ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಏ.18): ಕಾಫಿನಾಡು ಚಿಕ್ಕಮಗಳೂರು ( Chikkamagaluru ) ಜಿಲ್ಲೆಯಲ್ಲಿ ಇಂದು ಜೆಡಿಎಸ್ ಪಕ್ಷದಿಂದ ನಡೆದ ಜನತಾ ಜಲಧಾರೆಗೆ (Janata Jaladhare campaign) ಕಾರ್ಯಕ್ರಮಕ್ಕೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ (HD Kumaraswamy) ಚಾಲನೆ ನೀಡಿದರು. ಭದ್ರಾ ನದಿಯ ತಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭದ್ರಾ ನೀರಿನ್ನು ಸಂಗ್ರಹಿಸಲಾಯಿತು. ರಾಜ್ಯದ 84 ಕಡೆಗಳಿಂದ 17 ವಾಹನಗಳಲ್ಲಿ ನೀರಿನ್ನು ಸಂಗ್ರಹ ಮಾಡಲಾಗುತ್ತಿದೆ . ಇದರ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆಯ ಕಳಸದ ಭದ್ರಾ ನದಿಯ ನೀರಿನ್ನು ಕೂಡ ಸಂಗ್ರಹ ಮಾಡಲಾಯಿತು.
undefined
ಎರಡು ರಾಷ್ಟ್ರೀಯ ಪಕ್ಷಗಳಿಂದ ಜನರಿಗೆ ಅನ್ಯಾಯ : ಎಚ್ ಡಿ ಕುಮಾರಸ್ವಾಮಿ
ರಾಜ್ಯದ ಪಾಲಿನ ನೀರನ್ನು ಬಳಕೆ ಮಾಡುವುದರಲ್ಲಿ ರಾಷ್ಟ್ರೀಯ ಪಕ್ಷಗಳು ಈ ರಾಜ್ಯದ ಜನತೆಗೆ ಅನ್ಯಾಯ ಮಾಡಿವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಜೆಡಿಎಸ್ ಹಮ್ಮಿಕೊಂಡಿದ್ದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ 43 ಉಪ ನದಿಗಳಿವೆ. ಅದರ ನೀರನ್ನು ಬಳಸಿಕೊಂಡು ರೈತರ ನೀರಾವರಿಗೆ ಮತ್ತು ಪ್ರತೀ ಮನೆಗಳಿಗೆ ಕುಡಿಯಲು ಶುದ್ಧ ನೀರನ್ನು ಒದಗಿಸುವುದೇ ಜಲಧಾರೆ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.ರಾಜ್ಯದ ನೀರಾವರಿ ಯೋಜನೆಗಳಿಗೆ 5 ಲಕ್ಷ ಕೋಟಿ ರೂ.ಹಣ ಬೇಕಾಗಿದ್ದು, ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಐದು ವರ್ಷದಲ್ಲಿ ಇದನ್ನು ಹೊಂದಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತೇವೆ. ಆದರೆ ಇದರಲ್ಲಿ ದುಡ್ಡು ಹೊಡೆಯುವ ಕೆಲಸ ನಾವು ಮಾಡುವುದಿಲ್ಲ ಎಂದರು.
Santosh Patil Suicide Case ಆತ್ಮಹತ್ಯೆ ಮಾಡಿಕೊಂಡ ಲಾಡ್ಜಿನಲ್ಲಿ 2ನೇ ಸುತ್ತಿನ ತನಿಖೆ
ಯಾರದರೂ ಒಬ್ಬ ಮಂತ್ರಿ ಪರ್ಸಂಟೇಜ್ ತೆಗೆದುಕೊಂಡರೆ ಅಂತವರನ್ನು ಸಾರ್ವಜನಿಕವಾಗಿ ನೇಣಿಗೆ ಹಾಕುವಂತ ಕೆಲಸ ಮಾಡುತ್ತೇನೆ. ನಮಗೆ ಬೇಕಾಗಿದ್ದು ಹಣವಲ್ಲ ಬದಲಾಗಿ ಬದುಕಿನ ಮೂರು ದಿನದ ಆಟದಲ್ಲಿ ಶಾಶ್ವತವಾಗಿ ಜನರ ಪ್ರೀತಿಯನ್ನು ಗಳಿಸುವುದಾಗಿದೆ ಎಂದರು.ನನ್ನ ಹೋರಾಟ ಸರ್ವಜನಾಂಗದ ಶಾಂತಿಯ ತೋಟ ಮಾಡಲು ಹೊರತು ಬೆಂಕಿ ಹಚ್ಚುವ ಕೆಲಸಕ್ಕೆ ಅಲ್ಲ. ಸಮಾಜ ಸಮಾಜದ ಮದ್ಯೆ ಸಂಘರ್ಷ ಹುಟ್ಟು ಹಾಕಿ ಬಡವರ ಬದುಕನ್ನು ಕಿತ್ತುಕೊಳ್ಳುತ್ತಿದ್ದಾರೆ ಇಂತವರ ಜೊತೆ ಸೇರಿ ನಾನು ಸರ್ಕಾರ ಮಾಡಬೇಕಾ ಎಂದು ಪ್ರಶ್ನಿಸಿದರು.
