ಆರವ್ ಕುಮಾರ್ ಆಯ್ತು, ಈಗ ಮಾಧವನ್ ಮಗನ ಜೊತೆ ಆರ್ಯನ್ ಖಾನ್ ಹೋಲಿಕೆ

By Suvarna News  |  First Published Oct 6, 2021, 6:36 PM IST

ಬಾಲಿವುಡ್ (Bollywood) ಬಾದ್‌ಶಾ ಶಾರುಖ್ ಖಾನ್ (sharukh khan) ಮಗ ಆರ್ಯನ್ ಖಾನ್ (Aryan khan) ರೇವ್ ಪಾರ್ಟಿ, ಡ್ರಗ್ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದೇ ಆತನ ಬಗ್ಗೆ ಚರ್ಚೆ ಜೋರಾಗಿದೆ. ಇದೀಗ ದಕ್ಷಿಣ ಭಾರತದ ಪ್ರತಿಭಾವಂತ ನಟ ಮಾಧವನ್ ಮಗನ ಜೊತೆ ಆರ್ಯನ್ ಖಾನ್ ಹೋಲಿಕೆ ನಡೆಯುತ್ತಿದೆ. ಮಾಧವನ್ ಮಗ ಯಾರು? ಆತ ಹೇಗಿದ್ದಾನೆ? ಇಲ್ಲಿದೆ ಫುಲ್ ಡೀಟೈಲ್ಸ್.


ಆರ್ಯನ್ ಖಾನ್ (Aryan khan) ಬಂಧನದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ (Social Media) ಇತರೇ ಸ್ಟಾರ್ ನಟರ ಜೊತೆಗೆ ಆತನನ್ನು ಹೋಲಿಕೆ ಮಾಡಿ ಹೀಗೆಳೆಯೋ ಕೆಲಸ ನಡೀತಿದೆ. ಮೊನ್ನೆ ತಾನೇ ಅಕ್ಷಯ್ ಕುಮಾರ್ (Akshay kumar) ಮಗ ಆರವ್ ಕುಮಾರ್ ಜೊತೆಗೆ ಶಾರುಖ್‌ (Sharukh Khan) ಪುತ್ರನನ್ನು ಹೋಲಿಸಿ ನೆಟಿಜನ್ಸ್ ಕಮೆಂಟ್ ಮಾಡಿದ್ದರು. ಅತ್ತ ಡ್ರಗ್ ಕೇಸ್‌ನಲ್ಲಿ ಆರ್ಯನ್ ಖಾನ್ ಸಿಕ್ಕಿಬಿದ್ದ ಹೊತ್ತಿಗೇ ಇತ್ತ ಅಕ್ಷಯ್ ಕುಮಾರ್ ಪತ್ನಿ, ಟ್ವಿಂಕಲ್ ಖನ್ನಾ (Twinkle Khanna) ಇಂಗ್ಲೆಂಡ್ (England)ನಲ್ಲಿ ಓಡುತ್ತಿರುವ ಮಗ ಆರವ್ ಫೋಟೋ ಪೋಸ್ಟ್ ಮಾಡಿದ್ದರು. 'ಈ ಭಾನುವಾರ ಬೆಳಗು ಬಹಳ ಸ್ಪೆಷಲ್ ಆಗಿತ್ತು. ಮಗನ ಪ್ರೀತಿಯ ಕ್ಯಾಂಪಸ್‌ನಲ್ಲಿ ಆರವ್ ಜೊತೆ ನನ್ನ ಭೇಟಿ ನಡೆಯಿತು. ನಾವಿಬ್ಬರೂ ಒಟ್ಟಿಗೇ ತಿಂಡಿ ತಿಂದು ದಿನವನ್ನು ಆನಂದಿಸಿದೆವು' ಎಂದು ಟ್ವಿಂಕಲ್ ಬರೆದುಕೊಂಡಿದ್ದರು. ಆಗ ಅಕ್ಷಯ್ ಹಾಗೂ ಟ್ವಿಂಕಲ್ ಮಗನನ್ನು ಸಭ್ಯ ರೀತಿಯಲ್ಲಿ ಬೆಳೆಸಿದ ಕಾರಣ ಆತ ಒಳ್ಳೆಯ ದಾರಿ ಹಿಡಿದು ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗುವತ್ತ ಹೆಜ್ಜೆ ಹಾಕುತ್ತಿದ್ದಾನೆ. ಶಾರುಖ್-ಗೌರಿ (Sharukh Khan-Gowri Khan) ತಮ್ಮ ಬೆಳವಣಿಗೆಗೆ ಮಾತ್ರ ಗಮನ ನೀಡಿದರು. ಮಗನಿಗೆ ಸರಿಯಾಗಿ ಮಾರ್ಗದರ್ಶನ ನೀಡಲಿಲ್ಲ ಎಂಬರ್ಥದ ಮಾತುಗಳು ಕೇಳಿಬಂದವು. 

