
ಮಲಯಾಳಂನ ಖ್ಯಾತ ನಟ, ನಿರ್ಮಾಪಕ ವಿಜಯ್ ಬಾಬುಗೆ(Vijay Babu) ಮತ್ತೊಂದು ಸಂಕಷ್ಟ ಎದುರಾಗಿದೆ. ವಿಜಯ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾದ ಬೆನ್ನಲ್ಲೇ ಮತ್ತೋರ್ವ ಮಹಿಳೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ಈ ಮೊದಲು ಏಪ್ರಿಲ್ 22ರಂದು ಯುವತಿ ನೀಡಿರುವ ದೂರಿನ ಮೇರೆಗೆ ಎರ್ನಾಕುಲಂ ಸೌತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಭರವಸೆ ನೀಡಿ ಕೊಚ್ಚಿಯ ಎರ್ನಾಕುಲಂ ಫ್ಲ್ಯಾಟ್ ನಲ್ಲಿ ವಿಜಯ್ ಬಾಬು ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದರು.
ಈ ಪ್ರಕರಣ ಬೆನ್ನಲ್ಲೇ ಮತ್ತೋರ್ವ ಮಹಿಳೆ ಕೆಲಸದ ವೇಳೆ ವಿಜಯ್ ಬಲವಂತವಾಗಿ ಕಿಸ್ ಮಾಡಲು ಯತ್ನಿಸುತ್ತಿದ್ದ ಎಂದು ದೂರು ನೀಡಿದ್ದಾರೆ(harassment during a work-related meeting). ಈ ಘಟನೆ ತನಗೆ ಆಘಾತವನ್ನುಂಟುಮಾಡಿತ್ತು. ಇದು ನನ್ನನ್ನು ಚಿತ್ರರಂಗದಿಂದ ದೂರ ಇಟ್ಟಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತೆ ದೂರು ನೀಡಿದ ಬಳಿಕ ಈ ಮಹಿಳೆ ತನಗಾದ ದೌರ್ಜನ್ಯದ ಬಗ್ಗೆ ಬಹಿರಂಗ ಪಡಿಸಿ ದೂರು ನೀಡಿದ್ದಾರೆ.
ಅತ್ಯಾಚಾರಕ್ಕೆ ಯತ್ನಿಸಿ 10 ವರ್ಷದ ಬಾಲಕಿಯ ಕೊಲೆ: 14 ರ ಬಾಲಕ ಆರೋಪಿ
ದೂರಿನಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆ, ಆತ ವಿಪರೀತ ಕುಡಿಯುತ್ತಿದ್ದ. ನನಗೂ ನೀಡುತ್ತಿದ್ದ. ನಾನು ನಿರಾಕರಿಸಿ ನನ್ನ ಕೆಲಸ ಮುಂದುವರೆಸಿದೆ. ಆದರೆ ಆತ ತಕ್ಷಣ ನನ್ನ ತುಟಿಗೆ ಮುತ್ತಿಡಲು ಪ್ರಯತ್ನಿಸಿದ. ಯಾವುದೇ ಅನುಮತಿ ಪಡೆಯದೆ ಹೀಗೆ ಮಾಡುತ್ತಿದ್ದ. ಅದೃಷ್ಟವಶಾತ್ ನಾನು ಆತನನ್ನು ತಳ್ಳಿ ಹಿಂದೆ ಬಂದೆ. ಬಳಿಕ ಆತನ ಮುಖ ನೋಡಿದೆ. ಆತ ಕೇವಲ ಒಂದು ಕಿಸ್ ಎಂದು ಕೇಳಿದ ಎಂದು ಆರೋಪಿಸಿದ್ದಾರೆ.
ಸಿನಿಮಾದಲ್ಲಿ ಅವಕಾಶ ಕೊಡಿಸುವ ನೆಪದಲ್ಲಿ ಅತ್ಯಾಚಾರ, ಖ್ಯಾತ ನಟ ವಿಜಯ್ ಬಾಬು ವಿರುದ್ಧ ರೇಪ್ ಕೆಸ್!
ಇನ್ನು ಅತ್ಯಾಚಾರ ಪ್ರಕರಣ ದಾಖಲಾದ ತಕ್ಷಣ ನಟ ವಿಜಯ್ ಬಾಬು ತಲೆಮರೆಸಿಕೊಂಡಿದ್ದಾರೆ. ನಿರೀಕ್ಷಣ ಜಾಮೀನು ಕೋರಿ ಕೇರಳ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದಾರೆ. ವಿಜಯ್ ಬಾಬು ವಿದೇಶಕ್ಕೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಸಂತ್ರಸ್ತ ಯುವತಿ ಕೋಝಿಕೋಡ್ ನಿವಾಸಿಯಾಗಿದ್ದು, ವಿಜಯ್ ಬಾಬು ವಿರುದ್ಧ ಅತ್ಯಾಚಾರ ಹಾಗೂ ದೈಹಿಕ ಹಲ್ಲೆ ನಡೆಸಿರುವುದಾಗಿ ದೂರು ನೀಡಿದ್ದರೂ, ಇದುವರೆಗೂ ಪೊಲೀಸರು ವಿಜಯ್ ಬಾಬುವನ್ನು ಕರೆಸಿ ವಿಚಾರಣೆ ನಡೆಸಿಲ್ಲ. ಬದಲಾಗಿ ಪ್ರಕರಣವನ್ನು ಮುಚ್ಚಿಹಾಕುವ ಯತ್ನ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ. ಇದು ಗಂಭೀರ ಪ್ರಕರಣವಾಗಿದ್ದರೂ ಇದುವರೆಗೂ ನಟನನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಫ್ರೈಡೇ ಫಿಲ್ಮ್ ಹೌಸ್ ಸಿನಿಮಾ ನಿರ್ಮಾಣ ಸಂಸ್ಥೆ ಸ್ಥಾಪಕರಾಗಿರುವ ವಿಜಯ್ ಬಾಬು ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದಾರೆ. 1983ರಲ್ಲಿ ಬಾಲನಟನಾಗಿ ಮಲೆಯಾಳಂ ಸಿನಿಮಾಗೆ ಎಂಟ್ರಿಕೊಟ್ಟ ವಿಜಯ್ ಬಾಬು ಸದ್ಯ ಬೇಡಿಕೆಯ ನಟನಾಗಿ ಹೊರಹೊಮ್ಮಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.