ಚಿಕ್ಕಮಗಳೂರಿನ ಭದ್ರಾ ಸಂರಕ್ಷಿತಾ ಅಭಯಾರಣ್ಯದ ತಣಿಗೆಬೈಲು ಪ್ರದೇಶದಲ್ಲಿ ಕಾಡಾನೆಗಳಿಗೆ ಕಿಡಿಗೇಡಿಗಳು ಜೆಸಿಬಿ ಯಂತ್ರದ ಮೂಲಕ ತೊಂದರೆ ಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮಾ.22) : ದೇಶದ ಅಭಯಾರಣ್ಯಗಳಲ್ಲಿ ಪ್ರಮುಖವಾದುದು ಭದ್ರಾ ಹುಲಿ ಸಂರಕ್ಷಿತಾರಣ್ಯ ಪ್ರದೇಶ (Bhadra tiger reserve forest). ಇಲ್ಲಿ ಅರಣ್ಯೇತರ ಚಟುವಟಿಕೆಗಳು ನಿಷೇಧ. ಅಭಯಾರಣ್ಯದ ಒಳಗೆ ಪ್ರವೇಶ ಮಾಡಲು ಅನುಮತಿ ಕಡ್ಡಾಯ ಜೊತೆಗೆ ಅರಣ್ಯೇತರ ಚಟುವಟಿಕೆ ನಡೆಸಲು ಹಲವು ನಿಯಮಗಳು ಜಾರಿಯಲ್ಲಿದೆ. ಕಾನೂನು ,ನಿಯಮಗಗಳು ಜಾರಿಯಲ್ಲಿ ಇದ್ದರೂ ವನ್ಯ ಜೀವಿಗಳಿಗೆ ತೊಂದರೆ ಕೊಡುವ ಕೆಲಸ ನಡೆಯುತ್ತಲೇ ಇದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯದಲ್ಲಿ (Bhadra Wildlife Sanctuary) ನಡೆದಿರುವ ಘಟನೆ ಪರಿಸರವಾದಿಗಳು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.
undefined
ಜೆಸಿಬಿಯಿಂದ ಕಾಡಾನೆ ಜೊತೆ ಚೆಲ್ಲಾಟ : ಇತ್ತೀಚೆಗೆ ಕಾಡಿನಿಂದ ನಾಡಿನತ್ತ ವನ್ಯಜೀವಿಗಳು ಮುಖ ಮಾಡುತ್ತೇವೆ. ನೆಮ್ಮದಿಯಾಗಿ ಸ್ವಚ್ಛಂದವಾಗಿ ಓಡಾಟ ನಡೆಸುವ ವನ್ಯಜೀವಿಗಳ ಆವಾಸಸ್ಥಾನವಾಗಿರುವ ಅಭಯಾರಣ್ಯದಲ್ಲಿ ಕಿಡಿಗೇಡಿಗಳು ವಿಕೃತವಾಗಿ ಕಾಡು ಪ್ರಾಣಿಗಳಿಗೆ ಕಿರುಕೇಳು ನೀಡಿದ್ದಾರೆ. ಚಿಕ್ಕಮಗಳೂರಿನ ಭದ್ರಾ ಸಂರಕ್ಷಿತಾ ಅಭಯಾರಣ್ಯದ ತಣಿಗೆಬೈಲು ಪ್ರದೇಶದಲ್ಲಿ ಕಾಡಾನೆಗಳಿಗೆ (Wild Elephant ) ಜೆಸಿಬಿ (JCB) ಯಂತ್ರದ ಮೂಲಕ ತೊಂದರೆ ಕೊಟ್ಟಿದ್ದಾರೆ. ಕಿಡಿಗೇಡಿಗಳು ತೊಂದರೆ ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಕಾಡಾನೆಗಳು ಸ್ವಚ್ಛಂದ ಓಡಾಟ ನಡೆಸುತ್ತಿರುವ ವೇಳೆಯಲ್ಲಿ ಜೆಸಿಬಿಯಂತ್ರ ರಸ್ತೆಗೆ ಅಡ್ಡವಾಗಿ ಬಂದಿದೆ. ಆ ಜೆಸಿಬಿ ಯಂತ್ರದ ಚಾಲಕ ಕಾಡಾನೆಗಳ ಹಿಂಡು ನೋಡಿ ಹಿಂದೆ ಹೋಗುವುದನ್ನು ಬಿಟ್ಟು ಅವುಗಳನ್ನು ಎದುರಿಸುವ ಪ್ರಯತ್ನ ಮಾಡಿದ್ದಾನೆ. ಪುಟ್ಟ ಮರಿಯೊಂದಿಗೆ ಕಾಡಾನೆ ಮುಂದಕ್ಕೆ ಹೋಗುವ ಪ್ರಯತ್ನ ನಡೆಯುತ್ತದೆ, ಆದ್ರೆ ಜೆಸಿಬಿ ಯಂತ್ರ ಶಬ್ದದಿಂದ ಅದು ಹಿಂದಕ್ಕೆ ಹೋಗುತ್ತೆ, ಇದನ್ನು ವಿಡಿಯೋ ಮಾಡಿಕೊಂಡಿರುವ ಕಿಡಿಗೇಡಿಗಳು ವಿಕೃತ ಸಂತೋಷ ಪಟ್ಟಿರುವುದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.
Bhima River Bank Murder Case ನ್ಯಾಯಾಲಯಕ್ಕೆ ಹಾಜರಾದ ಪ್ರಮುಖ ಆರೋಪಿಗೆ ಬಿಗಿ ಭದ್ರತೆ!
