Muslims Traders Boycott: ಮಲೆನಾಡಿನಲ್ಲೂ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ ಒತ್ತಾಯ

Published : Mar 23, 2022, 05:41 PM ISTUpdated : Mar 23, 2022, 05:49 PM IST
Muslims Traders Boycott: ಮಲೆನಾಡಿನಲ್ಲೂ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ ಒತ್ತಾಯ

ಸಾರಾಂಶ

ಚಿಕ್ಕಮಗಳೂರು ಜಾತ್ರೆ ,ದೇವಸ್ಥಾನಗಳಿಗೆ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡದಂತೆ ಮನವಿ ಸ್ಥಳೀಯರಿಂದಲೇ ಗ್ರಾಮ ಪಂಚಾಯಿತಿಗೆ ಮನವಿ ಚಿತ್ರವಳ್ಳಿ ಜಾತ್ರೆಯಲ್ಲಿ‌ ನಿಷೇಧಿಸುವಂತೆ ಒತ್ತಾಯ   

ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು(ಮಾ.23): ಕೆಲ ದಿನಗಳ ಹಿಂದಷ್ಟೇ ರಾಜ್ಯಾದ್ಯಂತ ಆರಂಭವಾದ ಮುಸಲ್ಮಾನರೊಂದಿಗಿನ ವ್ಯಾಪಾರ ವಹಿವಾಟುಗಳ ನಿಷೇಧದ ಕುರಿತ ಹೋರಾಟದ ಅಭಿಯಾನ ಮಲೆನಾಡಿನಲ್ಲೂ ಆರಂಭವಾಗಿದೆ. ರಾಜ್ಯದಲ್ಲಿ ಮುಸಲ್ಮಾನರು ಹಿಜಾಬ್ (Hijab) ತೀರ್ಪನ್ನು ವಿರೋಧಿಸಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟಿಸುವ ಮೂಲಕ ಸಂವಿಧಾನವನ್ನು ವಿರೋಧಿಸಿದ್ದಾರೆ. ಈ ನಿಟ್ಟಿನಲ್ಲಿ ಹಿಂದೂ ಸಂಪ್ರದಾಯ, ಆಚರಣೆಗಳಂತೆ ನಡೆಯುವ ಜಾತ್ರೆಯಲ್ಲಿ ಅಂಗಡಿ ಮಳಿಗೆಗೆ ಅವಕಾಶ ನೀಡಬಾರದೆಂದು ಸ್ಥಳೀಯರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸುವ ಮೂಲಕ ಮಲೆನಾಡಿನಲ್ಲೂ ಹೋರಾಟದ ಅಭಿಯಾನಕ್ಕೆ ಬೆಂಬಲ ವ್ಯಕ್ತವಾಗಿದೆ.

ಚಿತ್ರವಳ್ಳಿ ಜಾತ್ರೆಯಲ್ಲಿ‌ ನಿಷೇಧಿಸುವಂತೆ ಒತ್ತಾಯ:
ಚಿಕ್ಕಮಗಳೂರು (Chikkamagaluru) ಜಿಲ್ಲೆ ಶೃಂಗೇರಿ (Sringeri) ತಾಲೂಕಿನ ಅಡ್ಡಗದ್ದೆ ಗ್ರಾಮ ಪಂಚಾಯಿತಿಯ  ಅಧ್ಯಕ್ಷರಿಗೆ ಚಿತ್ರವಳ್ಳಿ ಶ್ರೀ ವನ ದುರ್ಗಾ ಪರಮೇಶ್ವರಿ ಜಾತ್ರಾ ಮಹೋತ್ಸವದಲ್ಲಿ (Chitravalli Shri Vanna Durgaparameshwari festival ) ಮುಸಲ್ಮಾನರಿಗೆ (Muslims) ಅಂಗಡಿ, ಮುಂಗಟ್ಟುಗಳಿಗೆ ಅವಕಾಶ ನೀಡಬಾರದೆಂದು ಅಡ್ಡಗದ್ದೆ ಗ್ರಾಮಸ್ಥರು ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಿದ್ದಾರೆ.

MUSLIMS TRADERS BOYCOTT: ಕರಾವಳಿಯಿಂದ ಶಿವಮೊಗ್ಗಕ್ಕೂ ಹಬ್ಬಿತು ನಿರ್ಬಂಧದ ಕಿಚ್ಚು

ಇನ್ನು ಜಾತ್ರೆಯಲ್ಲಿ ಹಿಂದೂ ಕುಟುಂಬಗಳು ಹರಿಕೆ ಕಾಣಿಕೆ ರೂಪದಲ್ಲಿ ಸೇವೆಸಲ್ಲಿಸುತ್ತಾ ಸಹಕಾರ ನೀಡುತ್ತಾರೆ, ಆದರೆ ಬೇರೆಡೆಗಳಿಂದ ಆಗಮಿಸುವ ಅನ್ಯಮತೀಯರು ಕಳ್ಳತನ ಸೇರಿದಂತೆ ಇನ್ನಿತರ ದುಷ್ಕೃತ್ಯಗಳಲ್ಲಿ ಭಾಗಿಯಾಗಿ ಕೆಡುಕುಂಟು ಮಾಡುತ್ತಾರೆ ಈ ಕಾರಣಕ್ಕಾಗಿ ಅವರಿಗೆ ಅವಕಾಶ ನೀಡಬಾರದು ಎಂದು ಅಡ್ಡಗದ್ದೆ ಸ್ಥಳೀಯರು ಆರೋಪಿಸಿದ್ದಾರೆ.

ಮೊನ್ನೆಯಷ್ಟೇ ಹೈಕೋರ್ಟ್ ನೀಡಿದ ಹಿಜಾಬ್ ಕುರಿತಾದ ತೀರ್ಪನ್ನು ವಿರೋಧಿಸಿ ಸಂವಿಧಾನ ವಿರೋಧಿ ಚಟುವಟಿಕೆ ನಡೆಸಿರುತ್ತಾರೆ ಹಾಗೂ ಈ ನೆಲದ ಕಾನೂನನ್ನು ವಿರೋಧಿಸಿರುತ್ತಾರೆ ಆದ ಕಾರಣ ಯಾವುದೇ ಕಾರಣಕ್ಕೂ ಅನ್ಯಮತೀಯರಿಗೆ ಚಿತ್ರವಳ್ಳಿ ಜಾತ್ರೆಯಲ್ಲಿ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಬಾರದೆಂದು ಸ್ಥಳೀಯರು ಗ್ರಾಮ ಪಂಚಾಯಿತಿಗೆ ಒತ್ತಾಯಿಸಿದ್ದಾರೆ.

Kapu Marigudi Jatra: ಕಳಚಿದ ಸೌಹಾರ್ದತೆಯ ಕೊಂಡಿ, 2ನೇ ದಿನವು ಮುಸ್ಲಿಂ ವ್ಯಾಪಾರಿಗಳಿಗೆ

PREV
Read more Articles on
click me!

Recommended Stories

ಅಯ್ಯಪ್ಪ ಮಾಲೆ ಧರಿಸಿ ಬಂದ ವಿದ್ಯಾರ್ಥಿ ಕೆನ್ನೆಗೆ ಬಾರಿಸಿದ ಸೆಂಟ್ ಜೋಸೆಫ್ ಶಾಲೆ ಪ್ರಿನ್ಸಿಪಾಲ್!
ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು