ನನ್ನ ಇಬ್ಬರೂ ಮಕ್ಕಳು ಗಂಡಂದಿರಿಗೆ ಡಿವೋರ್ಸ್ ನೀಡಿ ನಿತ್ಯಾನಂದನ ಜೊತೆಗಿದ್ದಾರೆ: ನಟ ಅಶೋಕ್ ಕಣ್ಣೀರು

Published : May 26, 2023, 12:38 PM IST
ನನ್ನ ಇಬ್ಬರೂ ಮಕ್ಕಳು ಗಂಡಂದಿರಿಗೆ ಡಿವೋರ್ಸ್ ನೀಡಿ ನಿತ್ಯಾನಂದನ ಜೊತೆಗಿದ್ದಾರೆ: ನಟ ಅಶೋಕ್ ಕಣ್ಣೀರು

ಸಾರಾಂಶ

ತನ್ನ ಇಬ್ಬರೂ ಮಕ್ಕಳು ಗಂಡಂದಿರಿಗೆ ವಿಚ್ಛೇದನ ನೀಡಿ ನಿತ್ಯಾನಂದನ ಜೊತೆಗಿದ್ದಾರೆ ಎಂದು ಹಿರಿಯ ನಟ ಅಶೋಕ್ ಬಹಿರಂಗ ಪಡಿಸಿದ್ದಾರೆ. 

ಕಳೆದ ಕೆಲವು ವರ್ಷಗಳ ಹಿಂದೆ ರಾಸಲೀಲೆ ಪ್ರಕರಣದ ಮೂಲಕ ಭಾರಿ ಸದ್ದು ಮಾಡಿದ್ದ ನಿತ್ಯಾನಂದ ವಿರುದ್ಧ ಇದೀಗ ಹಿರಿಯ ನಟ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ. ತನ್ನ ಇಬ್ಬರೂ ಮಕ್ಕಳು ಗಂಡಂದಿರಿಗೆ ವಿಚ್ಛೇದನ ನೀಡಿ ನಿತ್ಯಾನಂದನ ಜೊತೆಗಿದ್ದಾರೆ  ಎಂದು ಕಣ್ಣೀರಿಟ್ಟಿದ್ದಾರೆ ನಟ ಅಶೋಕ್. ಮೊದಲ ಬಾರಿಗೆ ಮಾಧ್ಯಮದ ಮುಂದೆ ಮಕ್ಕಳ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ. ಅಂದಹಾಗೆ ಕಳೆದ ಕೆಲವು ವರ್ಷಗಳ ಹಿಂದೆ ನಿತ್ಯಾನಂದ ಮತ್ತು ನಟಿ ರಂಜಿತಾ ರಾಸಲೀಲೆ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇಬ್ಬರ ಫೋಟೋ ಮತ್ತು ವಿಡಿಯೋಗಳು ಕೋಲಾಹಲ ಸೃಷ್ಟಿಸಿತ್ತು. 

ನಿತ್ಯಾನಂದನ ಮಾಯೆಯಲ್ಲಿ ಸಿಲುಕಿರುವ ನಟಿ ರಂಜಿತಾ ಇಂದಿಗೂ ಅಲ್ಲೇ ಇದ್ದಾರೆ. ಅಷ್ಟೆಯಲ್ಲ ರಂಜಿತಾ ಜೊತೆಗೆ ಆಕೆಯ ಸಹೋದರಿ ಕೂಡ ನಿತ್ಯಾನಂದನ ಜೊತೆಗಿದ್ದಾಳೆ ಎಂದು ತಂದೆ ಅಶೋಕ್ ಬಹಿರಂಗ ಪಡಿಸಿದ್ದಾರೆ. ತನ್ನ ಇಬ್ಬರೂ ಮಕ್ಕಳು ನಿತ್ಯಾನಂದನ ಜೊತೆಗಿದ್ದಾರೆ, ಮಕ್ಕಳಿಂದಲೇ ತಾನು ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದೆ ಎಂದಿದ್ದಾರೆ.

'ನಮಗೆ ಮೂರು ಜನ ಹೆಣ್ಣು ಮಕ್ಕಳು, ಅವರು ಇಷ್ಟಪಟ್ಟರ ಜೊತೆ ಮದುವೆ ಮಾಡಿಸಿಕೊಟ್ಟೆ, ನನ್ನ ಮೊದಲನೇ ಮಗಳು ಅಮೆರಿಕಾದಲ್ಲಿ ಇದ್ದಳು. ಅವಳು ಆಗಾಗ ನಿತ್ಯಾನಂದ ಸ್ವಾಮಿ ಆಶ್ರಮಕ್ಕೆ ಪ್ರವಚನ ಕೇಳಲು ಹೋಗುತ್ತಿದ್ದಳು. ಅಕ್ಕನನ್ನು ನೋಡಲು ನನ್ನ 2ನೇ ಮಗಳು ರಂಜಿತಾ ಹೋಗಲು ಆರಂಭಿಸಿದ್ದಳು. ದೇವಸ್ಥಾನಕ್ಕೆ ಹೋಗದ ರಂಜಿತಾಗೆ ದೇವರ ಮೇಲೆ ಭಕ್ತಿ ಹೆಚ್ಚಾಗಿತ್ತು. ಅಕ್ಕನ ಜೊತೆ ರಂಜಿತಾ ಕೂಡ ಹೋಗಲು ಆರಂಭಿಸಿದ್ದಳು. ರಂಜಿತಾ ಮತ್ತು ನಿತ್ಯಾನಂದ ನಡುವಿನ ರಿಲೇಷನ್‌ಶಿಪ್ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಆ ಫೋಟೋಗಳನ್ನ ನೋಡಿದರೆ ಏನೋ ಹೇಳಬೇಕೋ ಗೊತ್ತಾಗುತ್ತಿಲ್ಲ' ಎಂದು ಹೇಳಿದರು.

'ನಿತ್ಯಾನಂದನ ಆಶ್ರಮಕ್ಕೆ ಹೋಗುತ್ತಿದ್ದಾಗಲೇ ರಂಜಿತಾ ಗಂಡನಿಗೆ ಡಿವೋರ್ಸ್ ಕೊಟ್ಟಿದ್ದಳು. ಈ ಡಿವೋರ್ಸ್‌ಗೆ ನಿತ್ಯಾನಂದ ಕೂಡ ಒಂದು ಅರ್ಥದಲ್ಲಿ ಕಾರಣ. ಖ್ಯಾತ ನಟಿ, ಗುಡ್‌ವಿಲ್ ಎನ್ನುವ ಕಾರಣಕ್ಕೆ ಆಕೆಯನ್ನು ನಿತ್ಯಾನಂದ ಕೈವಶ ಮಾಡಿಕೊಂಡಿರುವ ಸಾಧ್ಯತೆ ಇದೆ. ಮತ್ತೊಂದು ಕಡೆ ನನ್ನ ದೊಡ್ಡ ಮಗಳು ನಿರ್ಮಲಾ ಸಹ ಗಂಡನಿಗೆ ಡಿವೋರ್ಸ್ ಕೊಟ್ಟು ಆಶ್ರಮ ಸೇರಿಕೊಂಡಿದ್ದಳು. ಇಬ್ಬರೂ ಅಲ್ಲೇ ಇದ್ದಾರೆ' ಎಂದು ಭಾವಿಕರಾದರು.  

