ನಾಗಚೈತನ್ಯ ಜೊತೆ ನಾನು ಕಾಣಿಸ್ಕೊಳ್ಳಲ್ಲ ಕಣ್ರೀ.., ನೀವು ಏನ್‌ ಬೇಕಿದ್ರೂ ನಿರೀಕ್ಷೆ ಇಟ್ಕೊಂಡಿರಿ..: Actress Samantha

Published : Jun 18, 2025, 01:22 PM ISTUpdated : Jun 18, 2025, 02:33 PM IST
Naga Chaitanya and Samantha

ಸಾರಾಂಶ

‘ಯೇ ಮಾಯೇ ಚೇಸಾವೆ’ ಸಿನಿಮಾ ಮತ್ತೆ ರಿಲೀಸ್ ಆಗ್ತಿದೆ. ಚೈತನ್ಯ, ಸಮಂತ ಜೊತೆಯಾಗಿ ಪ್ರಮೋಷನ್ ಮಾಡ್ತಾರೆ ಅಂತೆಲ್ಲಾ ಗಾಳಿಸುದ್ದಿ ಹಬ್ಬಿತ್ತು. ಈ ಬಗ್ಗೆ ಸಮಂತ ಸ್ಪಷ್ಟನೆ ಕೊಟ್ಟಿದ್ದಾರೆ.

ಗೌತಮ್ ವಾಸುದೇವ್ ಮೀನನ್ ಡೈರೆಕ್ಷನ್ ನ 'ಯೇ ಮಾಯೇ ಚೇಸಾವೆ' ಸೂಪರ್ ಹಿಟ್ ಆಗಿತ್ತು. ಈ ಸಿನಿಮಾ 15 ವರ್ಷ ಪೂರ್ತಿಯಾಗುವ ಹಿನ್ನೆಲೆಯಲ್ಲಿ ಜುಲೈ 18, 2025 ಕ್ಕೆ ಮತ್ತೆ ಈ ಸಿನಿಮಾವನ್ನು ರೀ ರಿಲೀಸ್ ಮಾಡ್ತಿದ್ದಾರೆ. ನಟ ನಾಗಚೈತನ್ಯ, ಸಮಂತಾ ಈ ಸಿನಿಮಾದಲ್ಲಿ ನಟಿಸಿದ್ದರು. ಇವರಿಬ್ಬರಿಗೂ ಟಾಲಿವುಡ್‌ನಲ್ಲಿ ಬೇರೂರಲು ಅಡಿಪಾಯ ಹಾಕಿಕೊಟ್ಟ ಸಿನಿಮಾವಿದು. ಹೀಗಾಗಿ ಇವರಿಬ್ಬರು ಜೊತೆಯಾಗಿ ಪ್ರಮೋಷನ್ ಮಾಡ್ತಾರೆ ಅಂತೆಲ್ಲಾ ಸುದ್ದಿ ಹಬ್ಬಿತ್ತು.

ಸಮಂತಾ ಈ ಗಾಳಿಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. “ಈ ಸಿನಿಮಾದ ಪ್ರತಿ ಫ್ರೇಮ್ ನನಗೆ ನೆನಪಿದೆ. ಮೊದಲ ಸೀನ್‌ನಲ್ಲಿ ಗೇಟ್ ಹತ್ರ ಕಾರ್ತಿಕ್‌ನ ಭೇಟಿಯಾಗೋ ಜೆಸ್ಸಿ ಪಾತ್ರ ನನ್ನದು. ಗೌತಮ್ ಮೀನನ್ ತರಹ ನಿರ್ದೇಶಕ ಜೊತೆ ವರ್ಕ್ ಮಾಡಿದ್ದು ಖುಷಿ ತಂದಿದೆ” ಅಂತ ಭಾವುಕರಾಗಿದ್ದಾರೆ.

ಪ್ರಮೋಷನ್ ಇಲ್ಲ

“ನಾನು ಪ್ರಮೋಷನ್‌ಗೆ ಬರ್ತಿಲ್ಲ. ಯಾರೂ ಬರ್ತಿಲ್ಲ. ಫ್ಯಾನ್ಸ್‌ಗೆ ನಾವಿಬ್ಬರೂ ಜೊತೆಯಾಗಿ ಪ್ರಮೋಷನ್ ಮಾಡೋದು ಇಷ್ಟ ಇರಬಹುದು. ಆದ್ರೆ, ಯಾವಾಗಲೂ ಅವರ ನಿರೀಕ್ಷೆ ಪೂರೈಸೋಕೆ ಆಗಲ್ಲ. ಈ ವದಂತಿ ಯಾರು ಹಬ್ಬಿಸ್ತಿದ್ದಾರೆ ಅಂತ ಗೊತ್ತಿಲ್ಲ” ಅಂತ ಸಮಂತಾ ಹೇಳಿದ್ದಾರೆ.

