ಕಣ್ಣಿನ ದೃಷ್ಟಿ ಕಳಕೊಂಡಿರೋ ರಾಣಾ ದಗ್ಗುಬಾಟಿ: ಕಿಡ್ನಿಯೂ ಅಮ್ಮನಿಂದ ದಾನ- ಬಾಹುಬಲಿ ನಟರ ಸ್ಟೋರಿ ಕೇಳಿ...

Published : Feb 16, 2025, 06:02 PM ISTUpdated : Feb 16, 2025, 06:23 PM IST
ಕಣ್ಣಿನ ದೃಷ್ಟಿ ಕಳಕೊಂಡಿರೋ ರಾಣಾ ದಗ್ಗುಬಾಟಿ: ಕಿಡ್ನಿಯೂ ಅಮ್ಮನಿಂದ ದಾನ- ಬಾಹುಬಲಿ ನಟರ ಸ್ಟೋರಿ ಕೇಳಿ...

ಸಾರಾಂಶ

ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಬಹುಭಾಷಾ ನಟ, ನಿರೂಪಕರೂ ಹೌದು. ತಾಯಿಯಿಂದ ಕಿಡ್ನಿ ಪಡೆದಿದ್ದು, ಬಲಗಣ್ಣು ಕಾಣದಿರುವುದು ಇತ್ತೀಚೆಗೆ ಬಹಿರಂಗವಾಗಿದೆ. ದಾನಿಯಿಂದ ಪಡೆದ ಕಣ್ಣಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗದಿದ್ದರೂ, ಆತ್ಮವಿಶ್ವಾಸದಿಂದ ಮುನ್ನಡೆಯುವಂತೆ ರಾಣಾ ಸಂದೇಶ ನೀಡಿದ್ದಾರೆ. ಹೋಟೆಲ್ ನೆಲಸಮ ಪ್ರಕರಣದಲ್ಲಿ ಕಾನೂನು ಸಮರ ಎದುರಿಸುತ್ತಿದ್ದಾರೆ.

ಟಾಲಿವುಡ್​ ನಾಯಕ ರಾಣಾ ದಗ್ಗುಬಾಟಿ ಎಂದಾಕ್ಷಣ ಸಿನಿ ಪ್ರಿಯರಿಗೆ ಬಾಹುಬಲಿ ಸಿನಿಮಾ ನೆನಪಿಗೆ ಬರುತ್ತದೆ. ಈ ಸಿನಿಮಾದಲ್ಲಿ ದೇವನ ಪಾತ್ರದ ಮೂಲಕ ಜನಮನ ಗೆದ್ದಿದ್ದಾರೆ ನಟಿ ರಾಣಾ ದಗ್ಗುಬಾಟಿ. ಈಚೆಗಷ್ಟೇ ಹೋಟೆಲ್​ ನೆಲಸಮ ಪ್ರಕರಣದಲ್ಲಿ ಕಾನೂನು ಸಮರವನ್ನು ಎದುರಿಸುತ್ತಿದ್ದಾರೆ ನಟ. ಇವರ ಬಗ್ಗೆ ಒಂದು ಇಂಟರೆಸ್ಟಿಂಗ್​ ವಿಷ್ಯ ಏನೆಂದರೆ, ಇವರು ಎಲ್ಲಾ ಚಿತ್ರರಂಗಗಳಲ್ಲಿಯೂ ಸೈ ಎನಿಸಿಕೊಂಡವರು.  ‘ದಿ ರಾಣಾ ದಗ್ಗುಬಾಟಿ ಶೋ’ನ ನಡೆಸಿಕೊಡುತ್ತಿದ್ದು, ಅದರಲ್ಲಿ ಎಲ್ಲಾ ಭಾಷೆಯ ತಾರೆಯರನ್ನು ಕರೆತರುತ್ತಿದ್ದಾರೆ. ಅವರು ಉಪೇಂದ್ರ ಅವರು ‘ಯುಐ’ ಚಿತ್ರಕ್ಕಾಗಿ ಒಂದು ಪ್ರಮೋಷನಲ್ ವಿಡಿಯೋ ಕೂಡ ಮಾಡಿದ್ದರು. ಉಪೇಂದ್ರ ಜೊತೆ ಒಂದಷ್ಟು ಚರ್ಚೆಗಳನ್ನು ನಡೆಸಿದ್ದರು. ಒಟ್ಟಿನಲ್ಲಿ ಇವರನ್ನು ಓರ್ವ ಪರಿಪೂರ್ಣ ನಟ ಎಂದೇ ಗುರುತಿಸಲಾಗುತ್ತದೆ.  ನಟ ಈಗಾಗಲೇ ಹಲವಾರು ಬ್ಲಾಕ್​ಬಸ್ಟರ್​ ಸಿನಿಮಾಗಳನ್ನು ಕೊಟ್ಟಿದ್ದಾರೆ. 

