
ಹೈದರಾಬಾದ್: ಕನ್ನಡ ಸೀರಿಯಲ್‌ಗಳಲ್ಲಿ ಪೋಷಕ ಪಾತ್ರಧಾರಿಯಾಗಿ ನಟಿಸುತ್ತಿದ್ದ ನಟಿ ಜ್ಯೋತಿ ರೈ ಪೂವರಾಜ್ ನಾಯಕಿಯಾಗಿ ಬೆಳ್ಳಿ ತೆರೆಗೆ ಎಂಟ್ರಿ ಕೊಡುತ್ತಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಪತಿ ಪೂವರಾಜ್ ನಿರ್ದೇಶನದ ಕಿಲ್ಲರ್ ಸಿನಿಮಾದಲ್ಲಿ ನಟಿಯಾಗಿ ಜ್ಯೋತಿ ರೈ ನಟಿಸುತ್ತಿದ್ದಾರೆ. ಕಿಲ್ಲರ್ ಚಿತ್ರದ ಗ್ಲಿಂಪ್ಸ್ ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಂಚಲನವನ್ನೇ ಸೃಷ್ಟಿಸುತ್ತಿದೆ. ಗ್ಲಿಂಪ್ಸ್ ನಲ್ಲಿಯೂ ಜ್ಯೋತಿ ರೈ ಮಾದಕತೆ ತುಂಬಿ ತುಳುಕುತ್ತಿದೆ. ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
33 ಸೆಕೆಂಡ್‌ನ ಈ ಗ್ಲಿಂಪ್ಸ್‌ನಲ್ಲಿ 22 ಸೆಕೆಂಡ್‌ನ ಜ್ಯೋತಿ ರೈ ನೋಡುಗರನ್ನು ಮಾಯಾವಿ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಕಿಲ್ಲರ್ ಸಿನಿಮಾದಲ್ಲಿ ಜ್ಯೋತಿ ರೈ ಜೊತೆ ನಾಯಕನಾಗಿ ವಿಶಾಲ್ ರಾಜ್ ನಟಿಸಿದ್ದಾರೆ. ಪೂವರಾಜ್ ಅವರೇ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸದ್ಯ ಸಿನಿಮಾದ ವಿಎಫ್‌ಎಕ್ಸ್ ಕೆಲಸಗಳು ನಡೆಯುತ್ತಿವೆ ಎಂದು ಜ್ಯೋತಿ ರೈ ಹೇಳಿಕೊಂಡಿದ್ದಾರೆ. ಹೊಸತನದ ಕೆಲಸವೊಂದು ಪವರ್‌ಫುಲ್ ಆಗಿ ಹೊರಬರಲಿದೆ ಎಂದು ಜ್ಯೋತಿ ರೈ ಪೋಸ್ಟ್ ಮಾಡಿಕೊಂಡಿದ್ದಾರೆ.
ನಟ ವಿಶಾಲ್ ರಾಜ್ ಜೊತೆ ಜ್ಯೋತಿ ರೈ ಅವರ ರೊಮ್ಯಾನ್ಸ್ ಸೀನ್‌ಗಳಿರುವ ಸುಳಿವನ್ನು ಕಿಲ್ಲರ್ ತಂಡ ನೀಡಿದೆ. ಇನ್ನುಳಿದಂತೆ 10 ಸೆಕೆಂಡ್‌ನಲ್ಲಿ ಕಿಲ್ಲರ್ ಚಿತ್ರದ ಪೋಸ್ಟರ್‌ಗಳನ್ನು ತೋರಿಸಲಾಗಿದೆ. ಗ್ಲಿಂಪ್ಸ್‌ನಲ್ಲಿ ಜ್ಯೋತಿ ರೈ ಮತ್ತು ವಿಶಾಲ್ ರಾಜ್ ಇಬ್ಬರು ಕಿಸ್ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಆದ್ರೆ ಕಿಸ್ ಮಾಡಲು ಮಾತ್ರ ಆಗಲ್ಲ. ಇದನ್ನು ನೋಡಿದ ಅಭಿಮಾನಿಗಳು, ಛೇ ಎಂಥ ಮೋಸ ಆಯ್ತು. ಬೇಗ ಕಿಸ್ ಮಾಡುವ ಮತ್ತೊಂದು ಗ್ಲಿಂಪ್ಸ್ ಬಿಡುಗಡೆ ಮಾಡಿ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
ಇಬ್ಬರ ಕೆಮಿಸ್ಟ್ರಿ ವರ್ಕೌಟ್ ಆಗಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಜ್ಯೋತಿ ರೈ ಆಕ್ಷನ್ ಸೀನ್‌ಗಳಲ್ಲಿಯೂ ನಟಿಸಿದ್ದಾರೆ. ಕೆಲ ದಿನಗಳ ಹಿಂದೆ ಸಾಹಸ ದೃಶ್ಯಗಳಲ್ಲಿ ಭಾಗಿಯಾಗಿರುವ ಝಲಕ್ ಹಂಚಿಕೊಂಡಿದ್ದರು. ಸಿನಿಮಾ ಆರಂಭದಲ್ಲಿ ವಿಶಾಲ್ ಜೊತೆಯಲ್ಲಿನ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಈ ಫೋಟೋಗಳು ಸಂಚಲನ ಸೃಷ್ಟಿಸಿದ್ದವು.
ನಟಿ ಜ್ಯೋತಿ ರೈ ಕನ್ನಡದಲ್ಲಿ ಸುಮಾರು 20ಕ್ಕು ಹೆಚ್ಚು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಮೂರುಗಂಟು, ಅನುರಾಗ ಸಂಗಮ, ಕನ್ಯಾದಾನ, ಕಸ್ತೂರಿ ನಿವಾಸ, ಗೆಜ್ಜೆ ಪೂಜೆ, ಕಿನ್ನರಿ ಧಾರಾವಾಹಿಗಳ ಮೂಲಕ ಜನಮನ ಸೆಳೆದಿದ್ದಾರೆ. ಕಿನ್ನರಿಯಲ್ಲಿನ ತಾಯಿ ಪಾತ್ರ ಜ್ಯೋತಿ ರೈ ದೊಡ್ಡಮಟ್ಟದ ಹೆಸರನ್ನು ತಂದುಕೊಟ್ಟಿತ್ತು. ಕನ್ನಡದಲ್ಲಿ ಬ್ಯುಸಿಯಾಗಿರುವಾಗಲೇ ತೆಲಗು ಕಿರುತೆರೆಯತ್ತ ಜ್ಯೋತಿ ರೈ ಮುಖ ಮಾಡಿದ್ದರು. ಇಲ್ಲಿನ ಧಾರಾವಾಹಿಗಳು ಜ್ಯೋತಿ ರೈಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು.
ಹಾಟ್ ಬ್ಯೂಟಿ ಅಂತ ಕರೆಸಿಕೊಳ್ಳುವ ಜ್ಯೋತಿ ರೈ, 'ನೋ ಮೋರ್ ಸೀಕ್ರೆಟ್ಸ್' ಎಂಬ ವೆಬ್ ಸೀರೀಸ್‌ನಲ್ಲಿ ನಟಿಸುತ್ತಿದ್ದು, ಕೃನಾಲ್ ಕಪೂರ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ನೋ ಮೋರ್ ಸೀಕ್ರೆಟ್ಸ್ ಸಿನಿಮಾವನ್ನು ವಿಜಯ್ ಕುಡಿಕುಳ ನಿರ್ದೇಶಿಸುತ್ತಿದ್ದು, ಪಾರ್ತಿರೆಡ್ಡಿ, ಜೀವನ್ ರೆಡ್ಡಿ ಮತ್ತು ಸಂಘಮಿತ್ರ ಜಂಟಿಯಾಗಿ ಈ ಸರಣಿಯನ್ನು ನಿರ್ಮಿಸುತ್ತಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.