ನಟನಾಗಲು ಇಷ್ಟಪಡದ ಆರ್ಯನ್‌: ಬಾಲಿವುಡ್‌ ಕಿಂಗ್‌ ಪುತ್ರನ ಕಥೆ-ವ್ಯಥೆ!

 
 
 
 
 
 
 
 
 
 
 
 
 
 
 

Tap to resize

Latest Videos

A post shared by R. Madhavan (@actormaddy)

ಈಗ ದಕ್ಷಿಣ ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ನಟ ಮಾಧವನ್ (Madhavan) ಮಗನ ಜೊತೆಗೆ ಶಾರುಖ್ ಪುತ್ರನ ಹೋಲಿಕೆ ನಡೆದಿದೆ. ಮಾಧವನ್ ಮಗನ ಹೆಸರು ವೇದಾಂತ್. ಈತ ಸ್ಪೋರ್ಟ್ಸ್ ನಲ್ಲಿ ಬಹಳ ಮುಂದಿದ್ದಾನೆ. ಏಷಿಯನ್ ಲೆವೆಲ್ ಸ್ವಿಮ್ಮಿಂಗ್‌ನಲ್ಲಿ (Asian level Swimming) ಭಾರತವನ್ನು ಪ್ರತಿನಿಧಿಸಿ ಬೆಳ್ಳಿ ಪದಕ (Silver Medal) ಗೆದ್ದಿದ್ದ. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಮಾಧವನ್ ಮಗನ ಸಾಧನೆಯ ಬಗ್ಗೆ ತಿಳಿಸಿ ಹೆಮ್ಮೆ ವ್ಯಕ್ತಪಡಿಸಿದ್ದರು. ಇದೀಗ ಮಾಧವನ್ ಪುತ್ರ ವೇದಾಂತ್‌ಗೂ ಶಾರುಖ್ ಮಗ ಆರ್ಯನ್‌ಗೂ ಹೋಲಿಕೆ ಮಾಡಿ ವೇದಾಂತ್ ಪ್ರತಿಭೆಯನ್ನು ಜನ ಹೊಗಳುತ್ತಿದ್ದಾರೆ. ಕಳೆದ ಆಗಸ್ಟ್ ನಲ್ಲಿ ವೇದಾಂತ್ ಹದಿನಾರರ ಹರೆಯಕ್ಕೆ ಕಾಲಿಟ್ಟಾಗ ಮಗನ ಬಗ್ಗೆ ಪ್ರೀತಿಯ ಪೋಸ್ಟ್ಅನ್ನು ಮಾಧವನ್ ಹಾಕಿದ್ದರು. 'ನೀನು ಎಲ್ಲ ವಿಷಯದಲ್ಲೂ ನನ್ನಿಂದ ಬಹಳ ಮುಂದಿದ್ದೀಯಾ. ನಾನು ಹೊಟ್ಟೆಕಿಚ್ಚು ಪಡುವ ಮಟ್ಟಿಗೆ ಬೆಳೆದಿದ್ದೀಯ. ನಾನು ನಿನ್ನಿಂದ ಕಲಿಯೋದು ಬಹಳ ಇದೆ. ನಿನ್ನ ಬೆಳವಣಿಗೆ ಕಂಡು ನನ್ನ ಹೃದಯ ತುಂಬಿ ಬಂದಿದೆ. ನಿನ್ನಂಥಾ ಮಗನನ್ನು ಪಡೆಯಲು ನಾನು ಪುಣ್ಯಮಾಡಿದ್ದೆ,' ಎಂದು ಹೃದಯ ತುಂಬಿ ನುಡಿದಿದ್ದರು. (Heart felt note)


