
ಮುಂಬೈ(ಆ.15): ಕಚ್ಚಾ ಬದಮ್ ಗರ್ಲ್ ಎಂದು ಫೇಮಸ್ ಆಗಿರುವ ಅಂಜಲಿ ಅರೋರ ಇದೀಗ ಒಂದರ ಮೇಲೊಂದರಂತೆ ವಿವಾದಲ್ಲಿ ಸಿಲುಕುತ್ತಿದ್ದಾರೆ. ಇತ್ತೀಚೆಗೆ ಅಂಜಲಿ ಅರೋರ ಅವರ ಎಂಎಂಎಸ್ ಲೀಕ್ ಭಾರಿ ಸಂಚಲನ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಅಂಜಲಿ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಅಂಜಲಿ ಅರೋರಾ ತಿರಂಗ ಹಿಡಿದು ಕ್ಯಾಮರಾಗೆ ಫೋಸ್ ನೀಡಿದ್ದಾರೆ. ಇದರಲ್ಲೇನು ವಿವಾದ ಅಂತೀರಾ? ಇಲ್ಲೆ ಇರೋದು ನೋಡಿ. ಅಂಜಲಿ ಅರೋರಾ ತುಂಡುಗೆಯಲ್ಲಿ ತಿರಂಗ ಹಿಡಿದು ಕ್ಯಾಮರಾಗೆ ಫೋಸ್ ನೀಡಿದ್ದಾರೆ. ಆದರೆ ಅಂಜರಿ ಅರೋರ ತುಂಡುಗೆ ತೊಟ್ಟು ತಿರಂಗ ಹಾರಿಸಿದ್ದಾರೆ. ಇದು ರಾಷ್ಟ್ರ ಧ್ವಜಕ್ಕೆ ಮಾಡಿದ ಅವಮಾನ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಹೊಟ್ಟೆ, ಸೋಂಟ ಕಾಣುವಂತ ಉಡುಪು ಧರಿಸಿ ತಿರಂಗ ಹಾರಿಸಿದ್ದಾರೆ. ಅಂಜಲಿ ಅರೋರ ರಾಷ್ಟ್ರಧ್ವಜದ ಬದಲು ತಮ್ಮ ಸೆಕ್ಸಿ ಮೈಮಾಟವನ್ನು ಪ್ರದರ್ಶಿಸಿದ್ದಾರೆ. ಇದಕ್ಕೆ ಸ್ವಾತಂತ್ರ್ಯ ದಿನಾಚರಣೆ ದಿನವನ್ನು ಬಳಿಸಿಕೊಂಡಿದ್ದಾರೆ. ತುಂಡುಗೆಯಲ್ಲಿ ಹೊಕ್ಕಳು ಕಾಣುವಂತೆ ಕ್ಯಾಮರಾಗೆ ಫೋಸ್ ನೀಡಿ ತಿರಂಗ ಹಾರಿಸಿ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಅಂಜಲಿ ಅರೋರ ಎಂಎಂಎಸ್
ಇತ್ತೀಚೆಗ ಅಂಜಲಿ ಅರೋರೋ ಎಂದು ಹೇಳಲಾಗುತ್ತಿದ್ದ ಎಂಎಂಎಸ್ ವಿಡಿಯೋ ಲೀಕ್ ಆಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾದಣದಲ್ಲಿ ಭಾರಿ ವೈರಸ್ ಆಗಿತ್ತು. ಈ ವಿಡಿಯೋದಿಂದ ಅಂಜಲಿ ಅರೋರಾ ವಿರುದ್ಧ ಭಾರಿ ಆಕ್ರೋಶಗಳು ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಅಂಜಲಿ ಅರೋರ, ಈ ವಿಡಿಯೋದಲ್ಲಿರುವು ತಾನಲ್ಲ ಎಂದು ಸ್ಪಷ್ಟಪಡಿಸಿದ್ದರು. ಇಷ್ಟೇ ಅಲ್ಲ ಯಾರದ್ದೂ ವಿಡಿಯೋವನ್ನು ತಾನು ಎಂದು ವೈರಲ್ ಮಾಡುತ್ತಿರುವುದು ಅತ್ಯಂತ ನೋವಿನ ಸಂಗತಿ. ಇದರಿಂದ ತನಗೆ ಅತೀವ ನೋವಾಗಿದೆ ಎಂದಿದ್ದರು. ಇಷ್ಟೇ ಅಲ್ಲ ಈ ಕುರಿತ ಸುದ್ಧಿಗೋಷ್ಠಿಯಲ್ಲಿ ಅಂಜಲಿ ಅರೋರ ಭಾವುಕಕಾರಿದ್ದರು.
ಪಾಕ್ ತುಂಬಿದ ಸಭೆಯಲ್ಲೇ ಆ ದೇಶದ ದುರಹಂಕಾರ ಖಂಡಿಸಿದ ಬಾಲಿವುಡ್ ನಟ!
ಮೇಲ್ನೋಟಕ್ಕೆ ಅಂಜಲಿ ಅರೋರ ರೀತಿ ಕಾಣಿಸುತ್ತಿರುವ ಈ ವಿಡಿಯೋ ಅಂಜಲಿ ಅವರದ್ದೇ ಎಂದು ವೈರಲ್ ಆಗಿತ್ತು. ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ಅಂಜಲಿ ತನಗೂ ವಿಡಿಯೋಗೆ ಸಂಬಂಧ ಇಲ್ಲ ಎಂದಿದ್ದರು. ಇದಾದ ಬಳಿಕ ಅಂಜಲಿ ಅರೋರ ಮತ್ತೆ ನೆಟ್ಟಿಗರ ಟ್ರೋಲ್‌ಗೆ ಗುರಿಯಾಗಿದ್ದರು. ಇತ್ತೀಗೆ ಅಂಜಲಿಯ ಸಾಯನ್ ದಿಲ್ ಮೇ ಆನಾ ರೇ ಯಶಸ್ಸಿನಲ್ಲಿ ಕೇಕ್ ಕತ್ತರಿಸಿ ಸಂಭ್ರಮ ಆಚರಿಸಿದ್ದ ಅಂಜಲಿಗೆ ನೆಟ್ಟಿಗರು ಕ್ಲಾಸ್ ತೆಗೆದುತೊಂಡಿದ್ದರು. ಓವರ್ ಆ್ಯಕ್ಚಿಂಗ್ ಅನ್ನೋ ಕಾರಣಕ್ಕೆ ಟ್ರೋಲ್ ಆಗಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.