ಬಿಸಿಲಿನ ತಾಪಕ್ಕೆ ಪಬ್ಲಿಕ್ ಟ್ಯಾಪ್‌ನಲ್ಲಿ ಸ್ನಾನ ಮಾಡಿದ ಟೈಗರ್ ಸಿನಿಮಾ ನಟಿ ನೈರಾ ಬ್ಯಾನರ್ಜಿ!

Published : Feb 21, 2025, 08:44 PM ISTUpdated : Feb 21, 2025, 09:36 PM IST
ಬಿಸಿಲಿನ ತಾಪಕ್ಕೆ ಪಬ್ಲಿಕ್ ಟ್ಯಾಪ್‌ನಲ್ಲಿ ಸ್ನಾನ ಮಾಡಿದ ಟೈಗರ್ ಸಿನಿಮಾ ನಟಿ ನೈರಾ ಬ್ಯಾನರ್ಜಿ!

ಸಾರಾಂಶ

ನಟಿ ನೈರಾ ಬ್ಯಾನರ್ಜಿ ಗೋವಾದಲ್ಲಿ ಸಾರ್ವಜನಿಕ ಶವರ್‌ನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಹೆಚ್ಚುತ್ತಿರುವ ಬಿಸಿಲಿನ ತಾಪದ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬೆಂಗಳೂರು/ಗೋವಾ (ಫೆ.21): ಕನ್ನಡ ಚಿತ್ರರಂಗದಲ್ಲಿ ಸವಾರಿ-2 ಹಾಗೂ ಟೈಗರ್ ಸಿನಿಮಾದ ನಾಯಕಿ ನೈರಾ ಬ್ಯಾನರ್ಜಿ ಅವರು ಮೂಲ ಬಾಲಿವುಡ್ ನಾಯಕಿ ಆಗಿದ್ದಾರೆ. ಇದೀಗ ನಟಿ ಸ್ನೇಹಿತರ ಕಾರ್ಯಕ್ರಮವೊಂದಕ್ಕೆ ಗೋವಾಗೆ ತೆರಳಿದ್ದು, ಬಿಸಿಲಿನ ತಾಪವನ್ನು ತಾಳಲಾರದೇ ಸಾರ್ವಜನಿಕ ಸ್ಥಳದಲ್ಲಿದ್ದ ಶವರ್‌ನಲ್ಲಿ ನೀರು ಬಿಟ್ಟುಕೊಂಡು ಸಾರ್ವಜನಿಕವಾಗಿಯೇ ಸ್ನಾನ ಮಾಡಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.

ಈ ಬಗ್ಗೆ ಸಾರಾ ಮತ್ತು ಅರ್ಫೀನ್ ಖಾನ್ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು, ಗೋವಾಗೆ ಹೋಗಿರುವ ನಟಿ ನೈರಾ ಬ್ಯಾನರ್ಜಿ ತಮ್ಮ ಬಿಗ್ ಬಾಸ್ ಗ್ಯಾಂಗ್‌ನೊಂದಿಗೆ ಚಿಲ್ ಮಾಡುತ್ತಿದ್ದಾರೆ. ಈ ವೇಳೆ ಗೀವಾದ ಬಿಸಿಲಿನ ತಾಪವನ್ನು ತಾಳಲಾರದೇ ದೊಡ್ಡ ದೊಡ್ಡ ಹೋಟೆಲ್ ಮುಂದೆ ಅಳವಡಿಸಿದ ಶವರ್ ಕೆಳಗೆ ನಿಂತುಕೊಂಡು ನೀರನ್ನು ಬಿಟ್ಟುಕೊಂಡು ಮೈ ಒದ್ದೆ ಮಾಡಿಕೊಂಡಿದ್ದಾರೆ. ಗೋವಾದಲ್ಲಿ ಬೀಚ್‌ಗೆ ಹೋಗಿ ಬಂದವರು ಮರಳು ಮೆತ್ತಿಕೊಂಡಿದ್ದರೆ ಅದನ್ನು ತೊಳೆದುಕೊಂಡು ಹೋಟೆಲ್ ಒಳಗೆ ಹೋಗಬೇಕು.  ಆದರೆ, ಇಲ್ಲಿ ಬೀಚ್‌ಗೆ ಹೋಗದಿದ್ದರೂ ಸಾರ್ವಜನಿಕ ಸ್ಥಳದಲ್ಲಿದ್ದ ಶವರ್‌ನಲ್ಲಿ ನಟಿ ನೀರು ಬಿಟ್ಟುಕೊಂಡು ಸ್ನಾನ ಮಾಡಿದ್ದು, ಮೈ ತಂಪಾಗಿಸಿಕೊಂಡು ಖುಷಿ ಪಟ್ಟಿದ್ದಾರೆ. ಬೀಚ್‌ಗೆ ಹೋಗದಿದ್ದರೂ ಶವರ್ ಬಾತ್ ಮಾಡಿದ್ದೇನೆ ಎಂದು ಸ್ನೇಹಿತರಿಗೆ ಹೇಳಿಕೊಂಡಿದ್ದಾರೆ.

