
ನಟ ಜಯಂ ರವಿ ಪತ್ನಿ ಆರ್ತಿ ರವಿ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ಒಂದು ಸ್ಟೋರಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 'ಬೇರೆಯವ್ರು ನಿಮ್ಮದೇ ಬಣ್ಣದ ಡ್ರೆಸ್ ಹಾಕಿದ್ರೆ ಹೇಗಿರುತ್ತೆ?' ಅಂತ ಪ್ರಶ್ನಿಸಿದ್ದಾರೆ. ಇದು ಪತಿ ಜಯಂ ರವಿಗೆ ಕೊಟ್ಟ ಪರೋಕ್ಷ ಟಾಂಗ್ ಅಂತ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.
ಜಯಂ ರವಿ ಜೊತೆಗಿನ ವಿಚ್ಛೇದನದ ಘೋಷಣೆಯ ನಂತರ, ಆರ್ತಿ ರವಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಪ್ರತಿಯೊಂದು ಪೋಸ್ಟ್ ಕೂಡ ದೊಡ್ಡ ಚರ್ಚೆಗೆ ಕಾರಣವಾಗುತ್ತಿದೆ. ಈಗ ಅವರು ಪೋಸ್ಟ್ ಮಾಡಿರುವ 'ಒಂದೇ ಬಣ್ಣದ ಡ್ರೆಸ್' ಕುರಿತ ಇನ್‌ಸ್ಟಾಗ್ರಾಮ್ ಸ್ಟೋರಿ, ಯಾರಿಗೋ ಕೊಟ್ಟ ಉತ್ತರ ಎಂಬಂತೆ ಇದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಆರ್ತಿ ರವಿ ತಮ್ಮ ಸ್ಟೋರಿಯಲ್ಲಿ, ಬಟ್ಟೆ ಮತ್ತು ಬಣ್ಣದ (Color Matching) ಬಗ್ಗೆ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ, 'ನೀವು ಒಂದು ಕಡೆಗೆ ಹೋದಾಗ, ಅಲ್ಲಿ ಬೇರೊಬ್ಬರು ನಿಮ್ಮಂತೆಯೇ ಅದೇ ಬಣ್ಣದ (Same Color) ಬಟ್ಟೆ ಧರಿಸಿದ್ದರೆ ಸುಮ್ಮನಿರುತ್ತೀರಾ? ನಿಮಗೆ ಹೇಗನಿಸುತ್ತದೆ?' ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.
ತಮಿಳು ಚಿತ್ರರಂಗದಲ್ಲಿ ನಟ ರವಿ ಮೋಹನ್ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ 'ಜಯಂ ರವಿ' ಎಂಬ ತಮ್ಮ ಹೆಸರನ್ನು 'ರವಿ ಮೋಹನ್' ಎಂದು ಬದಲಿಸಿಕೊಂಡಿದ್ದರು. ಹಲವು ಹಿಟ್ ಚಿತ್ರಗಳನ್ನು ನೀಡಿರುವ ಇವರು, ಕಳೆದ ಕೆಲವು ತಿಂಗಳುಗಳಿಂದ ಪತ್ನಿ ಆರ್ತಿ ರವಿಯಿಂದ ವಿಚ್ಛೇದನ ಪಡೆದು ಮಕ್ಕಳಿಂದ ದೂರವಿದ್ದಾರೆ. ಇವರ ವಿಚ್ಛೇದನ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಈ ಸಮಯದಲ್ಲಿ ಇಬ್ಬರ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ಸದಾ ಗಮನ ಸೆಳೆಯುತ್ತಿವೆ.
ಈ ಸ್ಟೋರಿ ನೋಡಿದ ಅಭಿಮಾನಿಗಳು, ಇದು ಕೇವಲ ಬಟ್ಟೆಯ ಬಗ್ಗೆ ಅಲ್ಲ, ಇದರ ಹಿಂದೆ ಬೇರೆನೋ ಅರ್ಥವಿದೆ ಎಂದು ಭಾವಿಸುತ್ತಿದ್ದಾರೆ. ಇತ್ತೀಚೆಗೆ ಜಯಂ ರವಿ ನಿರ್ದಿಷ್ಟ ನಟಿಯೊಂದಿಗೆ ಒಂದೇ ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದ ಫೋಟೋಗಳು ವೈರಲ್ ಆಗಿದ್ದವು. ಆರ್ತಿ ಪರೋಕ್ಷವಾಗಿ ಅವರಿಗೇ ಟಾಂಗ್ ನೀಡುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್‌ಗಳು ಹರಿದಾಡುತ್ತಿವೆ.
ವಿಚ್ಛೇದನ ವಿವಾದಗಳ ನಂತರ, ಆರ್ತಿ ರವಿ ತಮ್ಮ ಮಕ್ಕಳೊಂದಿಗೆ ಸಮಯ ಕಳೆಯುತ್ತಾ, ತಮ್ಮ ಫ್ಯಾಷನ್ ಮತ್ತು ಬ್ಯುಸಿನೆಸ್ ಮೇಲೆ ಗಮನ ಹರಿಸುತ್ತಿದ್ದಾರೆ. ಅವರು ಆಗಾಗ ಹಂಚಿಕೊಳ್ಳುವ ಇಂತಹ 'ಕ್ರಿಪ್ಟಿಕ್' (Cryptic) ಪೋಸ್ಟ್‌ಗಳು, ಜಯಂ ರವಿ ಕಡೆಯವರಿಗೆ ಅವರು ಇಡುತ್ತಿರುವ ಚೆಕ್ ಎಂದು ನೋಡಲಾಗುತ್ತಿದೆ.
ರವಿ ಮೋಹನ್ ಮತ್ತು ಆರ್ತಿ ಪ್ರೀತಿಸಿ ಮದುವೆಯಾದವರು. ಆರ್ತಿ, ಚಲನಚಿತ್ರ ನಿರ್ಮಾಪಕಿ ಸುಜಾತಾ ವಿಜಯಕುಮಾರ್ ಅವರ ಮಗಳು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.