ಇವರ ಕುರಿತು ಇದೀಗ ಇಂಟರೆಸ್ಟಿಂಗ್​ ವಿಷಯಗಳು ಹೊರಬಂದಿವೆ. ಅದೇನೆಂದರೆ, ನಟನಿಗೆ ಹಿಂದೊಮ್ಮೆ ಅವರ ತಾಯಿಯೇ ಕಿಡ್ನಿ ದಾನ ಮಾಡಿದರು ಎನ್ನುವ ವಿಷಯವಿದು. ಅಷ್ಟೇ ಅಲ್ಲದೇ, ನಟನಿಗೆ ಬಲಗಣ್ಣು ಕಾಣಿಸುವುದಿಲ್ಲ ಎನ್ನುವ ಶಾಕಿಂಗ್​ ಸತ್ಯ ಕೂಡ.  ಕೆಲ ವರ್ಷಗಳ ಹಿಂದೆ  ರಾಣಾ ಅವರು ಕಿಡ್ನಿ ಖಾಯಿಲೆಗೆ  ಅಮೆರಿಕಕ್ಕೆ ತೆರಳಿದ್ದರು.  ಮೂಲಗಳ ಪ್ರಕಾರ ರಾಣಾ ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು.  ಅವರು ಮುಂಬೈ ಮತ್ತು ಹೈದರಾಬಾದ್‌ನಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಸಫಲ ಆಗದ ಹಿನ್ನೆಲೆಯಲ್ಲಿ, ಅವರು ಅಮೆರಿಕಕ್ಕೆ ಚಿಕಿತ್ಸೆಗೆ ತೆರಳಿದ್ದರು. ಆ ಸಂದರ್ಭದಲ್ಲಿ,  ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆಯಾಗಿರಲಿಲ್ಲ. ಕಿಡ್ನಿಯ ಅವಶ್ಯಕತೆ ಇತ್ತು. ಆಗ  ಮೂತ್ರಪಿಂಡಶಾಸ್ತ್ರಜ್ಞರು ಅವರಿಗೆ ಚಿಕಿತ್ಸೆ ಮಾಡಲು ಬಯಸಿದಾಗ,  ಮೂತ್ರಪಿಂಡ ಕಸಿ ಮಾಡಬೇಕು ಎಂದು ಯೋಚಿಸಿದಾಗ ತಾಯಿಯವರೇ  ಕಿಡ್ನಿ ದಾನ ಮಾಡಲು ನಿರ್ಧರಿಸಿರುವುದಾಗಿ ಹೇಳಲಾಗುತ್ತಿದೆ.

 

ಜೈಲುಪಾಲಾಗ್ತಿದ್ದಂತೆಯೇ ಕೈಕೊಟ್ಟ ಲವರ್​ 'ರಕ್ಕಮ್ಮ'ಗೆ ಖಾಸಗಿ ಜೆಟ್​ ಗಿಫ್ಟ್​! ಮತ್ತೆ ತೆಕ್ಕೆಗೆ ಬೀಳ್ತಾಳಾ ನಟಿ ಜಾಕ್ವೆಲಿನ್​?