ಬಿಜೆಪಿಗೆ ಸೀಟು ಗೆಲ್ಲುವ ಚಿಂತೆ, ಕಾಂಗ್ರೇಸ್ ಗೆ ಯಾರನ್ನು ಜೈಲಿಗಟ್ಟುವುದು ಅನ್ನೋ ಚಿಂತೆ
ರಾಜ್ಯದ ಜನರಿಗೆ ಎರಡು ರಾಷ್ಟ್ರೀಯ ಪಕ್ಷಗಳು ಅನ್ಯಾಯ ಮಾಡುತ್ತಿದೆ. ಕೇವಲ ಮತಗೋಸ್ಕರ ರಾಜ್ಯದಲ್ಲಿ ಬೇರೆ ಬೇರೆ ಬೆಳವಣಿಗೆಗಳು ನಡೆಯುತ್ತಿವೆ.ಇದಕ್ಕೆ ಇಡೀ ರಾಜ್ಯದ ಜನರೇ ಸಾಕ್ಷಿ ಯಾಗಿದ್ದು ಕಳೆದ ಎರಡು ತಿಂಗಳಿಂದ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಕೆಲಸಗಳು ನಡೆಯುತ್ತಿವೆ.ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಇಡುವ ಕೆಲಸಗಳು ನಡೆಯುತ್ತಿದ್ದು ಎರಡು ರಾಷ್ಟ್ರೀಯ ಪಕ್ಷಗಳು ಸಣ್ಣತನದ ರಾಜಕೀಯ ಮಾಡುತ್ತಿವೆ ಎಂದು ಕಿಡಿಕಾರಿದ್ರು.
Gadag: ಮಠದ ಹಣವನ್ನೂ ಕಿತ್ತುಕೊಳ್ಳುವ ಇವರನ್ನ ದೇವರೇ ಕಾಪಾಡಬೇಕು: ಹೆಚ್.ಕೆ.ಪಾಟೀಲ್
ರಾಜ್ಯದಲ್ಲಿ ಬಿಜೆಪಿಯವರಿಗೆ 150 ಸೀಟು ಗೆಲ್ಲುವುದು ಹೇಗೆ ಎಂಬ ಚಿಂತೆಯಾದ್ರೆ ಕಾಂಗ್ರೆಸ್ ನವರಿಗೆ ಜೈಲಿಗೆ ಯಾರನ್ನು ಕಳುಹಿಸುವುದು ಅನ್ನೋ ಚಿಂತೆ ಎಂದು ಲೇವಡಿ ಮಾಡಿ ಎರಡು ರಾಷ್ಟ್ರೀಯ ಪಕ್ಷಗಳನ್ನು ಜನರು ತಿರಸ್ಕಾರ ಮಾಡಬೇಕೆಂದು ಜನರಲ್ಲಿ ಮನವಿ ಮಾಡಿದ್ರು. ಜನರು ತಿರಸ್ಕಾರ ಮಾಡಿದ್ದಾಗ ಮಾತ್ರ ನಮ್ಮ ಸಮಾಜದಲ್ಲಿ ಶಾಂತಿಯ ತೋಟವನ್ನು ಎದುರು ನೋಡಬಹುದು ಎಂದರು. ಜೆಡಿಎಸ್ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆ ನೀಡಲಾಗುವುದು.ಶಿಕ್ಷಣ, ಆರೋಗ್ಯ, ರೈತನಿಗೆ ನೆರವು, ಉದ್ಯೋಗ-ವಸತಿ, ಮಹಿಳೆಯರ ಸಬಲೀಕರಣ ಜೆಡಿಎಸ್ ಕನಸು ಎಂದರು.
