ವರದಿ : ಆಲ್ದೂರುಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಎ.8): ಕಾಯೋ ದೇವ್ರೆ ಕೊಲ್ಲೋಕೆ ಅಂತ ನಿಂತ್ರೆ ಬದ್ಕೋದಾದ್ರು ಹೇಗೆ. ಅದ್ರಲ್ಲು ಆ ಕೊಲ್ಲೋನ ಜೊತೆ ಅಧಿಕಾರಿಗಳು ಕೈ ಜೋಡ್ಸುದ್ರಂತು ಮುಗೀತು. ಜನಸಾಮಾನ್ಯರ ಬದುಕು ನೀರ ಮೇಲಿನ ಗುಳ್ಳೆಯಾಗೋದು ಗ್ಯಾರಂಟಿ. ಕಾಫಿನಾಡು ಚಿಕ್ಕಮಗಳೂರಲ್ಲಿ ಆಗಿರೋದು ಅದೇ. ಊರಿನ ಹಿತ ಕಾಪಾಡ್ಬೇಕಾದ ದೇವರೇ ಇಲ್ಲಿ ಶಾಪವಾಗಿದೆ. ಹೊಯ್ಸಳರ (Hoysalas) ಕಾಲದ ತ್ರಿಕೂಟಾಚಲ ಶೈಲಿಯ ವಾಸ್ತುಶಿಲ್ಪ ಎಂದು ವಿಶ್ವಕ್ಕೆ ಪ್ರಸಿದ್ಧವಾಗಿರೋ ಇಲ್ಲಿನ ವೀರನಾರಾಯಣ, ಊರು-ನಾಡಿಗೇನೋ ಕೀರ್ತಿ ತಂದಿದ್ದಾನೆ. ಆದ್ರೆ, ಜನಸಾಮಾನ್ಯರ ಬದುಕಿಗೆ ಮಾರಕವಾಗಿದ್ದಾನೆ.
300 ಮೀಟರ್ ವ್ಯಾಪ್ತಿಯಲ್ಲಿ ಮನೆ ಕಟ್ಟಡದ ಕೆಲಸ ನಿಷೇಧ: ಗ್ರಾಮಸ್ಥರಿಗೆ ನುಂಗಲಾರದ ಬಿಸಿತುಪ್ಪ
ಚಿಕ್ಕಮಗಳೂರು (Chikkamagaluru) ತಾಲೂಕಿನ ಬೆಳವಾಡಿ (Belavadi) ಗ್ರಾಮದಲ್ಲಿರೋ ಹೊಯ್ಸಳರ ಕಾಲದ ತ್ರಿಕೂಟಾಚಲ ಶೈಲಿಯ ವೀರನಾರಾಯಣಸ್ವಾಮಿ (Belavadi Veera Narayana Temple) ದೇವಾಲಯವಿದೆ. ಇಲ್ಲಿಗೆ ನಿತ್ಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಹೊಯ್ಸಳರು ನಿರ್ಮಿಸಿದ ಬೇಲೂರು-ಹಳೇಬೀಡಿಗಿಂತ ಹಳೆಯದ್ದಾಗಿದ್ದು, ಜೈನ ಕೇಂದ್ರವೂ ಆಗಿತ್ತು. ಮೈಸೂರಿನ ಅರಸರು ಈ ಗ್ರಾಮವನ್ನ ಶೃಂಗೇರಿ ಮಠಕ್ಕೆ ಜಹಾಗೀರು ನೀಡಿದ್ರು. ಈ ದೇವಾಲಯವನ್ನ ಪುರಾತತ್ವ ಇಲಾಖೆ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿರೋ ಮಾಡಿರುವ ಪರಿಣಾಮ ವೀರನಾರಾಯಣನೇ ಈ ಬೆಳವಾಡಿಗೆ ಶಾಪವಾಗಿದ್ದಾನೆ.
ಸಿದ್ದರಾಮಯ್ಯನನ್ನು ನಿಮಾನ್ಸ್ ಗೆ ಸೇರಿಸಿದರೆ ಕಾಂಗ್ರೆಸ್ ಉಳಿಯುತ್ತೆ Shobha Karandlaje
ರಾಷ್ಟ್ರೀಯ ಸ್ಮಾರಕವಾಗಿರೋದ್ರಿಂದ ದೇವಾಲಯದ 300 ಮೀಟರ್ ವ್ಯಾಪ್ತಿಯಲ್ಲಿ ಕಟ್ಟಡದ ಕೆಲಸ ನಿಷೇಧವಾಗಿರೋದು ಗ್ರಾಮಸ್ಥರಿಗೆ ನುಂಗಲಾರದ ಬಿಸಿತುಪ್ಪವಾಗಿದೆ. ದೇವಾಲಯದ ಸುತ್ತಲೂ ಅನಾದಿ ಕಾಲದಿಂದಲೂ ಬದುಕ್ತಿರೋ ಜನರು ಒಂದು ಭದ್ರ ಸೂರನ್ನ ನಿರ್ಮಿಸಿಕೊಳ್ಳಲಾಗ್ತಿಲ್ಲ. ಬಿದ್ದೋಗಿರೋ ಮನೆಯನ್ನೂ ದುರಸ್ಥಿ ಮಾಡುವಂತಿಲ್ಲ. ನಮಗೆ ಸ್ಥಳಾಂತರ ಮಾಡಿ ಅಂದ್ರು ಸರ್ಕಾರ ಮಾಡ್ತಿಲ್ಲ. ಇದರಿಂದ ಬೇಸತ್ತಿರೋ ಜನ ದಿನಂಪ್ರತಿ ದೇವರಿಗೆ ಶಾಪ ಹಾಕೊಂಡ್ ಬದುಕ್ತಿದ್ದಾರೆ. ಹೊಸದಿರ್ಲಿ, ಹಳೆಯದ್ದನ್ನೂ ದುರಸ್ಥಿ ಮಾಡಲು ಪಂಚಾಯಿತಿ ಅನುಮತಿ ನೀಡ್ತಿಲ್ಲ.
ಅತ್ಯದ್ಭುತವಾದಂತಹ ಕಲಾಕುಸುರಿ: ಉಗ್ರನರಸಿಂಹ, ವೀರನಾರಾಯಣ ಮೂರ್ತಿ, ಶಿಲಾ ಬಾಲಿಕೆಯರ ಬೆಡುಗು-ಬಿನ್ನಾಣದ ಕಲಾಕುಸುರಿ ನೋಡುಗರನ್ನ ಬೆರಗುಗೊಳಿಸಲಿದೆ. ಆದ್ರೀಗ, ಪುರಾತತ್ವ ಇಲಾಖೆಯ ಅಧೀನದಲ್ಲಿರೋ ಈ ದೇವಾಲಯ 300 ಮೀಟರ್ ವ್ಯಾಪ್ತಿಯಲ್ಲಿ ಮನೆ ನಿರ್ಮಿಸುವಂತಿಲ್ಲ. ಇದರಿಂದ ಮುನ್ನೂರಕ್ಕೂ ಅಧಿಕ ಮನೆಗಳು ಅವನತಿಯ ಹಂತ ತಲುಪಿವೆ. ಹೊಸದಿರ್ಲಿ, ಹಳೆಯದ್ದನ್ನೂ ದುರಸ್ಥಿ ಮಾಡಲು ಪಂಚಾಯಿತಿ ಅನುಮತಿ ನೀಡ್ತಿಲ್ಲ. ಸ್ಥಳಿಯರಿಗೆ ಶಾಪಗ್ರಸ್ಥವಾಗಿರೋ ಕಾನೂನನ್ನ ಸಡಿಲಿಸಬೇಕೆಂಬ ಹೋರಾಟಕ್ಕೂ ಬೆಲೆ ಸಿಕ್ಕಿಲ್ಲ. ಸ್ಥಳಿಯ ಜನಪ್ರತಿನಿಧಿಗಳು ಅಸಹಾಯಕರಾಗಿದ್ದಾರೆ. 300 ಮೀಟರ್ ವ್ಯಾಪ್ತಿಯ ಜನರನ್ನ ಸ್ಥಳಾಂತರಿಸಿ, ಪುನರ್ವಸತಿ ಕಲ್ಪಿಸಬೇಕೆಂಬ ಕೂಗಿಗೂ ಮನ್ನಣೆ ಇಲ್ಲ.
ಯಾದಗಿರಿಯಲ್ಲಿ ಹಿಂದೂಗಳ ನೇತೃತ್ವದಲ್ಲಿಯೇ ಜಮಾಲುದ್ಧಿನ್ ಜಾತ್ರೆ
ಒಟ್ಟಾರೆ, ಕಾಯೋ ದೈವವೇ ಕೊಲ್ಲೋಕೆ ನಿಂತಿರುವಾಗ ಇಂತಹಾ ದೇವರು ನಮಗೆ ಬೇಕಾ ಎಂದು ಗ್ರಾಮಸ್ಥರು ದೇವರ ಬಗ್ಗೆಯೇ ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ. ಆದ್ರೆ, ಸರ್ಕಾರ ಹಾಗೂ ಅಧಿಕಾರಿಗಳು ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸೋದಕ್ಕೆ ಮುಂದಾಗಿದ್ರೆ ಎಲ್ಲರ ಬದುಕೋ ಎಂದೋ ಹಸನಾಗ್ತಿತ್ತು. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕರು ಬಲಿಯಾಗಿದ್ದಾರೆ ಅಂದ್ರು ತಪ್ಪಿಲ್ಲ. ಇನ್ನಾದ್ರು ಸರ್ಕಾರ ಹಾಗೂ ಅಧಿಕಾರಿಗಳು ಇತ್ತ ಗಮನ ಹರಿಸಿ ದಿನಂಪ್ರತಿ ಭಯದಲ್ಲೇ ಬದುಕ್ತಿರೋ ಜನರಿಗೆ ನೆಮ್ಮದಿಯ ಬದುಕು ಕಟ್ಟಿಕೊಡಲಿ ಅನ್ನೋದು ನಮ್ಮ ಆಶಯ.