ಅಭಯಾರಣ್ಯ ದ ರೋಡ್ ಮೈಂಟೇನಸ್ಸ್ ಗುತ್ತಿಗೆ: ಅಭಯಾರಣ್ಯದಲ್ಲಿ ಕೆಲಸ ಮಾಡುವಾಗ ಯಂತ್ರ ಬಳಕೆಗೆ ಸಾಕಷ್ಟು ಟೀಕೆಗೆ ಇಲಾಖೆ ಗುರಿಯಾಗುತ್ತಿದೆ. ಇದರ ನಡುವೆ ರಸ್ತೆಯನ್ನು ಅಭಿವೃದ್ದಿಪಡಿಸುವ ಕೆಲಸವನ್ನು ಖಾಸಗಿ ವ್ಯಕ್ತಿಗಳಿಗೆ ಟೆಂಡರ್ ಮೂಲಕ ವಹಿಸಿಕೊಡಲಾಗಿದೆ. ಗುತ್ತಿಗೆದಾರರು ಅಭಯಾರಣ್ಯದೊಳಗೆ ಜೆಸಿಬಿ ಅನ್ನು ಬಳಸಿ ರಸ್ತೆ ಅಭಿವೃದ್ಧಿ ಪಡಿಸುತ್ತಿದ್ದರು ಕೂಡ ಈ ಬಗ್ಗೆ ಯಾವುದೇ ಆಕ್ಷೇಪವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ವ್ಯಕ್ತಪಡಿಸಿಲ್ಲ. ಹೀಗೆ ತಣಿಗೆಬೈಲು ಪ್ರದೇಶದಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸುವ ವೇಳೆಯಲ್ಲಿ ಕಾಡಾನೆಗಳ ಹಿಂಡು ಅಡ್ಡಿಯಾಗಿದೆ. ವನ್ಯಜೀವಿಗಳ ಸಂಚಾರಕ್ಕೆ ಅವಕಾಶ ನೀಡುವ ಬದಲು ಅದಕ್ಕೆ ಅಡ್ಡಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ತದನಂತರ ಎಚ್ಚೆತ್ತುಕೊಂಡ ಇಲಾಖೆ ಕಾಡಾನೆಗಳ ಭಯ ಕಂಡು ಕೇಕೆ ಹಾಕಿ ಖುಷಿ ಪಟ್ಟ ಜೆಸಿಬಿಯಲ್ಲಿದ್ದೋರು
ಓರ್ವನ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ.
Belgaum Files ಟ್ವೀಟ್ ಮಾಡಿ ಸ್ವಾಭಿಮಾನಿ ಕನ್ನಡಿಗರನ್ನು ಕೆಣಕಿದ ಶಿವಸೇನೆಯ ಸಂಜಯ್ ರಾವತ್
ಅಭಯಾರಣ್ಯದಲ್ಲಿ ಜೆಸಿಬಿ ಯಂತ್ರಗಳ ಬಳಕೆಗೆ ಪರಿಸರವಾದಿಗಳಿಂದ ಆಕ್ಷೇಪ: ಅಭಯಾರಣ್ಯದ ವ್ಯಾಪ್ತಿಯೊಳಗೆ ವನ್ಯಜೀವಿಗಳು ಮುಕ್ತವಾಗಿ ಸಂಚರಿಸಬೇಕು ,ಅವುಗಳಿಗೆ ಯಾರೂ ಕೂಡ ತೊಂದರೆ ಕೊಡಬಾರದು .ಈ ನಿಟ್ಟಿನಲ್ಲಿ ಅಭಯಾರಣ್ಯದ ವ್ಯಾಪ್ತಿಯೊಳಗೆ ಯಾವುದೇ ಕೆಲಸವನ್ನು ಮಾಡುವಾಗ ಅರಣ್ಯ ಇಲಾಖೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು. ಜೆಸಿಬಿ ಸೇರಿದಂತೆ ಯಂತ್ರಗಳ ಬಳಕೆಯನ್ನು ಸಾಧ್ಯವಾದಷ್ಟು ಅವುಗಳಿಂದ ಕೆಲಸ ಮಾಡುವುದಕ್ಕೆ ಬ್ರೇಕ್ ಹಾಕಿ ಮನುಷ್ಯರ ಕೈಯಿಂದಲೇ ಕೆಲಸ ಮಾಡುವತ್ತ ಇಲಾಖೆ ಕ್ರಮಕೈಗೊಳ್ಳಬೇಕು.ಅದು ಬಿಟ್ಟು ವನ್ಯ ಜೀವಿಗಳಿಗೆ ತೊಂದರೆ ಕೊಡುವ ಕೆಲಸವನ್ನುಮಾಡಬಾರದು ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.ಒಟ್ಟಾರೆ ಭದ್ರಾ ಹುಲಿಸಂರಕ್ಷಿತಾರಣ್ಯದಲ್ಲೇ ನಡೆದಿರೋ ಘಟನೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅರಣ್ಯ ಸಿಬ್ಬಂದಿಗಳ ನಿರ್ಲಕ್ಷ್ಯ ಅನ್ನೋ ಪರಿಸರ ವಾದಿಗಳ ಆರೋಪ ಒಂದಡೆಯಾದ್ರೆ ಕಾಡಿನ ಒಳಗೂ ವನ್ಯ ಜೀವಿಗಳಿಗೆ ಅಡ್ಡಿಪಡಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದ್ರೂ ಇಲಾಖೆ ಎಚ್ಚೆತ್ತುಕೊಂಡು ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕಾಗಿದೆ.