ತರಕಾರಿ ವ್ಯಾಪಾರಕ್ಕಿಳಿದಿದ್ದ ಇಂಜಿನಿಯರ್‌ಗೆ  ಸೋನು ಸೂದ್‌ ಜಾಬ್ ಆಫರ್

Published : Jul 28, 2020, 04:45 PM ISTUpdated : Jul 28, 2020, 04:51 PM IST
ತರಕಾರಿ ವ್ಯಾಪಾರಕ್ಕಿಳಿದಿದ್ದ ಇಂಜಿನಿಯರ್‌ಗೆ  ಸೋನು ಸೂದ್‌ ಜಾಬ್ ಆಫರ್

ಸಾರಾಂಶ

ನಟ ಸೋನು ಸೂದ್‌ರಿಂದ ಮತ್ತೊಂದು ಮಾದರಿ ಕೆಲಸ, ಲಾಕ್ ಡೌನ್ ಸಂಕಷ್ಟದಲ್ಲಿದ್ದ ಇಂಜಿನಿಯರ್‌ಗೆ ಕೆಲಸ/ ಇಂಜಿನಿಯರ್‌ ಶಾರದಾಗೆ ನೆರವು/ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳಿಗೆ ಆಪದ್ಭಾಂಧವರಾಗಿದ್ದ ಸೋನು ಸೂದ್

ಹೈದರಾಬಾದ್(ಜು. 27)  ಕೊರೋನಾ ವೈರಸ್  ಎನ್ನುವುದು ಒಂದು ಕಡೆ ಆರೋಗ್ಯ ಸಮಸ್ಯೆ ತಂದಿಟ್ಟರೆ ಇನ್ನೊಂದು ಕಡೆ ಲಾಕ್ ಡೌನ್ ಪರಿಣಾಮ ಅದೆಷ್ಟೋ ಜನ ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ್ದ ಹೈದರಾಬಾದ್  ಇಂಜಿನಿಯರ್ ಒಬ್ಬರು ತರಕಾರಿ ವ್ಯಾಪಾರಕ್ಕೆ ಇಳಿದಿದ್ದರು. ಈ ಸುದ್ದಿ ವೈರಲ್ ಆಗಿತ್ತು.

ವಲಸೆ ಕಾರ್ಮಿಕರಿಗೆ, ರೈತರಿಗೆ ನೆರವು ನೀಡಿಕೊಂಡು ಬಂದಿದ್ದ ಸೋನು ಸೂದ್ ಇಲ್ಲಿಯೂ ತಮ್ಮ ಮಾದರಿ ಗುಣ ಪ್ರದರ್ಶನ ಮಾಡಿದ್ದಾರೆ. ಕೆಲಸ ಕಳೆದುಕೊಂಡಿದ್ದ ಶಾರದಾಗೆ ಸೋನು ಸೂದ್ ಕೆಲಸ ನೀಡಿದ್ದಾರೆ.

ನನ್ನ ಅಧಿಕಾರಿ ಶಾರದಾ ಅವರನ್ನು ಭೇಟಿ ಮಾಡಿದ್ದು ಸಂದರ್ಶನ ಮುಗಿದಿದೆ. ಆಕೆಗೆ ಜಾಬ್ ಲೆಟರ್ ನೀಡಲಾಗಿದೆ ಎಂದು ಸೋಶಿಯಲ್ ಮೀಡಿಯಾ  ಮೂಲಕ ನಟ ತಿಳಿಸಿದ್ದಾರೆ.

ಹೊಟ್ಟೆ ಪಾಡಿಗಾಗಿ ಅಮಿರ್ ಜತೆ ನಟಿಸಿದ್ದ ನಟನ ತರಕಾರಿ ವ್ಯಾಪಾರ

ಶಾರದಾ ಅವರ ತಂದೆ ಸಹ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸಿಕೊಂಡು ಬಂದವರು. ಧೈರ್ಯದ ಹುಡುಗಿ ತರಕಾರಿ ವ್ಯಾಪಾರವನ್ನು ಮುಂದುವರಿಸಿದ್ದಾರೆ. ಹೈದರಾಬಾದ್ ನ ಶ್ರೀ ನಗರ್ ಕಾಲೋನಿಯಲ್ಲಿ ತರಕಾರಿ ವ್ಯಾಪಾರ  ಮುಂದುವರಿಸಿದ್ದರು. ನಾವು ಒಂದೇ ದಾರಿಯಲ್ಲಿ ಜೀವನ ನೋಡಬಾರದು.  ಇದರಲ್ಲಿ ಪಶ್ಚಾತಾಪ ಪಡುವಂಥದ್ದು ಏನು ಇಲ್ಲ. ಹೊಸ ಅವಕಾಶ ತೆರೆದುಕೊಳ್ಳುತ್ತದೆ ಎಂದು  ಶಾರದಾ ಹೇಳಿದ್ದು ಈಗ ನಿಜವಾಗಿದೆ.

ಸಿನಿಮಾ ನಟರು, ಕಿರುತೆರೆ ನಟರು ಬಾಡಿಗೆ ಕಟ್ಟಲಾರದೆ ಮನೆಯಿಂದ ಹೊರಬಿದ್ದ ನಿದರ್ಶನಗಳು ಇವೆ. ಅಮಿರ್ ಖಾನ್ ಜತೆ  ತೆರೆ ಹಂಚಿಕೊಂಡಿದ್ದ ನಟ ಅನಿವಾರ್ಯವಾಗಿ ತರಕಾರಿ ಮಾರಾಟಕ್ಕೆ ಇಳಿದಿದ್ದು ಸುದ್ದಿಯಾಗಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?