ಕಸ ಸಂಗ್ರಹದ ಶುಲ್ಕವನ್ನು ದಿಢೀರ್ ಹೆಚ್ಚಳ ಮಾಡಿ ನಗರದ ಜನರ ಆಕ್ರೋಶಕ್ಕೆ ಚಿಕ್ಕಮಗಳೂರು ನಗರಸಭೆ ಗುರಿಯಾಗಿದೆ. ನಗರದಲ್ಲಿ ಕಸ ಸಂಗ್ರಹ ಶುಲ್ಕವನ್ನು ಏಕಾಏಕಿ ಏರಿಸಿದ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಗರಸಭೆಗೆ ಮುತ್ತಿಗೆ ಹಾಕಿದರು.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಏ.20): ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳು ಬೆಲೆ ಏರಿಕೆ ಆಗುತ್ತಿದೆ. ಈಗಾಗಲೇ ಹತ್ತು ಹಲವು ರೀತಿಯಲ್ಲಿ ಬೆಲೆ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಿದೆ. ಇದರ ಬೆನ್ನಲ್ಲೇ ಚಿಕ್ಕಮಗಳೂರು ನಗರಸಭೆ (Chikkamagaluru city municipal council) ಇನ್ನೊಂದು ಬರೆ ಹಾಕಲು ಹೊರಟಿದೆ. ಇದು ಕೂಡ ಕಸ ಸಂಗ್ರಹದ ಶುಲ್ಕ ವನ್ನು ಏಕಾಏಕಿ ಹೆಚ್ಚಳ ಮಾಡಿರುವುದು ನಗರದ ಜನರು ಅಸಮಾಧನಕ್ಕೆ ಕಾರಣವಾಗಿದೆ.
ಕಸ ಸಂಗ್ರಹದ ವಿರುದ್ದ ಕೈ ಪ್ರತಿಭಟನೆ, ನಗರಸಭೆ ಮುಂದೆ ಧರಣಿ: ಚಿಕ್ಕಮಗಳೂರು ನಗರಸಭೆಗೆ ಚುನಾವಣೆ ನಡೆದು ನಾಲ್ಕು ತಿಂಗಳ ಬಳಿಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಏರಿದ ವರಸಿದ್ದ ವೇಣುಗೋಪಾಲ್ ಜನರಿಗೆ ಅನಗತ್ಯ ತೆರಿಗೆ ವಿಧಿಸಿ ಜನರಿಗೆ ಹೊರೆ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸುವೆ. ಈಗಾಗಲೇ ದಿನ ನಿತ್ಯ ಬಳಸುವ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಇದರ ನಡುವೆ ನಗರಸಭೆ ಕಸ ಸಂಗ್ರಹದ ಶುಲ್ಕವನ್ನು ದಿಢೀರ್ ಹೆಚ್ಚಳ ಮಾಡಿ ನಗರದ ಜನರ ಆಕ್ರೋಶಕ್ಕೆ ನಗರಸಭೆ ಗುರಿಯಾಗಿದೆ.
ನಗರದಲ್ಲಿ ಕಸ ಸಂಗ್ರಹ ಶುಲ್ಕವನ್ನು ಏಕಾಏಕಿ ಏರಿಸಿದ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಗರಸಭೆಗೆ ಮುತ್ತಿಗೆ ಹಾಕಿದರು. ನಗರಸಭೆ ಪ್ರವೇಶ ದ್ವಾರದಲ್ಲಿ ಪ್ರತಿಭಟನಾ ಧರಣಿ ನಡೆಸಿದ ಕಾರ್ಯಕರ್ತರು ನಗರ ಸಭೆಯ ವಿರುದ್ದ ಘೋಷಣೆಗಳನ್ನು ಕೂಗಿದ್ರು, ನಗರಸಬೆ ಅಧ್ಯಕ್ಷ ವರಸಿದ್ದ ವೇಣುಗೋಪಾಲ್ ಸರ್ವಾಧಿಕಾರಿ ಎನ್ನುವ ಘೋಷಣೆ ಕೂಗಿ ಆಕ್ರೋಶವನ್ನು ಹೊರಹಾಕಿದರು.
