ಆಲಿಯಾ ಭಟ್ ಜೊತೆ ರಶ್ಮಿಕಾ ಮಂದಣ್ಣ ಮಸ್ತ್ ಡಾನ್ಸ್: ವಿಡಿಯೋ ವೈರಲ್

Published : Apr 02, 2023, 12:44 PM ISTUpdated : Apr 04, 2023, 04:12 PM IST
ಆಲಿಯಾ ಭಟ್ ಜೊತೆ ರಶ್ಮಿಕಾ ಮಂದಣ್ಣ ಮಸ್ತ್ ಡಾನ್ಸ್: ವಿಡಿಯೋ ವೈರಲ್

ಸಾರಾಂಶ

ನೀತಾ ಮುಖೇಶ್ ಅಂಬಾನಿ  ಅವರ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಅಲಿಯಾ ಭಟ್ ಜೊತೆ ರಶ್ಮಿಕಾ ಮಂದಣ್ಣ ಡಾನ್ಸ್ ಮಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ನಟಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ತಮಿಳು, ತೆಲುಗು ಜೊತೆಗೆ ರಶ್ಮಿಕಾ ಬಾಲಿವುಡ್‌ನಲ್ಲೂ ಸಖತ್ ಹವಾ ಸೃಷ್ಟಿಸಿಕೊಂಡಿದ್ದಾರೆ. ರಶ್ಮಿಕಾ ಇತ್ತೀಚೆಗಷ್ಟೆ  ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಸೆಂಟರ್ ಈವೆಂಟ್‌ನಲ್ಲಿ ಭಾಗಿಯಾಗಿದ್ದರು. ಬಾಲಿವುಡ್‌ನ ಅನೇಕ ಮಂದಿ ಈವೆಂಟ್‌ನಲ್ಲಿ ಭಾಗಿಯಾಗಿದ್ದರು. ಬಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್ಸ್ ಈವೆಂಟ್‌ನಲ್ಲಿ ಮಿಂಚಿದ್ದಾರೆ.  ನೀತಾ ಮುಖೇಶ್ ಅಂಬಾನಿ  ಅವರ ಕಾರ್ಯಕ್ರಮ ಹೈಲೆಟ್‌ಗಳಲ್ಲಿ ನಟಿ ರಶ್ಮಿಕಾ ಡಾನ್ಸ್ ಕೂಡ ಒಂದು. ಹೌದು ಸೌತ್ ಸುಂದರಿ ರಶ್ಮಿಕಾ ಬಾಲಿವುಡ್‌ನಲ್ಲಿ ಸಖತ್ ಮಿಂಚುತ್ತಿದ್ದಾರೆ. ಕಾರ್ಯಕ್ರಮದಲ್ಲಿ ರಶ್ಮಿಕಾ ಬಾಲಿವುಡ್ ನಟಿ ಅಲಿಯಾ ಭಟ್ ಜೊತೆ ಸೇರಿ ಭರ್ಜರಿ ಡಾನ್ಸ್ ಮಾಡಿದ್ದಾರೆ. 

ಅಲಿಯಾ ಭಟ್ ಮತ್ತು ರಶ್ಮಿಕಾ ಮಂದಣ್ಣ ಇಬ್ಬರ ಡಾನ್ಸ್ ಈಗ ವೈರಲ್ ಆಗಿದ್ದು ಅಭಿಮಾನಿಗಳ ಹೃದಯ ಗೆದ್ದಿದೆ. ಇಬ್ಬರೂ ಸ್ಟಾರ್ಸ್ ಸೂಪರ್ ಹಿಟ್ ಆಸ್ಕರ್ ಪ್ರಶಸ್ತಿ ವಿಜೇತ ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರಶ್ಮಿಕಾ ಮತ್ತು ಆಲಿಯಾ ಇಬ್ಬರನ್ನೂ ಒಟ್ಟಿಗೆ ಸ್ಟೇಜ್ ಮೇಲೆ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.  ಅಲಿಯಾ ಭಟ್ ಹೈಹೀಲ್ಸ್ ಧರಿಸಿದ್ದರು. ಹೈ ಹೀಲ್ಸ್ ಅನ್ನು ವೇದಿಕೆ ಮೇಲೆಯೆ ಬಿಚ್ಚಿಟ್ಟು ಡಾನ್ಸ್ ಮಾಡಿದ್ದಾರೆ. 



ದೇವರಕೊಂಡ ಜೊತೆ ಬ್ರೇಕಪ್ ಮಾಡ್ಕೊಂಡ್ರಾ ರಶ್ಮಿಕಾ? ಮತ್ತೊಬ್ಬ ತೆಲುಗು ಹೀರೋ ಜೊತೆ ಕಿರಿಕ್ ಬ್ಯೂಟಿ ಸುತ್ತಾಟ

ಅನೇಕ ಬಾಲಿವುಡ್ ಸ್ಟಾರ್ಸ್ ಮಸ್ತ್ ಡಾನ್ಸ್ ಮಾಡಿದ್ದಾರೆ. ರಣ್ವೀರ್ ಸಿಂಗ್ ಮತ್ತು ಪ್ರಿಯಾಂಕಾ ಚೋಪ್ರಾ ಕೂಡ ಸಖತ್ ಡಾನ್ಸ್ ಮಾಡಿದ್ದಾರೆ. ಇಬ್ಬರ ಡಾನ್ಸ್ ವಿಡಿಯೋ ಕೂಡ ವೈರಲ್ ಆಗಿದೆ. ಪ್ರಿಯಾಂಕಾ  ನೀತಾ ಮುಖೇಶ್ ಅಂಬಾನಿ  ಅವರ ಕಾರ್ಯಕ್ರಕ್ಕಾಗಿ ಅಮೆರಿಕಾದಿಂದ ಬಂದಿದ್ದಾರೆ. ಮೊದಲ ಬಾರಿಗೆ ಪ್ರಿಯಾಂಕಾ ಮಗಳು ಮಾಲ್ತಿ ಮೇರೆ ಜೊತೆ ಭಾರತಕ್ಕೆ ಬಂದಿದ್ದು ಕಾರ್ಯಕ್ರಮದಲ್ಲಿ ಸಖತ್ ಡಾನ್ಸ್ ಮಾಡಿದ್ದಾರೆ.

ಐಪಿಎಲ್ 2023 ಅದ್ಧೂರಿ ಚಾಲನೆ, ಅರ್ಜಿತ್, ರಶ್ಮಿಕಾ, ತಮನ್ನ ಮೋಡಿಗೆ ಫ್ಯಾನ್ಸ್ ಫಿದಾ!

ರಶ್ಮಿಕಾ ಸದ್ಯ ಹಿಂದಿಯಲ್ಲಿ ‘ಅನಿಮಲ್​’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಜೊತೆ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ರಣಬೀರ್‌ಗೆ ಜೋಡಿಯಾಗಿದ್ದಾರೆ. ಇನ್ನು  ತೆಲುಗಿನಲ್ಲಿ ‘ಪುಷ್ಪ 2’ ಸಿನಿಮಾದಲ್ಲಿ  ನಟಿಸುತ್ತಿದ್ದಾರೆ. ಮೊದಲ ಭಾಗದ ಸೂಪರ್ ಸಕ್ಸಸ್ ಬಳಿಕ ರಶ್ಮಿಕಾ 2ನೇ ಭಾಗದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪಾರ್ಟ್-2 ಮೇಲಿನ ನಿರೀಕ್ಷೆ ಕೂಡ ಹೆಚ್ಚಾಗಿದೆ.  ಇದರ ಜೊತೆಗೆ ರಶ್ಮಿಕಾ ಇತ್ತೀಚೆಗಷ್ಟೆ ತೆಲುಗು ನಟ ನಿತಿನ್ ಜೊತೆ  ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?