ಅಷ್ಟೇ ಅಲ್ಲ, ಮಾಧವನ್ ಕುಟುಂಬ ಇಂದಿಗೂ ತಮ್ಮ ಪೂರ್ವಜರ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರುವ ಜೊತೆಗೆ ಮುಂದುವರಿಸಿಕೊಂಡೂ, ಹೋಗುತ್ತಿದ್ದಾರೆ. ಇತ್ತೀಚೆಗೆ ಮಾಧವನ್ (Madhavan) ಅವರು ಮಗ ಜೊತೆಗೆ ನೂಲ ಹುಣ್ಣಿಮೆಯಂದು ಹೊಸ ಜನಿವಾರ ಹಾಕಿಕೊಳ್ಳುತ್ತಿರುವ ಫೋಟೋ ಶೇರ್ ಮಾಡಿದ್ದರು. ಅದಕ್ಕೂ ನೆಟಿಜನ್ಸ್ ಮೆಚ್ಚುಗೆ ಸೂಚಿಸಿದ್ದರು. 

ಇಬ್ಬರಿಗೂ 23 ವರ್ಷ: ನೀರಜ್‌ಗೆ ಹೋಲಿಸಿ ಆರ್ಯನ್ ಖಾನ್ ಟ್ರೋಲ್

ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಮಾಧವನ್ ಸಂಸ್ಕಾರದಲ್ಲಿ, ಪ್ರೀತಿಯಲ್ಲಿ ಮಗನನ್ನು ಹೇಗೆ ಬೆಳೆಸಿದ್ದಾರೆ, ಅದು ಇತರೇ ಸ್ಟಾರ್‌ ಕಿಡ್‌ಗಳಿಗೆ (Star Kids) ಅದರಲ್ಲೂ ಮುಖ್ಯವಾಗಿ ಶಾರುಖ್‌ ಖಾನ್ ಅಂಥವರಿಗೆ ಹೇಗೆ ಪ್ರೇರಣೆ ಆಗಬೇಕು ಅನ್ನುವುದನ್ನು ಹೇಳಿದ್ದಾರೆ. ಈ ಹಿಂದೆ ತನ್ನ ಮಗ ಸೆಕ್ಸ್ ಮಾಡಬಹುದು, ಡ್ರಗ್ (Drug) ಸೇವಿಸಬಹುದು, ಅಂಥಾ ಸ್ವಾತಂತ್ರ್ಯ (Freedom) ಅವನಿಗಿದೆ ಎಂಬರ್ಥದ ಶಾರುಖ್ ಮಾತುಗಳೇ ಅವರು ಮಗನನ್ನು ಬೆಳೆಸಿದ ರೀತಿ ಹೇಗೆ ಅನ್ನೋದನ್ನು ತಿಳಿಸುತ್ತದೆ. ಇದರ ಪರಿಣಾಮ ಅವರ ಮಗ ಆರ್ಯನ್ ಇದೀಗ ಜೈಲು ಸೇರುವಂತಾಗಿದೆ. ಆದರೆ ಮಕ್ಕಳಿಗೆ ಬಾಲ್ಯದಿಂದಲೇ ಪ್ರೀತಿ (love), ಸಂಸ್ಕಾರ ನೀಡಿ ಬೆಳೆಸಿದ ಕಾರಣ ಮಾಧವನ್ ಮಗ ದೇಶ ಹೆಮ್ಮೆ ಪಡುವಂಥಾ ಮಾದರಿ ಕೆಲಸ ಮಾಡಿದ್ದಾನೆ ಎಂಬರ್ಥದ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ. ಮಗನ ಬಿಡುಗಡೆ ಒದ್ದಾಡುತ್ತಿರುವ ಶಾರೂಖ್‌ಗೆ ಇಂಥಾ ಮಾತುಗಳು ನುಂಗಲಾರದ ತುತ್ತಾಗಿದೆ. 

ವಿದೇಶದಲ್ಲಿ ಕಲಿತದ್ದು ಇದನ್ನಾ ? ಆರ್ಯನ್ ಡ್ರಗ್ಸ್ ಗ್ಯಾಂಗ್

"

click me!