ನಿತ್ಯಾನಂದನ ಕೈಲಾಸ ದೇಶಕ್ಕೆ ಹೋಗಲು ಬಯಸ್ತೀರಾ.... ಆನ್‌ಲೈನ್‌ನಲ್ಲಿ ನಿತ್ಯ ಆಹ್ವಾನ

'ನಾನು ಒಮ್ಮೆ ಆಶ್ರಮಕ್ಕೆ ಹೋಗಿದ್ದೆ. ರಂಜಿತಾ ಮತ್ತು ನಿರ್ಮಲಾ ಇಬ್ಬರೂ ಅಲ್ಲೇ ಇದ್ದರು. ನನ್ನನ್ನು ನೋಡುತ್ತಿದ್ದಂತೆ ನಿತ್ಯಾನಂದ ಬನ್ನಿ ಬನ್ನಿ. ನನಗೆ ತುಂಬಾ ಖುಷಿ ಆಗುತ್ತಿದೆ. ನಿಮ್ಮ ಬಗ್ಗೆ ಹೆಮ್ಮೆ ಆಗುತ್ತಿದೆ ಎಂದ. ನಾನು ಆಗ ನನಗೆ ನಿನ್ನ ಬಗ್ಗೆ ಹೆಮ್ಮೆ ಇಲ್ಲ, ನಿನ್ನ ಬಗ್ಗೆ ನಾಚಿಕೆ ಆಗುತ್ತಿದೆ ಎಂದೆ. ನಮ್ಮ ಇಬ್ಬರು ಹೆಣ್ಣ ಮಕ್ಕಳನ್ನು ಯಾಕೆ ಇಲ್ಲಿ ಸೇರಿಸಿಕೊಂಡಿದ್ದೀಯಾ, ವಾಪಸ್ ಕಳಿಸು ಎಂದೆ. ಅದಕ್ಕೆ ಆತ  ಬೇಕಿದ್ದರೆ ಕರೆದುಕೊಂಡು ಹೋಗಿ, ನನ್ನದ್ದೇನು ಅಭ್ಯಂತರ ಇಲ್ಲ ಎಂದ' ಎಂದರು. 

ಕೈಲಾಸಕ್ಕೆ ವಿಶ್ವಸಂಸ್ಥೆ ಮಾನ್ಯತೆ ಸಿಕ್ಕಿತೆಂದು ಕತೆ ಕಟ್ಟಿದ ನಿತ್ಯಾ! UN ಸಭೆಯಲ್ಲಿ ತನ್ನವರು ಭಾಗಿ ಎಂದು ಸುಳ್ಳು ಸುದ್ದಿ

ಅವರನ್ನ ಎಷ್ಟೇ ಕರೆದರೂ ಬರಲಿಲ್ಲ. ಅಲ್ಲೇ ಸಂತೋಷವಾಗಿ ಇರುವುದಾಗಿ ಹೇಳಿದರು. ಚೆನ್ನೈನಲ್ಲಿ ನನ್ನ ಅಳಿಯ, ರಂಜಿತಾ ಗಂಡ ಅವರ ಮನೆಯಲ್ಲೇ ಇರುವಂತೆ ಹೇಳಿದ ನಾನು ಇರಲಿಲ್ಲ. ಬಿಡದಿ ಆಶ್ರಮದಲ್ಲಿದ್ದಾಗ ಇಬ್ಬರೂ ಫೋನ್ ಮಾಡುತ್ತಿದ್ದರು. ದೇಶ ಬಿಟ್ಟು ಹೋದಮೇಲೆ ಫೋನ್ ಕೂಡ ಇಲ್ಲ. ನನ್ನ 3ನೇ ಮಗಳು ನನ್ನನ್ನು ನೋಡಿಕೊಳ್ಳುತ್ತಿದ್ದಾಳೆ' ಎಂದು ನಟ ಅಕೋಶ್ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದರು. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2026ರಲ್ಲಿ ಹಾಟ್ ಆಗಿರಬೇಕಾ, ಪ್ರೆಗ್ನೆಂಟ್ ಆಗಿಬಿಡಲೇ? ಸಲಹೆ ಕೇಳಿದ ನಟಿಗೆ ಭರ್ಜರಿ ಕಮೆಂಟ್
ಯೂಟ್ಯೂಬ್‌ನಲ್ಲಿರುವ ಟಾಕ್ಸಿಕ್ ಟೀಸರ್ ವಿರುದ್ಧ ಅಸಮಾಧಾನಕ್ಕೆ ಸೆನ್ಸರ್ ಬೋರ್ಡ್ ಮಹತ್ವದ ಹೇಳಿಕೆ