಂಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?