MANGALURU ಪ್ರಾಧ್ಯಾಪಕಿ ಬಗ್ಗೆ ಅಶ್ಲೀಲ ಬರಹ, ಕಾಲೇಜಿನ ಸಂಚಾಲಕ ಸೇರಿ ಸಿಬ್ಬಂದಿ ಬಂಧನ
ತಿಂಗಳಿಗೆ 40 ರೂಪಾಯಿಯಿಂದ 50 ರೂಪಾಯಿಗೆ ಕಸ ಸಂಗ್ರಹ ಶುಲ್ಕ ಏರಿಕೆ: ಕಸ ಸಂಗ್ರಹ ಶುಲ್ಕ ಹೆಚ್ಚಳ ಮಾಡಿರುವುದನ್ನ ವಿರೋಧಿಸಿ ಕಾಂಗ್ರೆಸ್, ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಿತು. ಈಗಾಗಲೇ ಕಸ ಸಂಗ್ರಹ ಶುಲ್ಕ ಹೆಚ್ಚಾಗಿದ್ದು, ಪುನಃ ಮತ್ತೆ ಏರಿಕೆ ಮಾಡಲು ಹೊರಟಿರೋದನ್ನ ವಿರೋಧಿಸಿ ಕಾಂಗ್ರೆಸ್ (Congress) ಕಾರ್ಯಕರ್ತರು ನಗರಸಭೆ ಎದುರು ಧರಣಿ ನಡೆಸಿದ್ರು. ಪ್ರತಿ ಮನೆಯಿಂದ ತಿಂಗಳಿಗೆ 40 ರೂಪಾಯಿ ಕಸ ಸಂಗ್ರಹ ಶುಲ್ಕವನ್ನ ಪಡೆಯುತ್ತಿದ್ದು, 10 ರೂಪಾಯಿ ಏರಿಕೆ ಮಾಡಿ 50 ರೂಪಾಯಿ ವಸೂಲಿ ಮಾಡಲು ಹೊರಟಿರೋದು ಸರಿಯಾದ ಕ್ರಮವಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು. ಅಲ್ಲದೇ ದಿನನಿತ್ಯ ಬೆಲೆ ಏರಿಕೆ ಕೂಡ ಆಗ್ತಿರೋದನ್ನ ಖಂಡಿಸಿ ರಾಜ್ಯ, ಕೇಂದ್ರ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿದ್ರು.
ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏರಿಕೆ: ನಗರಸಭೆಯಲ್ಲಿ ವಿರೋಧ ಪಕ್ಷವಾದ ಕಾಂಗ್ರೇಸ್ ,ಜೆಡಿಎಸ್ ಪಕ್ಷದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಸ ಸಂಗ್ರಹದ ಶುಲ್ಕವನ್ನು ಏರಿಕೆ ಮಾಡಲಾಗಿದೆ. ಪ್ರತಿಪಕ್ಷದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಾಮಾನ್ಯ ಸಭೆಯಲ್ಲಿ ಚರ್ಚಿಸದೆ ಏಕಾಏಕಿ ಶುಲ್ಕ ಏರಿಸುವ ಮೂಲಕ ನಗರಸಭೆ ತುಘಲಕ್ ಆಡಳಿತಕ್ಕೆ ನಾಂದಿ ಹಾಡುತ್ತಿದೆ ಎಂದು ಕಾಂಗ್ರೇಸ್ ಮುಖಂಡರು ಟೀಕಿಸಿದರು.
Haveri ಕೆಜಿಎಫ್ ಪ್ರದರ್ಶನದ ವೇಳೆ ಶೂಟೌಟ್, ಆರೋಪಿ ಪತ್ತೆಗೆ ಪೊಲೀಸರ ಬಲೆ
ನಗರಸಭೆಯಲ್ಲಿ ಧರಣಿ ನಡೆಸುತ್ತಿದ್ದ ಪ್ರತಿಭಟನಾನಿರತ ಮನವಿಯನ್ನು ನಗರಸಭೆ ಆಯಕ್ತ ಬಸವರಾಜ್ ಸ್ವೀಕರಿಸಿದ್ರು, ತದನಂತರ ಮಾತಾಡಿದ ಆಯುಕ್ತರು ನಗರಸಭೆಗೆ ಆಡಳಿತಾಧಿಕಾರಿಗಳು ಇದ್ದ ಸಮಯದಲ್ಲಿ ಕಸ ಸಂಗ್ರಹದ ಶುಲ್ಕ ಹೆಚ್ಚಳದ ಬಗ್ಗೆ ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಲಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಯಾವುದೇ ವಿರೋಧಬಾರದ ಹಿನ್ನಲೆಯಲ್ಲಿ ಶುಲ್ಕ ಹೆಚ್ಚಳವನ್ನು ಮಾಡಲಾಗಿದೆ ಎಂದರು. ಪ್ರತಿಭಟನೆಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಇತರರು ನೇತೃತ್ವ ವಹಿಸಿದರು.