ವಿಶೇಷವಾದ ಸಿನಿಮಾ

2010 ರಲ್ಲಿ ರಿಲೀಸ್ ಆದ ‘ಯೇ ಮಾಯೇ ಚೇಸಾವೆ’ ಚೈತನ್ಯ ಹಾಗೂ ಸ್ಯಾಮ್‌ ಇಬ್ಬರಿಗೂ ತುಂಬ ಸ್ಪೆಷಲ್. ಶೂಟಿಂಗ್ ಟೈಮ್ ಅಲ್ಲೇ ಇಬ್ಬರೂ ಲವ್ ಮಾಡಲು ಶುರು ಮಾಡಿ, 2017 ರಲ್ಲಿ ಮದುವೆ ಆಗಿದ್ರು. ಆದ್ರೆ, 2021ರಲ್ಲಿ ಡಿವೋರ್ಸ್ ತಗೊಂಡ್ರು.

ಎರಡನೇ ಮದುವೆ ಆಗಿರೋ ನಾಗಚೈತನ್ಯ! 

ಡಿವೋರ್ಸ್ ನಂತರ ಇಬ್ಬರೂ ಬೇರೆ ಬೇರೆ ಹಾದಿಯಲ್ಲಿ ಬ್ಯುಸಿ ಇದ್ದಾರೆ. ಚೈತನ್ಯ ಅವರು ನಟಿ ಶೋಭಿತಾರನ್ನು ಜೊತೆ ಮದುವೆ ಆಗಿದ್ದಾರೆ. ಸಮಂತಾ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇನ್ನು ನಿರ್ದೇಶಕ ರಾಜ್‌ ಜೊತೆ ಸಮಂತಾ ತಿರುಗುತ್ತಿರುವ ಫೋಟೋಗಳು ವೈರಲ್‌ ಆಗ್ತಿದ್ದು, ಇವರಿಬ್ಬರು ಲವ್‌ನಲ್ಲಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ‘ಯೇ ಮಾಯೇ ಚೇಸಾವೆ’ ಸಿನಿಮಾ ರಿಲೀಸ್ ಆದ್ರೂ, ಸಮಂತಾ ಪ್ರಮೋಷನ್‌ಗೆ ಬರಲ್ಲ ಅಂತ ಹೇಳಿರೋದು ಚರ್ಚೆಗೆ ಕಾರಣ ಆಗಿದೆ.

ಒಟ್ಟಿಗೆ ಕೆಲ ಸಿನಿಮಾ ಮಾಡಿರುವ ಈ ಜೋಡಿ!

ಈ ಸಿನಿಮಾ ನೆನಪುಗಳು ಫ್ಯಾನ್ಸ್‌ಗೆ ಇನ್ನೂ ಇವೆ. ಚೈತು-ಸ್ಯಾಮ್ ಕೆಮಿಸ್ಟ್ರಿ ಸೂಪರ್ ಆಗಿತ್ತು. ʼಯೇ ಮಾಯೇ ಚೇಸಾವೆ’ ಸಿನಿಮಾ ನಂತರ ಆಟೋನಗರ್ ಸೂರ್ಯ, ಮನಂ, ಮಜಿಲಿ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ರು.

ಸಮಂತಾ ಇತ್ತೀಚೆಗೆ ಡೈರೆಕ್ಟರ್ ರಾಜ್ ನಿಡಿಮೋರು ಜೊತೆ ಫೋಟೋ ಹಾಕಿದ್ರು. ಇದರಿಂದ ಅವರ ಪರ್ಸನಲ್ ಲೈಫ್ ಬಗ್ಗೆ ಗಾಳಿಸುದ್ದಿ ಹಬ್ಬಿದೆ. ಚೈತನ್ಯ ವಿರೂಪಾಕ್ಷ ಡೈರೆಕ್ಟರ್ ಕಾರ್ತಿಕ್ ದಂಡು ಜೊತೆ ಸಿನಿಮಾ ಮಾಡ್ತಿದ್ದಾರೆ. ಸಮಂತಾ ಪ್ರೊಡ್ಯೂಸರ್ ಆಗಿ ಶುಭಂ ಸಿನಿಮಾ ಮಾಡಿದ್ದಾರೆ. ಸಮಂತಾ ಮತ್ತೆ ಮದುವೆ ಆಗ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 ವರ್ಷದ ಮಗಳಿಗೆ 'ನಿನ್ನ ಲವ್ವರ್ ಹೀಗೆ ಇರಬೇಕು, ಆಣೆ ಮಾಡು' ಎಂದ ಖ್ಯಾತ ನಟ;‌ ಕಂಡೀಷನ್‌ ಕೇಳಿ ಅನೇಕರಿಂದ ಛೀಮಾರಿ
'ವಾರಣಾಸಿ' ಸಿನಿಮಾ ಶೂಟಿಂಗ್ ನೋಡಲು ಅವತಾರ್ ಖ್ಯಾತಿಯ ಜೇಮ್ಸ್ ಕ್ಯಾಮರೂನ್ ಆಸಕ್ತಿ: ಆದ್ರೆ ರಾಜಮೌಳಿ ಹೇಳಿದ್ದೇನು?