 ಅದೇ ಇನ್ನೊಂದೆಡೆ, ರಾಣಾ ದಗ್ಗು ಬಾಟಿ ಅವರಿಗೆ ಸಂಬಂಧ ಪಟ್ಟ ಆಸಕ್ತಿ ದಾಯಕ ವಿಷಯವೊಂದು ತಿಳಿದುಬಂದಿದೆ. ಅದೇನೆಂದರೆ ಅವರಿಗೆ ಬಲಗಣ್ಣು ಸರಿಯಾಗಿ ಕಾಣಿಸುವುದಿಲ್ಲ ಎನ್ನುವುದು.  ‘ಬಾಹುಬಲಿ 2’ ಚಿತ್ರದ ಸಮಯದಲ್ಲಿಯೇ ಈ ವಿಷಯ ಸಾಕಷ್ಟು ಓಡಾಡುತ್ತಿದ್ದರೂ ಇದೀಗ ಮತ್ತೆ ಇದು ಮುನ್ನೆಲೆಗೆ ಬಂದಿದೆ.  ಸಂದರ್ಶನವೊಂದರಲ್ಲಿ ರಾಣಾ ಹೇಳಿದ್ದ ಈ ವಿಡಿಯೋ ಮತ್ತೆ ವೈರಲ್​ ಆಗುತ್ತಿದೆ. ನನ್ನ ಒಂದು ಕಣ್ಣಿಗೆ ಮಾತ್ರ ದೃಷ್ಟಿ ಇದೆ. ಬಾಲ್ಯದಿಂದಲೇ ನನ್ನ ಬಲಗಣ್ಣಿಗೆ ದೃಷ್ಟಿಯಿಲ್ಲ. ಯಾರೋ ಒಬ್ಬರು ಅವರ ಮರಣಾನಂತರ ನನಗೆ ನೇತ್ರದಾನ ಮಾಡಿದ್ದರು. ನಾನು ಚಿಕ್ಕವನಿದ್ದಾಗ ಶಸ್ತ್ರ ಚಿಕಿತ್ಸೆ ನೆರವೇರಿಸಿದರು, ಆದರೂ ಎರಡು ಕಣ್ಣಿನ ದೃಷ್ಟಿ ಸಿಗಲಿಲ್ಲ, ನನ್ನ ಎಡಗಣ್ಣು ಮುಚ್ಚಿದರೆ ನನಗೇನು ಕಾಣಿಸುವುದಿಲ್ಲ ಎಂದು ಈ ವಿಡಿಯೋದಲ್ಲಿ ಹೇಳಿದ್ದಾರೆ.

ಇದೇ ವಿಡಿಯೋದಲ್ಲಿ ನಟ, ''ನಮ್ಮಲ್ಲಿ ಹಲವರಿಗೆ ಅಂಗವೈಕಲ್ಯ ಇರುತ್ತದೆ. ಆದರೆ ಆ ಸಮಸ್ಯೆಯಿಂದ ಕುಗ್ಗಿ ಹೋಗಬಾರದು. ಅದನ್ನು ಮೀರಿ ಬೆಳೆಯಬೇಕು. ಆತ್ಮವಿಶ್ವಾಸವೊಂದಿದ್ದರೆ ಯಾವುದೇ ಸಮಸ್ಯೆಯನ್ನು ಎದುರಿಸಬಹುದು. ಅಂಧರಾದ ಮಕ್ಕಳಿಗೆ ಅವರ ಹೆತ್ತವರು ಪ್ರೇರಣೆಯಾಗಬೇಕು. ನನ್ನ ಒಂದು ಕಣ್ಣಿಗೆ ದೃಷ್ಟಿ ಇಲ್ಲದೇ ಇರುವುದು ನನ್ನನ್ನು ತುಂಬಾ ಕಾಡಿತ್ತು. ಆದರೆ ನನ್ನ ತಂದೆ-ತಾಯಿ ನನ್ನ ಗೆಲುವಿಗೆ ಸ್ಫೂರ್ತಿ ತುಂಬಿದರು ಎಂದು ಹೇಳಿದ್ದಾರೆ. ಅಂಗವೈಕಲ್ಯಕ್ಕೆ ಕುಗ್ಗಬಾರದು, ಅದನ್ನು ಮೀರಿ ಬೆಳೆಯಬೇಕು, ಇದಕ್ಕೆ ಅವರ ತಂದೆ ತಾಯಿಗಳು ಪ್ರೇರಣೆಯಾಗಬೇಕು ಎಂದಿದ್ದಾರೆ. 

ಪತಿಯ ಫೋಟೋ ನೋಡನೋಡುತ್ತಲೇ ಬೆಚ್ಚಿ ಬಿದ್ದ ಶಿಲ್ಪಾ ಶೆಟ್ಟಿ! ಎಲ್ಲಾ ನೀಲಿ ಚಿತ್ರದ ಮಹಿಮೆ ಎನ್ನೋದಾ ನೆಟ್ಟಿಗರು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?