 

ಭಾರೀ ಬೇಸಿಗೆ ಮುನ್ಸೂಚನೆ ಕೊಟ್ಟ ಹವಾಮಾನ ಇಲಾಖೆ: ನಮ್ಮ ದೇಶದಲ್ಲಿ ಈ ಬಾರಿ ಅತ್ಯಂತ ಹೆಚ್ಚಿನ ಬಿಸಿಲಿನ ತಾಪ ಬರಲಿದೆ. ಅದರಲ್ಲಿಯೂ ದಕ್ಷಿಣ ಭಾರತದ ಗೋವಾ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಲ್ಲಿ ಅತಿಹೆಚ್ಚು ಬಿಸಿಲು ಬರಲಿದೆ. ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಉಂಟಾಗುತ್ತಿದ್ದ ಬಿಸಿಲಿನ ತಾಪಮಾನ ದಕ್ಷಿಣ ಭಾರತಕ್ಕೆ ಬರಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಈ ಮುನ್ಸೂಚನೆಯ ಬೆನ್ನಲ್ಲಿಯೇ ಕರ್ನಾಟಕ ರಾಜ್ಯ ಸೇರಿ ಬೆಂಗಳೂರಿನಲ್ಲಿ ಭಾರೀ ಬಿಸಿಲಿನ ವಾತಾವರಣ ಕಂಡುಬಂದಿದೆ.

ಇದನ್ನೂ ಓದಿ: ಪೂನಂ ಪಾಂಡೆಗೆ ಸೆಲ್ಫಿ ಕೇಳಿ ಕಿಸ್ ಕೊಡಲು ಮುಂದಾದ ಅಭಿಮಾನಿ; ಬೆಚ್ಚಿಬಿದ್ದ ನಟಿ!

ಬೆಂಗಳೂರಲ್ಲಿ 20 ವರ್ಷದ ತಾಪಮಾನ: ಸರ್ವಕಾಲಕ್ಕೂ ತಂಪಾದ ಸಮಶೀತೋಷ್ಣ ಹವಾಗುಣವನ್ನು ಹೊಂದಿರುವಂತಹ ಬೆಂಗಳೂರಿನಲ್ಲಿಯೇ ಇದೀಗ ಭಾರೀ ಬಿಸಿಲಿನ ತಾಪ ಹೆಚ್ಚಾಗಿದ್ದು, ಜನರು ಈಗಲೇ ಭಾರೀ ರೋಸಿ ಹೋಗುತ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ 30 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗಲಿದೆ ಎಂದು ತಿಳಿದುಬಂದಿದೆ. ಇದು ಕಳೆದ 20 ವರ್ಷಗಳ ನಂತರ ದಾಖಲಾಗುವ ಗರಿಷ್ಠ ತಾಪಮಾನ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಬೆಂಗಳೂರಿನ ಕೆರೆಯ ಒಡಲುಗಳು ಒಣಗುತ್ತಿದ್ದು, ಕೊಳೆಬಾವಿಯ ಅಂತರ್ಜಲ ಮೂಲಗಳು ಬತ್ತಿ ಹೋಗುತ್ತಿವೆ. ಇನ್ನು ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವ ಸಾಧ್ಯತೆಯೂ ಕಂಡುಬರುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!