ಪಿಎಸ್ಐ ಅಕ್ರಮ : ಅಭ್ಯರ್ಥಿಗಳು ಭವಿಷ್ಯದ ಬಗ್ಗೆ ಚೆಲ್ಲಾಟ ಆಗದ ರೀತಿ ಸರ್ಕಾರ ತನಿಖೆ ಮಾಡಲಿ ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಆಗಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಈ ಅಕ್ರಮದಲ್ಲಿ ಬಿಜೆಪಿ ಪಕ್ಷದ ಮಹಿಳೆಯೊಬ್ಬರ ಪಾತ್ರವಿರುವ ಬಗ್ಗೆ ಮಾಹಿತಿ ಇದ್ದು ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ತಿಳಿಸಿದರು. ಪ್ರತಿಭಾನ್ವಿತ, ಪ್ರಾಮಾಣಿಕ ಅಭ್ಯರ್ಥಿಗಳ ಬದುಕಿನಲ್ಲಿ ಚೆಲ್ಲಾಟ ಆಡಬಾರದು ಈ ನಿಟ್ಟಿನಲ್ಲಿ ಸರ್ಕಾರ ತನಿಖೆ ನಡೆಸಿ ಕ್ರಮತೆಗೆದುಕೊಳ್ಳಬೇಕೆಂದರು.
ರಾಮನ ಹೆಸರಲ್ಲಿ ರಾವಣ ರಾಜ್ಯ: ಕುಮಾರಸ್ವಾಮ ಲೇವಡಿ
ರಾಜ್ಯದಲ್ಲಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಬೆಳೆವಣಿಗೆಯನ್ನು ಗಮನಸಿದ್ರೆ ಅಶಾಂತಿ ವಾತಾವರಣ ಎದ್ದು ಕಾಣ್ಣುತ್ತಿದೆ. ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಕೆಲ ಅಮಾಯಕರನ್ನು ಪೊಲೀಸ್ರು ಬಂಧಿಸಿದ್ದಾರೆ. ಈ ಬಗ್ಗೆ ಕೆಲವರು ವಿರೋಧಿಸಿರುವುದಕ್ಕೆ ಕಿಡಿಕಾರಿದ ಕುಮಾರಸ್ವಾಮಿ ವಾಟ್ಸಾಪ್ ಮಾಡಿದ ಯುವಕ ಅಮಾಯಕನಾ.? ನಿಮ್ಮಂತವರಿಂದ ನಾನು ಕಲಿಯಬೇಕಿಲ್ಲ, ನನಗೆ ಜನರ ಬದುಕು ಬೇಕು ಅಲ್ಲದೆ ಕತ್ತಿ ಕಟ್ಕೊಂಡು ರಾಜಕಾರಣ ಮಾಡುವುದಲ್ಲ ಜೊತೆಗೆ ಕತ್ತಿ ಹಿಡ್ಕೊಂಡು ರಾಮನ ಹೆಸರು ಉಳಿಸೋದಲ್ಲ ರಾಮ ಏನ್ ಸಂದೇಶ ಕೊಟ್ಟಿದ್ದಾನೆ, ಮೊದಲು ಮಾನವೀಯತೆ ಕಲಿಯಿರಿ ಎಂದು ಸಲಹೆ ನೀಡಿದರು.
ಸಿಎಂ ಗೆ ನಾಡಿನ ಬಗ್ಗೆ ಗೌರವ ಇದ್ದರೇ ಎಲ್ಲಾ ಧರ್ಮದ ಸ್ವಾಮೀಜಿಗಳ ಸಭೆ ಕರೆಯಲಿ ಅವರ ಸಮುಖದಲ್ಲಿ ಭಾವೈಕ್ಯತೆ ಸರಿಪಡಿಸಿ ಜನತೆಗೆ ಸಂದೇಶ ಕೊಡುವುದು ಸರ್ಕಾರ ಕರ್ತವ್ಯವಾಗಿದೆ ಎಂದರು. ಕೆಲವರು ಬೇರೆ ರಾಜ್ಯದಲ್ಲಿ ನಡೆದ ಬೆಳವಣಿಗೆಯನ್ನು ನಮ್ಮ ರಾಜ್ಯದಲ್ಲಿ ಜಾರಿಯಾಗಲಿ ಎನ್ನುವ ಒತ್ತಯಕ್ಕೆ ಪ್ರತಿಕ್ರಿಯೆ ನೀಡಿ ಉತ್ತರಪ್ರದೇಶ, ಗುಜರಾತ್ ಆಡಳಿತ ಅವಶ್ಯಕತೆ ಇಲ್ಲ ರ್ನಾಟಕದ ಆಡಳಿತ ವಿಶ್ವಕ್ಕೆ ಮಾದರಿಯಾದ ರಾಜ್ಯವಾಗಿದೆ.